Asianet Suvarna News Asianet Suvarna News

BBK9: ಎರಡನೇ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್

ಬಿಗ್ ಬಾಸ್ ಕನ್ನಡ ಸೀಸನ್ 9 ಮೊದಲ ವಾರ  ಮುಗಿದಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 17 ಮಂದಿ ಸ್ಪರ್ಧಿಗಳು ಸದ್ಯ ಬಿಗ್ ಬಾಸ್ ಮನೆಯೊಳಗಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ.

Bigg Boss Kannada Season 9 second week Elimination nomination list here gow
Author
First Published Oct 3, 2022, 11:57 PM IST

ಬಿಗ್ ಬಾಸ್ ಕನ್ನಡ ಸೀಸನ್ 9 ಮೊದಲ ವಾರ  ಮುಗಿದಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 18 ಮಂದಿ ಸ್ಪರ್ಧಿಗಳಲ್ಲಿ ಮೊದಲ ವಾರ ಮನೆಯಿಂದ ಐಶ್ವರ್ಯ ಪಿಸ್ಸೆ ಅವರು ಔಟ್ ಆಗಿದ್ದರು. ಮನೆಯಿಂದ ಹೊರಹೋಗುವ ಮುನ್ನ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದಲ್ಲಿ ಐಶ್ವರ್ಯ ಪಿಸ್ಸೆ ಅವರು ಆರ್ಯವರ್ಧನ್ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಮಾಡಿದ್ದರು. ಇವರನ್ನು ಹೊರತುಪಡಿಸಿ ಎರಡನೇ ವಾರ ಮನೆಯಿಂದ ಹೊರಹೋಗಲು ದರ್ಶ್ ಚಂದ್ರಪ್ಪ, ನವಾಜ್, ಮಯೂರಿ, ಅಮೂಲ್ಯಾ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ, ನೇಹಾ ಗೌಡ ಅವರನ್ನು ಸ್ಪರ್ಧಿಗಳು ಆಯ್ಕೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ ಅವರು ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದಲ್ಲಿ ರೂಪೇಶ್ ರಾಜಣ್ಣ ಅವರನ್ನು ನೇರವಾಗಿ ನಾಮೀನೇಟ್ ಮಾಡಿದರು. ಹೀಗಾಗಿ ಎರಡನೇ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ. ಸದ್ಯ ಮನೆಯಲ್ಲಿ 17 ಮಂದಿ ಸ್ಪರ್ಧಿಗಳಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರು ಹೊರಹೋಗುತ್ತಾರೆ ಎಂಬುದನ್ನು ಕಾದು ನೋಡ ಬೇಕಿದೆ.

ಈ ಬಾರಿ ಬಿಗ್ ಬಾಸ್ ನಲ್ಲಿ ನವೀನರು ಮತ್ತು ಪ್ರವೀಣರು ಎಂಬ ಕಥಾವಸ್ತು ಮೂಲಕ ಶೋ ನಡೆಯುತ್ತಿದ್ದು, 9 ಮಂದಿ ಹಳೆ ಸ್ಪರ್ಧಿಗಳು ಮತ್ತು 9 ಮಂದಿ ಹೊಸ ಸ್ಪರ್ಧಿಗಳನ್ನು ಮನೆಯೊಳಗಡೆ ಕಳುಹಿಸಲಾಗಿದೆ. ಈಗಾಗಲೇ ಒಬ್ಬರು ನಾಮಿನೆಟ್ ಆಗಿದ್ದು, ನವೀನರು ಲಿಸ್ಟ್ ನಿಂದ ಐಶ್ವರ್ಯಾ ಪಿಸೆ ಅವರು ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ನಲ್ಲಿ ಇರುವ ನವೀನರು ಮತ್ತು ಪ್ರವೀಣರ ಪಟ್ಟಿ ಇಂತಿದೆ.

ಪ್ರವೀಣರು:
ಅರುಣ್ ಸಾಗರ್
ದೀಪಿಕಾ ದಾಸ್
ದಿವ್ಯಾ ಉರುಡುಗ
ಪ್ರಶಾಂತ್ ಸಂಬರ್ಗಿ
ರೂಪೇಶ್ ಶೆಟ್ಟಿ
ಸಾನ್ಯಾ ಅಯ್ಯರ್
ಅನುಪಮಾ ಗೌಡ
ಆರ್ಯವರ್ಧನ್ ಗುರೂಜಿ
ರಾಕೇಶ್ ಅಡಿಗ

Bigg Boss Kannada season 9: ಮೊದಲವಾರ ಮನೆಯಿಂದ ಬೈಕರ್ ಐಶ್ವರ್ಯಾ ಔಟ್!

ನವೀನರು:
ನಟಿ ಮಯೂರಿ
ನವಾಜ್
ದರ್ಶ್ ಚಂದ್ರಪ್ಪ
ನಟಿ ಅಮೂಲ್ಯ ಗೌಡ
ವಿನೋದ್ ಗೊಬ್ರಗಾಲ 
ನಟಿ ನೇಹಾ ಗೌಡ
ರೂಪೇಶ್ ರಾಜಣ್ಣ
ನಟಿ ಕಾವ್ಯಶ್ರೀ ಗೌಡ

BBK9; ಅವನ ಮನೆ ಆಳಾ, ಕಪಿ, ಬಿಗ್ ಮನೆಯಲ್ಲಿ ತಾರಕಕ್ಕೇರಿದ ಮರ್ಯಾದೆ ಜಗಳ, ಕಣ್ಣೀರಿಟ್ಟ

ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. 

Follow Us:
Download App:
  • android
  • ios