* ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಕೆಂಡ* ದಿವ್ಯಾ ಸುರೇಶ್ ಮತ್ತು ಮಂಜು ನಾಟಕವಾಡುತ್ತಿದ್ದಾರೆ.* ಕೆಟ್ಟ ಜೋಕ್ ಮಾಡುತ್ತಾರೆ* ಮದುವೆ ಸಂಬಂಧದ ನಾಟಕ ಆಡುವುದಕ್ಕೆ ನನ್ನ ವಿರೋಧ ಇದೆ

ಬೆಂಗಳೂರು( ಜೂ. 27) ಬಿಗ್ ಬಾಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ್ ಕೆಂಡವಾಗಿದ್ದಾರೆ. ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಮೇಲೆ ಕೆಂಡಕಾರಿದ್ದಾರೆ. ಕಾಮಿಡಿಯನ್ ಕ್ರಿಮಿನಲ್ ಆದರೆ ಜಗತ್ತು ಹಾಳಾಗುತ್ತದೆ. ಒಂದು ಹೆಣ್ಣನ್ನು ಆಟಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಮದುವೆಯ ನಾಟಕ ನಡೆದರೆ ನನ್ನ ವಿರೋಧ ಇದೆ. ರಿಯಲ್ ಆಗಿರಬೇಕು. ನನ್ನ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಹಳ್ಳಿಯ ಜನರ ಹೆಸರಿನಲ್ಲಿ, ಹಾಸ್ಯದ ಹೆಸರಿನಲ್ಲಿ ಮಂಜು ಪಾವಗಡ ಕೆಟ್ಟ ಕಾಮಿಡಿ ಮಾಡುತ್ತಿದ್ದೇನೆ. ಇಲ್ಲದ ಸಂಬಂಧಗಳನ್ನು, ಮದುವೆಯ ನಾಟಕವನ್ನು ಆಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸುದೀಪ್ ಎದುರೇ ದೊಡ್ಡ ಜಗಳ 

'ಬೇಲಿ ಪಕ್ಕ ನಡೆಯುವ ಕಾಮವನ್ನು ಪತರವಳ್ಳಿ ಎಂದು ಕರೆಯುತ್ತಾರೆ ಎಂದು ಆರೋಪಿಸಿದರು. ಒಂದು ಹಂತದಲ್ಲಿ ಮಾತು ಮಿತಿ ಮೀರುವ ಹಂತಕ್ಕೆ ತಲುಪಿತ್ತು. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎರಡನೇ ಇನಿಂಗ್ಸ್ ನ ಮೊದಲ ವಾರದಲ್ಲಿ ಕಿಚ್ಚ ಸಹ ಅಷ್ಟೆ ಸಾವಧಾನವಾಗಿ ಮಾತನಾಡಿದರು. ಕೊನೆಯವರೆಗೂ ಸೀಟಿನಲ್ಲಿ ಕುಳಿತಿದ್ದ ಮಂಜು ಪಾವಗಡ ಅವರಿಗೆ ಕಿಚ್ಚ ಸುದೀಪ್ ಚಪ್ಪಾಳೆ ಸಿಕ್ಕಿತು.