ಯಾಕಮ್ಮ ಇಷ್ಟೊಂದು ದಪ್ಪ ಆಗಿದ್ಯಾ, ಗುರುತೇ ಸಿಗಲ್ಲ; 'ಕನ್ನಡತಿ' ಕಾಲೆಳೆದ ನೆಟ್ಟಿಗರು!
ಡ್ಯಾನ್ಸ್ ಮಾಡುತ್ತಿರುವ ರೀಲ್ಸ್ ಪೋಸ್ಟ್ ಮಾಡಿ ಟ್ರೋಲ್ ಆದ ಕಿರುತೆರೆ ನಟಿ ರಮೋಲಾ. ದಪ್ಪ ಎಂದವರಿಗೆ ಕ್ಲಾಸ್...
ಕಲರ್ಸ್ ಕನ್ನಡ ಕನ್ನಡತಿ ಧಾರಾವಾಹಿ ಮೂಲಕ ಸಾನ್ಯಾ ಆಗಿ ಜನರಿಗೆ ಪರಿಚಯವಾದ ರಮೋಲಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಕನ್ನಡತಿ ಧಾರಾವಾಹಿ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. ವಿಲನ್ ಆಗಿ ರಮೋಲಾ ಮಿಂಚಿದ್ದರು. ಬಳಿಕ ಆ ಧಾರಾವಾಹಿಯಿಂದ ರಮೋಲಾ ಹೊರನಡೆದರು.
ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಧಾರಾವಾಹಿಯಿಂದ ಹೊರಹೋದರು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಹತ್ತಿರವಾಗಿದ್ದರು.
ರಮೋಲಾ ಸದ್ಯ ರಿಚ್ಚಿ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ರಿಚ್ಚಿ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ.
ಇನ್ನು ರಮೋಲಾ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಅಯ್ಯೋ ಇದೇನು ಇಷ್ಟು ದಪ್ಪ ಆಗಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಮೋಲಾ ಯಾವುದಕ್ಕೂ ರಿಪ್ಲೈ ಕೊಟ್ಟಿಲ್ಲ ಆದರೆ ರಮೋಲಾ ಅಭಿಮಾನಿಗಳು ನಮ್ಮ ನಟಿ ಬಗ್ಗೆ ಕಾಮೆಂಟ್ ಹಾಗೆ ಕಾಮೆಂಟ್ ಮಾಡಬೇಡಿ ಹೆಣ್ಣು ಮಕ್ಕಳಿಗೆ ಬಾಡಿ ಶೇಮಿಂಗ್ ಮಾಡಬೇಡಿ ಎಂದಿದ್ದಾರೆ.