ಬಿಗ್ ಬಾಸ್‌ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ ಚಂಬು. ಸುದೀಪ್ ಎದುರು ವಾಗ್ವಾದ. 

ವೀಕೆಂಡ್‌ನಲ್ಲಿ ವಾರದ ಕಥೆಯನ್ನು ಸ್ಪರ್ಧಿಗಳ ಜೊತೆ ಸುದೀಪ್ ಚರ್ಚಿಸುವಾಗ ಟೇಬಲ್‌ ಮೇಲಿದ್ದ ಚಂಬನ್ನು ತೋರಿಸಿ ಇದು ಯಾರಿಗೆ ಸೇರಬೇಕು ಎಂದು ಸ್ಪರ್ಧಿಗಳನ್ನು ಕೇಳಲಾಗುತ್ತದೆ. ನಿಧಿ ಕೈ ಸೇರಿದ ಚಂಬು ಪ್ರಶಾಂತ್‌ಗೆ ತಲುಪಿಸುತ್ತಾರೆ. ಈ ವೇಳೆ ಒಬ್ಬರಿಗೊಬ್ಬರು ಕೊಟ್ಟ ಕಾರಣ ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ. ಆಲ್ಲದೇ ಸುದೀಪ್ ಎದುರೇ ಮಾತಿನ ಚಕಮಕಿಯೂ ನಡೆಯುತ್ತದೆ. 

'ನೀವು ಚೀಪ್' ಎಂದ ನಿಧಿ ಸುಬ್ಬಯ್ಯಗೆ 'ನಿನ್ನ ಚರಿತ್ರೆ ರಿವೀಲ್ ಮಾಡ್ಲಾ?' ವಾರ್ನ್ ಮಾಡಿದ ಪ್ರಶಾಂತ್! 

'ಈ ಚಂಬು ನಾನು ಪ್ರಶಾಂತ್ ಸಂಬರಗಿಗೆ ಕೊಡುತ್ತೇನೆ. ನೋಡಿ ನಾನು ಅವರು ಹೆಸರು ಹೇಳುತ್ತಿದ್ದಂತೆ ಅವರು ಕಣ್ಣಿಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ಅವರು ತುಂಬಾನೇ ಡರ್‌ಪೋಕ್. ಗ್ರೂಪ್‌ನಲ್ಲಿ ಆಟ ವಾಡುವಾಗ ತಾನೊಬ್ಬ ಹೋರಾಟಗಾರ ಅಂತೆಲ್ಲಾ ಮಾತನಾಡುತ್ತಾರೆ. ಆದರೆ ಯಾವತ್ತೂ ಒಬ್ಬರೇ ಬಂದು ಮಾತನಾಡುವುದಿಲ್ಲ. ನಾನು ಹೇಳಿದ್ದು ಕರೆಕ್ಟ್ ಅಂತ ಹೇಳಿದರೆ ಮುಂದೆ ಮಾತನಾಡುವುದಕ್ಕೆ ಅವರಿಗೆ ಪಾಯಿಂಟ್‌ ಇರುವುದಿಲ್ಲ. ಅವರಿಗೆ ನನ್ನ ಭಯ ಇದೆ. ಹುಡುಗರಿಗೆ ಛತ್ರಿ ಹಿಡಿಯುತ್ತಾರೆ, ಬರೀ ಹುಡುಗಿಯರ ಎದುರು ಮಾತ್ರ ಮಾತನಾಡುವುದು. ಮಂಜು ಪವಗಡ ಮತ್ತು ಅರವಿಂದ್ ಅಂದ್ರೆ ಭಯ ಅವರಿಗೆ. ಬೇಕಿದ್ದರೆ ಚಂಬು ಮಾತ್ರವಲ್ಲ, ಬಕೆಟ್ ಹಿಡಿಯುತ್ತಾರೆ. ಅಣ್ಣಯ್ಯ ಅಂದುಕೊಂಡು. ಅದಕ್ಕೆ ಪ್ರಶಾಂತ್‌ಗೆ ಈ ಚಂಬು,' ಎಂದು ನಿಧಿ ಹೇಳುತ್ತಾರೆ.

ನಿಧಿ ಉತ್ತರ ಕೇಳಿ ಪ್ರಶಾಂತ್ ಶಾಕ್ ಆಗುತ್ತಾರೆ. 'ಕೊಚ್ಚೆ ಮೇಲೆ ಕಲ್ಲು ಹಾಕಿದ್ರೆ ನಮ್ಮ ಮೈ ಗಲೀಜಾಗುತ್ತದೆ ಅಂತ ನಾನು ಸುಮ್ಮನೆ ಇರ್ತೀನಿ,' ಎಂದು ಪ್ರಶಾಂತ್ ಉತ್ತರಿಸುವ ಮೂಲಕ ನಿಧಿಗೆ ಟಾಂಗ್ ನೀಡುತ್ತಾರೆ. 

ನಿಧಿ ಸುಬ್ಬಯ್ಯ ಖಾತೆಯಲ್ಲಿ ಮದುವೆ ಫೋಟೋ ಡಿಲೀಟ್; ಡಿವೋರ್ಸ್‌ ಆಗಿದ್ಯಾ? 

ಸೀಸನ್‌ 8 ಅರಂಭದಿಂದಲೂ ನಿಧಿ ಮತ್ತು ಪ್ರಶಾಂತ್ ಸಂಬರಗಿ ಹಾವು ಮುಂಗುಸಿ ರೀತಿ ಆಟವಾಡುತ್ತಿದ್ದಾರೆ ಇಬ್ಬರೂ ಒಂದು ತಂಡದಲ್ಲಿದ್ದರೆ, ಟಾಸ್ಕ್ ಸೋಲುತ್ತಾರೆ ಹೊರತು, ಗೆಲ್ಲುವುದಿಲ್ಲ. ಈ ಹಿಂದೆ ಅವರ ನಡುವೆ ಆದ ಜಗಳದಿಂದ ಪ್ರಶಾಂತ್ ಉಪವಾಸ ಮಾಡಿದ್ದರು. ಆದರೆ ನಿಧಿ ಕಾಂಪ್ರಮೈಸ್ ಆದ ನಂತರ ಉಪವಾಸಕ್ಕೆ ಬ್ರೇಕ್ ಹಾಕಿದ್ದರು.