Bigg Boss Kannada Season 9: ಬಿಗ್‌ಬಾಸ್ ಮನೆಗೆ ಕಾಲಿಟ್ಟ ಒಟ್ಟು 18 ಸ್ಪರ್ಧಿಗಳ ಪಟ್ಟಿ ಇಲ್ಲಿದೆ
ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿಯುತ್ತಿದ್ದಂತೆ ಟಿವಿ ಬಿಗ್ ಬಾಸ್ ಸೀಸನ್ 9 ಆರಂಭವಾಗಿದೆ. ಒಟ್ಟು 18 ಜನ ಈ ಬಾರಿ ಬಿಗ್ ಬಾಸ್ ಗೆ ಕಾಲಿಟ್ಟಿದ್ದಾರೆ. ಯಾರೆಲ್ಲ ಸ್ಪರ್ಧಿಗಳು ಇದ್ದಾರೆ ಎಂಬ ಪಟ್ಟಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿಯುತ್ತಿದ್ದಂತೆ ಟಿವಿ ಬಿಗ್ ಬಾಸ್ ಸೀಸನ್ 9 ಆರಂಭವಾಗಿದೆ. ಒಟ್ಟು 18 ಜನ ಈ ಬಾರಿ ಬಿಗ್ ಬಾಸ್ ಗೆ ಕಾಲಿಟ್ಟಿದ್ದಾರೆ. ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದರೊಂದಿಗೆ 14 ಜನ ಇತರ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಹಳೆ ಸೀಸನ್ ನಲ್ಲಿ ಭಾಗವಹಿಸಿದ ಪ್ರವೀಣರು ಮತ್ತು ನವೀನರು ಈ ಬಾರಿ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸೀಸನ್ 9ಕ್ಕೆ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮೊದಲ ಸೀಸನ್ ನ ರನ್ನರ್ ಅಪ್ ಆಗಿರುವ ನಟ ಅರುಣ್ ಸಾಗರ್ ಎಂಟ್ರಿ ಕೊಟ್ಟಿದ್ದಾರೆ. ಬರೋಬ್ಬರಿ 9 ವರ್ಷ 6 ತಿಂಗಳ ನಂತರ ಬಿಗ್ ಬಾಸ್ ಮನೆಗೆ ಮತ್ತೆ ಬಂದಿರುವುದು ವಿಶೇಷವಾಗಿದೆ. ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಮೂರನೇ ಸ್ಪರ್ಧಿಯಾಗಿ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬಂದ ದೀಪಿಕಾ ದಾಸ್, ನಾಲ್ಕನೇ ಸ್ಪರ್ಧಿಯಾಗಿ ಹೊಸ ಮುಖ, ಸಿನೆಮಾ ರಿವ್ಯೂ ಮಾಡುವ ನವಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಐದನೇ ಸ್ಪರ್ಧಿಯಾಗಿ ಸೀಸನ್ 8 ರಲ್ಲಿ ಕಮಾಲ್ ಮಾಡಿದ್ದ ದಿವ್ಯಾ ಉರುಡುಗ ಮತ್ತೆ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರನ್ನು ಬೀಳ್ಕೊಡಲು ಸೀಸನ್ 8ರ ಸ್ಪರ್ಧಿ ಅರವಿಂದ್ ಕೆಪಿ ಬಂದಿದ್ದು ವಿಶೇಷವಾಗಿತ್ತು.
ಇನ್ನು ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಮಾಡೆಲ್, ನಟ ಜೊತೆಗೆ ಉದ್ಯಮಿ ದರ್ಶ್ ಚಂದ್ರಪ್ಪ ಬಂದಿದ್ದಾರೆ. ಸೀಸನ್ 8 ರಲ್ಲಿ ತನ್ನ ಕಠಿಣವಾದ ಮಾತುಗಳಿಂದ ವೀಕ್ಷಕರಿಗೆ ಇಷ್ಟವಾಗಿದ್ದ ಪ್ರಶಾಂತ್ ಸಂಬರಗಿ ಮತ್ತೊಮ್ಮೆ ಸೀಸನ್ 9ಕ್ಕೂ ಬಂದಿದ್ದಾರೆ. ಕಮಲಿ ಸೀರಿಯಲ್ ನಿಂದ ಫೇಮಸ್ ಆಗಿರುವ ನಟಿ ಅಮೂಲ್ಯ ಗೌಡ 8 ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿಯಲ್ಲಿ ಫೇಮಸ್ ಆಗಿರುವ ಸಾನ್ಯಾ ಅಯ್ಯರ್ ಮತ್ತು ಮಂಗಳೂರಿನ ಪ್ರತಿಭೆ ರೂಪೇಶ್ ಶೆಟ್ಟಿ ಜೊತೆಯಾಗಿ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಬಂದಿದ್ದಾರೆ.
11 ನೇ ಸ್ಪರ್ಧಿಯಾಗಿ ಹಾಸ್ಯ ನಟ, ಕಿರುತೆರೆ ಕಲಾವಿದ ವಿನೋದ್ ಗೊಬ್ಬರಗಾಲ ಎಂಟ್ರಿ ಕೊಟ್ಟರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ನಿಂದ ಪ್ರಸಿದ್ದಿ ಪಡೆದ ನಟಿ ನೇಹಾಗೌಡ 12 ನೇ ಸ್ಪರ್ಧಿಯಾಗಿದ್ದಾರೆ. 13 ಸ್ಪರ್ಧಿಯಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಎಂಟ್ರಿ ಕೊಟ್ಟರೆ. 14 ಮತ್ತು 15ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಒಟಿಟಿಯಿಂದ ಬಂದಿರುವ ರಾಕೇಶ್ ಅಡಿಗ ಮತ್ತು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಎಂಟ್ರಿಕೊಟ್ಟಿದ್ದಾರೆ.
ಇನ್ನು 16ನೇ ಸ್ಪರ್ಧಿಯಾಗಿ ಬೈಕರ್ ಐಶ್ವರ್ಯ ಪಿಸೆ ಎಂಟ್ರಿ ಕೊಟ್ಟಿದ್ದಾರೆ. 17 ನೇ ಸ್ಪರ್ಧಿಯಾಗಿ ಮಂಗಳಗೌರಿ ಸೀರಿಯಲ್ ನಲ್ಲಿ ಫೇಮಸ್ ಆಗಿರುವ ನಟಿ ಕಾವ್ಯಶ್ರೀ ಗೌಡ ಎಂಟ್ರಿ ಕೊಟ್ಟರೆ 18 ಮತ್ತು ಕೊನೆಯ ಸ್ಪರ್ಧಿಯಾಗಿ ನಿರೂಪಕಿ, ನಟಿ ಅನುಪಮಾ ಗೌಡ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.ಒಟ್ಟಾರೆಯಾಗಿ ಕನ್ನಡ ಬಿಗ್ ಬಾಸ್ 9ನೇ ಆವೃತ್ತಿಯ 18 ಸ್ಪರ್ಧಿಗಳಲ್ಲಿ 9 ಪ್ರವೀಣರು ಮತ್ತು 9 ನವೀನರರು ಯಾರೆಂಬ ಪಟ್ಟಿ ಇಲ್ಲಿದೆ:
ಪ್ರವೀಣರು:
ಅರುಣ್ ಸಾಗರ್
ದೀಪಿಕಾ ದಾಸ್
ದಿವ್ಯಾ ಉರುಡುಗ
ಪ್ರಶಾಂತ್ ಸಂಬರ್ಗಿ
ರೂಪೇಶ್ ಶೇಟ್ಟಿ
ಸಾನ್ಯಾ ಅಯ್ಯರ್
ಅನುಪಮಾ ಗೌಡ
ಆರ್ಯವರ್ಧನ್ ಗುರೂಜಿ
ರಾಕೇಶ್ ಅಡಿಗ
ನವೀನರು
ನಟಿ ಮಯೂರಿ
ನವಾಜ್
ದರ್ಶ್ ಚಂದ್ರಪ್ಪ
ನಟಿ ಅಮೂಲ್ಯ ಗೌಡ
ವಿನೋದ್ ಗೊಬ್ರಗಾಲ
ನಟಿ ನೇಹಾ ಗೌಡ
ಬೈಕರ್ ಐಶ್ವರ್ಯ ಪಿಸೆ
ರೂಪೇಶ್ ರಾಜಣ್ಣ
ನಟಿ ಕಾವ್ಯಶ್ರೀ ಗೌಡ