ಬಿಗ್ ಬಾಸ್ ಮನೆಯಲ್ಲಿ ಟೀ ಶರ್ಟ್-ಗುಪ್ತಾಂಗ-ಕಿತ್ತಳೆ ಹಣ್ಣು ಜಗಳ ಮತ್ತೆ ಮತ್ತೆ ಪ್ರತಿಧ್ವನಿ ಮಾಡುತ್ತಿದೆ. ಮನೆ ಮನೆ ಕಥೆ ಟಾಸ್ಕ್ ನಲ್ಲಿ ಸಿಡಿಲು ಮತ್ತು ಸಪ್ತಾಶ್ವ ತಂಡಗಳ ಹಣಾಹಣಿ ಜೋರಾಗಿಯೇ ಇತ್ತು.

ಇಲ್ಲಿಯವರೆಗೆ ಬಿಗ್ಬಾಸ್ ಮನೆಯಲ್ಲಿ ನಡೆದ ಘಟನಾವಳಿಗಳ ಎಲ್ಲ ಸಾರ ಕೇಳಿ ಒಬ್ಬರ ಮೇಲೆ ಒಬ್ಬರು ಪ್ರಶ್ನೆ ಎಸೆದರು.  ಮತ್ತೆ ಕಿತ್ತಳೆ ಹಣ್ಣು ವಿಚಾರದಲ್ಲಿ ನಡೆದ ಟಾಸ್ಕ್ ವಿಚಾರದಲ್ಲಿಯೇ ದೀಪಿಕಾಗೆ ಪ್ರಶ್ನೆ ಎಸೆಯಲಾಗಿತ್ತು. 

ಇದಕ್ಕೂ ಮೊದಲು ಚಂದನ್ ಆಚಾರ್ ಹೆಣ್ಣು ಮಕ್ಕಳ ಮುಂದೆ ಗಂಡಸ್ತನ ತೋರಿಸುವುದು ದೊಡ್ಡ ಕೆಲಸ ಅಲ್ಲ. ಆದರೆ ನಾವು ಹಾಗೆ ಮಾಡುವುದಿಲ್ಲ ಎಂದರು. ಆದರೆ ಇದಕ್ಕೆ ತುಂಬಾ ವಿರೋಧ ವ್ಯಕ್ತವಾಯಿತು. ಸಪ್ತಾಶ್ವ ತಂಡದ ನಾಯಕಿ ದೀಪಿಕಾನೇ ಚಂದನಾ ಆಚಾರ್ ಅವರ  ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಗುಪ್ತಾಂಗ ಎಲ್ಲ ಮುಟ್ಟಂಗಿಲ್ಲ, ನಾಗಿಣಿ ಗರಂ

ದೀಪಿಕಾ ಮತ್ತು ಆರ್ ಜೆ ಪೃಥ್ವಿ ನಡುವೆ ಟಾಕ್ ವಾರ್ ನಡೆಯಿತು. ಹೆಣ್ಣು ಮಕ್ಕಳ ಟೀ ಶರ್ಟ್ ಒಳಗೆ ಕೈ ಹಾಕಲು ಸಾಧ್ಯವೇ? ಹಾಗೆ ಮಾಡಬಹುದಾ ಎಂದು ದೀಪಿಕಾ ವಾದ ಮುಂದಿಟ್ಟರು. ಇದು ಟಾಸ್ಕ್, ಇಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂಬ ತಾರತಮ್ಯ ಇಲ್ಲ. ನಾನು ಟಿ ಶರ್ಟ್ ಒಳಗೆ ಕೈ ಹಾಕಲು ರೆಡಿ. ಆ ಸಂದರ್ಭದಲ್ಲಿ ನಮಗೆಬೇಕಾಗಿದ್ದು ಕಿತ್ತಳೆ ಹಣ್ಣು ಅಷ್ಟೆ ಎಂದು ಆರ್ ಜೆ ಪೃಥ್ವಿ ಹೇಳಿದರು.

ಒಬ್ಬರ ಮೇಲೆ ಒಬ್ಬರು ಮಾತು ಮುಂದುವರಿಸುತ್ತಲೇ ಇದ್ದರು. ಆದರೆ ಇದೆಲ್ಲದರ ಮಧ್ಯೆ ಜೈಜಗದೀಶ್ ಮತ್ತು ಭೂಮಿ ಶೆಟ್ಟಿ ಹಳೆಯ ಟೀ-ಶರ್ಟ್ ಪ್ರಕರಣ ಇಟ್ಟುಕೊಂಡು ವಾದಕ್ಕೆ ಇಳಿದರು.