ಇದೇನ್ ಗುರು ಹುಡ್ಗೀರ್ ಜೊತೆ ಬಿಗ್ ಬಾಸ್ ಫ್ಲರ್ಟ್ ಮಾಡ್ತಾವ್ರೆ?; ನಮ್ರತಾ ಗೌಡ ಮಾತ್ರವಲ್ಲ ಎಲ್ಲರೂ ಶಾಕ್!
ಆರಂಭವಾಗಿ ಮೂರೇ ದಿನವಾಗಿರುವುದು ಅಷ್ಟರಲ್ಲಿ ಸ್ವತಃ ಬಿಗ್ ಬಾಸ್ ಫ್ಲರ್ಟ್ ಮಾಡ್ತಾರೆ ಅಂದ್ರೆ ಸುಮ್ಮನೆನಾ?
ಬಿಗ್ ಬಾಸ್ ಸೀಸನ್ 10ರ ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಆರಂಭವಾಗಿದೆ. ಅರ್ಹತೆ ಇಲ್ಲದ ಸ್ಪರ್ಧಿಗಳಿಗೆ ನಾಲಾಯಕ್ ಎಂದು ಬೋರ್ಡ್ ಹಾಕಿ ಮನೆಯಲ್ಲಿ ಅಸಮರ್ಥರು ಕಿಡಿ ಹೆಚ್ಚಿಸಿದ್ದಾರೆ. ಕ್ಯಾಪ್ಟನ್ ಗೇಮ್‌ನಿಂದ ಹೊರ ಇರುವುದಕ್ಕೆ ಇಶಾನಿ ಕಣ್ಣೀರಿಟ್ಟಿದ್ದಾರೆ. ಆದರೆ ವಿನಯ್ ಗೌಡ, ಸ್ನೇಹಿತ್, ನಮ್ರತಾ ಗೌಡ, ತುಕಾಲಿ ಸಂತೋಷ್, ಭಾಗ್ಯಶ್ರೀ ಸ್ಪರ್ಧಿಸಿದ್ದಾರೆ. ಮೊದಲು ಟಾಸ್ಕ್ ಮುಗಿಸಿದ ಸ್ನೇಹಿತ್, ತುಕಾಲಿ ಸಂತೋಷ್ ಮತ್ತು ನಮ್ರತಾ ಫೈನಲ್ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗಿದ್ದರು.
ಒಂದು ದೊಡ್ಡ ಚಕ್ರದಲ್ಲಿ ಎರಡು ಪೈಪ್‌ಗಳನ್ನು ಹಿಡಿದುಕೊಂಡು ಹೆಚ್ಚು ಹೊತ್ತು ಯಾರು ನಿಲ್ಲುತ್ತಾರೋ ಅವರೇ ಬಿಬಿ ಮನೆಯ ಕ್ಯಾಪ್ಟನ್ ಆಗುತ್ತಾರಂತೆ. ಸ್ನೇಹಿತ್, ತುಕಾಲಿ ಸಂತೋಷ್ ಮತ್ತು ನಮ್ರತಾ ಗೌಡ ಸ್ಪರ್ಧಿಸುತ್ತಿದ್ದರು. ಸೊಂಟ ನೋವುತ್ತಿದ್ದ ಕಾರಣ ನಮತ್ರಾ ಕಣ್ಣೀರಿಟ್ಟಿದ್ದಾರೆ. ನಮ್ರತಾ ಕಣ್ಣೀರು ಹಾಕೋದು ಯಾವ ಸ್ಪರ್ಧಿ ಕಣ್ಣಿಗೂ ಬೀಳಲಿಲ್ಲ ಅದು ಬಾಸ್‌ಗೆ ಗೊತ್ತಾಯಿತ್ತು. ಹೀಗಾಗಿ ಕಣ್ಣೀರಿಡಲು ಕಾರಣ ಏನೆಂದು ಬಾಸ್ ಪ್ರಶ್ನೆ ಮಾಡಿದಾಗ ಸೊಂಟ ನೋವು ಎಂತ ಹೇಳಿದ್ದಾರೆ.
ಎಂಟ್ರಿ ಕೊಡುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡ ಹಿಟ್ಲರ್:ಬಿಗ್ ಬಾಸ್ ಒಳೆಗೆ ಎಂಟ್ರಿ ಕೊಟ್ಟ ಪ್ರಥಮ್!
'ಇದು ಕ್ಯಾಪ್ಟನ್ ಟಾಸ್ಕ್ ಹಾಗಾಗಿ ಕಷ್ಟ ಇರುತ್ತದೆ. ನಿಮ್ಮ ಆಟವನ್ನು ಬಿಟ್ಟುಕೊಡುತ್ತೀರಾ' ಎಂದು ಬಿಬಿ ಪ್ರಶ್ನೆ ಮಾಡಿದ್ದಾಗ. ಆಗ ನಮ್ರತಾ 'ಇಲ್ಲ' ಎಂದು ಹೇಳಿ ಧೈರ್ಯ ಮಾಡಿ ಚಾಲೆಂಜ್ ಮಾಡಲು ಸ್ಟ್ರಾಂಗ್ ಆಗುತ್ತಾರೆ. 'ನಮ್ರತಾ ಅವರೇ ನಿಮ್ಮ ನಗು ಚೆನ್ನಾಗಿದೆ ನಿಮ್ಮ ಸುಂದರ ನಗುವಿನ ರಹಸ್ಯೆ ಏನು?' ಎಂದು ಪ್ರಶ್ನೆ ಮಾಡಿದ್ದಾರೆ ಬಿಬಿ. 'ನನ್ನ ಜೊತೆ ಫ್ಲರ್ಟ್ ಮಾಡಿದ ಮೊದಲ ಪುರುಷ ಅದು ಬಿಗ್ ಬಾಸ್' ಎನ್ನುತ್ತಾರೆ. ಬಿಗ್ ಬಾಸ್ ಮಾತುಗಳನ್ನು ಕೇಳಿ ನಮ್ರತಾ ಮುಖದಲ್ಲಿ ಮಂದಹಾಸ ಮೂಡಿತ್ತು ಖುಷಿಯಿಂದ ಮಾತನಾಡಲು ಆರಂಭಿಸಿದರು. ಅಲ್ಲದೆ 'ನನಗೆ ಬಿಗ್ ಬಾಸ್ ವಾಯ್ಸ್ ಅಂದರೆ ತುಂಬಾ ಇಷ್ಟ. ನನ್ನ ನಗುವಿಗೆ ನೀವೇ ಕಾರಣ ಬಿಗ್ ಬಾಸ್' ಎಂದು ಸಮತ್ರಾ ಹೇಳಿ ಮತ್ತೊಮ್ಮೆ ನಕ್ಕಿದ್ದಾರೆ.
ಯಾಕಮ್ಮ ಇಷ್ಟೊಂದು ದಪ್ಪ ಆಗಿದ್ಯಾ, ಗುರುತೇ ಸಿಗಲ್ಲ; 'ಕನ್ನಡತಿ' ಕಾಲೆಳೆದ ನೆಟ್ಟಿಗರು!
ಇದನ್ನು ಗಮನಿಸಿದ ವೀಕ್ಷಕರು ಅಯ್ಯೋ ಇದೇನ್ ಗುರು ಈ ಸಲ ಬಿಗ್ ಬಾಸ್ ಹುಡುಗಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ ಅಲ್ಲಿರುವ ಹುಡುಗರ ಕಥೆನೇ? ಅಥವಾ ಹೊರಗಿರುವ ಹುಡುಗರಿಗೆ ಹಾರ್ಟ್ ಬ್ರೇಕ್ ಆಗಲ್ವಾ ಎಂದು ಟ್ರೋಲ್ ಮಾಡಿದ್ದಾರೆ.