ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ವೀಕ್ಷಕರು ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಬಂದು ಮಾತನಾಡಲಿ ಎಂದು ಕಾಯುತ್ತಿರುತ್ತಾರೆ. ಕಳೆದ ವಾರ ಮಿಸ್‌ ಆಗಿತ್ತು, ಈ ವಾರ ಸುದೀಪ್‌ ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ. ಹಾಗಾದರೆ ಏನದು? 

ಮಾರ್ಕ್‌ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದ ಕಿಚ್ಚ ಸುದೀಪ್‌ ಅವರು ಕಳೆದ ವಾರ ವೀಕೆಂಡ್‌ ಎಪಿಸೋಡ್‌ಗಳನ್ನು ನಡೆಸಿಕೊಡಲಿಲ್ಲ. ಈ ವಾರ ಕಿಚ್ಚ ಸುದೀಪ್‌ ಅವರು ಈ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಂದು ವೀಕ್ಷಕರು ಕಲರ್ಸ್‌ ಕನ್ನಡ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಚರ್ಚೆ ಮಾಡಬೇಕಾದ ವಿಷಯಗಳಿವು

  • ಸ್ಪರ್ಧಿಗಳ ಕುಟುಂಬದವರು 6 ಮತಗಳನ್ನು ಗಿಲ್ಲಿ ನಟನಿಗೆ ಕೊಟ್ಟಿದ್ದರೂ ಅಶ್ವಿನಿ ಅವರ ಜೊತೆಗೆ ಸ್ಪರ್ಧೆ, ಟಾಸ್ಕ್ ಕೊಟ್ಟಿದ್ದು ಯಾಕೆ?
  • ಸ್ವತಂತ್ರವಾದ ಕ್ಯಾಪ್ಟನ್ಸಿಯನ್ನು ಗಿಲ್ಲಿಗೆ ಯಾಕೆ ಕೊಡಲಿಲ್ಲ?
  • ಗಿಲ್ಲಿ ಟಾಸ್ಕ್‌ನಲ್ಲಿ ಗೆದ್ದರೂ ರಾಣಿ ನೆಪದಲ್ಲಿ ಅಶ್ವಿನಿ ಅವರನ್ನು ಪರೋಕ್ಷವಾಗಿ ಕ್ಯಾಪ್ಟನ್ ಮಾಡಿದ್ದು ಯಾಕೆ?
  • ಈ ಅಶ್ವಿನಿ ಧ್ರುವಂತ್ ಅವರ ಇತ್ತೀಚಿಗೆ ಬಹಳ ದುರಹಂಕಾರದ ಮಾತುಗಳು‌, ಬೇಕು ಅಂತ ಗಿಲ್ಲಿನ ಟಾರ್ಗೆಟ್ ಮಾಡುತ್ತ ಇರೋದು ಯಾಕೆ?
  • ಅಶ್ವಿನಿ ಧ್ರುವಂತ್ ಸೇರಿಕೊಂಡು ಗಿಲ್ಲಿನ ಟಾರ್ಗೆಟ್ ಮಾಡಿದ ಬಗ್ಗೆ..

  • ಅಶ್ವಿನಿ ತನಗೆ ಕೊಟ್ಟ ಕೆಲಸ ನಿಭಾಯಿಸಲು ಆಗದೇ ಕುಂಟು ನೆಪ ಹೇಳಿ, ಗಿಲ್ಲಿ ಜೊತೆ ಜಗಳ ಆಡಿದ್ದು..ತನಗೆ ಮಾತ್ರ ಬಹುವಚನ ಬೇಕು...ಆದ್ರೆ ಗಿಲ್ಲಿಗೆ ಬಾಯಿಗೆ ಬಂದಂತೆ ಹೇಳುವುದು
  • ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸೂಚಿಸಲ್ಪಟ್ಟು ಆಯ್ಕೆಯಾಗಿದ್ದ ಎಲ್ಲ ಸ್ವರ್ದಿಗಳು ಗಳಿಸಿರುವ ಮತಗಳ ವಿವರಗಳನ್ನು ಬಹಿರಂಗಪಡಿಸಬೇಕು. ಯಾಕೆಂದರೆ ಈಗಾಗಲೇ ಬಿಗ್ ಬಾಸ್ ಶೋನಿಂದ ಹೊರ ಹೋಗಿರುವ ಸ್ವರ್ದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ವೀಕ್ಷಕರಿಗೊ ಸ್ಪಷ್ಟನೆ ಬೇಕು
  • ರಾಶಿಕಾಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡಬೇಕು... ಧ್ರುವಂತ್ ಗಿಲ್ಲಿಗೆ ಆಟದಲ್ಲಿ ಮೋಸ ಮಾಡಿದ್ದು...ಗಿಲ್ಲಿ ಕಾವ್ಯಗೆ ಫೇವರಿಸಂ ಮಾಡಿದ್ದು... ಅಶ್ವಿನಿ ಅವ್ರಿಗೆ ಅಷ್ಟು ಹೇಳಿದ್ರು ಅವ್ರ ಅತಿರೇಕದ ವರ್ತನೆ
  • ಗಿಲ್ಲಿಗೆ ಕಾವು ಇಂದ ದೂರ ಇರು ಅಂತ ಬುದ್ದಿ ಹೇಳಿ ಸಾಕು

  • ಅಶ್ವಿನಿಯವರ ಕೆಳ ಮಟ್ಟದ ಕೆಟ್ಟ ಬಾಷೆ ಮತ್ತು ದುರಂಕಾರದ ಮಾತುಗಳು
  • ಗಿಲ್ಲಿ ನಟರಾಜ್ ಅವರ ಅತಿರೇಕದ ನಡವಳಿಕೆ, ಮಾತುಗಳು.
  • ಅಶ್ವಿನಿ ಅವರ ಎಲ್ಲೆ ಮೀರಿದ ಮಾತುಗಳು.
  • Druvanth ಮತ್ತು ರಕ್ಷಿತಾ ಅವರ ಅತಿರೇಕದ ನಡವಳಿಕೆ, ನಿಯಮ ಉಲ್ಲಂಘನೆ.

  • ಧನುಷ್, ಕಾವ್ಯ ಶೈವ, ರಾಶಿಕಾ ಶೆಟ್ಟಿ, ಧ್ರುವಂತ್‌, ಅಶ್ವಿನಿ ಇವರೆಲ್ಲರೂ ರಕ್ಷಿತಾರನ್ನು ತುಂಬಾ rag ಮಾಡ್ತಿದಾರೆ. ಅವರಿಗೆ ರಕ್ಷಿತಾ ಮೇಲೆ ಹೊಟ್ಟೆ ಕಿಚ್ಚು ಬಂದು, ಹಿಂಸೆ ಮಾಡ್ತಿದಾರೆ. ಸುದೀಪ್ ಇವರಿಗೆ ಬುದ್ದಿ ಹೇಳಬೇಕು. ರಘು ಗಿಲ್ಲಿ ರಕ್ಷಿತಾ ಇವರು ಫಿನಾಲೆಗೆ ಬರುವುದು. ಬೇರೆಯವರು ತಮ್ಮ ಅದೃಷ್ಟದ ಮೇಲೆ ಗೆಲ್ಲಬೇಕು. ಕಮ್ಯುನಿಕೇಷನ್ ಒಂದೇ ರಕ್ಷಿತಾಳ ನ್ಯೂನತೆ.
  • ನಾಮಿನೆಷನ್ ಬಗ್ಗೆ ಚರ್ಚೆ ಮಾಡಬಾರದು ಅಂತ ಅಶ್ವಿನಿಗೆ ಎಷ್ಟು ಬಾರಿ ಹೇಳಿದ್ರು ಧ್ರುವಂತ್ ಹಾಗು ಅಶ್ವಿನಿ ಚರ್ಚೆ ಮಾಡಿದ್ದು.
  • ಗಿಲ್ಲಿ ಅವಕಾಶ ಸಿಕ್ಕ ಕಡೆಯೆಲ್ಲವೂ ಕಾವ್ಯ ಶೈವ ಅವರನ್ನು ಸೇವ್‌ ಮಾಡಿದ್ದಾರೆ
  • ಕಾಮಿಡಿ ನೆಪದಲ್ಲಿ ಗಿಲ್ಲಿ ಪದೇ ಪದೇ ರಕ್ಷಿತಾಳನ್ನು ಹಂಗಿಸುವುದು, ಮಾಳು ಸೂರಜ್ ಹೋಗಲು ರಕ್ಷಿತಳೇ ಕಾರಣ, ತಾನು ಟಾಸ್ಕ್ ಸೋಲಲು ರಕ್ಷಿತ ಕಾರಣ ಎಂದು ಪದೇ ಪದೇ ತಮಾಷೆ ಮಾಡುವುದು

  • ಕಾವ್ಯ ಅವರನ್ನು ಮನೆಯವರು ಹೊರಗಿನ ವಿಚಾರಗಳನ್ನು ತಿಳಿಸಿದ ನಂತರ ಅವಳನ್ನು ಉಳಿಸಿಕೊಂಡಿರುವುದರ ಬಗ್ಗೆ, ವಿಚಾರ ಅರ್ಥ ಆಗಿದ್ದರನ್ನು ಏನಾಯಿತು ಎಂದು ಗೊತ್ತೇ ಇಲ್ಲ ಎನ್ನುವಂತೆ ನಾಟಕ ಮಾಡಿದುದರ ಬಗ್ಗೆ, ಮತ್ತೊಮ್ಮೆ ಅವರ ಮನೆಯವರು ಬಂದದ್ದು ಬಿಗ್‌ ಬಾಸ್ ನಿರ್ಧಾರ ತಪ್ಪು ಎನ್ನುವುದರ ಬಗ್ಗೆ, ಸ್ಪಂದನ 100% ಸೇಫ್ ಆಗಲು ಸಾದ್ಯವಿಲ್ಲ. ಮನೆ ಮಕ್ಕಳನ್ನು ಉಳಿಸಿಕೊಳ್ಳುತ್ತಿರುವುದರ ಬಗ್ಗೆ ಮಾತಾಡಬೇಕು. ಜೊತೆಗೆ‌ ಕಳೆದ ವಾರ ವೋಟಿಂಗ್ ರಿವಿಲ್ ಮಾಡಬೇಕು.
  • ಜೊತೆಗೆ ಧ್ರುವಂತ್ ಪರ್ಸನಲ್ ವಿಚಾರಗಳನ್ನು ಹೀಯಾಳಿಸಿ ಮಾತನಾಡುವುದರ ಬಗ್ಗೆ
  • ಗಿಲ್ಲಿ ಈ ಸಲ ಕ್ಯಾಪ್ಟನ್ ಆಗಿ ಕಾವ್ಯಾಳನ್ನು ನಾಮಿನೇಟ್ ಮಾಡಲಿಲ್ಲ. ಈ ಸಲ ಅಲ್ಲ, ಗಿಲ್ಲಿ ಯಾವತ್ತೂ ಕಾವ್ಯಾಳನ್ನು ನಾಮಿನೇಟ್ ಮಾಡಿಲ್ಲ. ಮಾಡೋದು ಇಲ್ಲ.
  • ಸ್ಪಂದನಾಳನ್ನು ಕಾವ್ಯ ಎಂದಿಗೂ ಯಾಕೆ ನಾಮಿನೇಟ್‌ ಮಾಡೋದಿಲ್ಲ?
  • ಈ ಮನೆಗೆ ಕಾವ್ಯ ಶೈವ ಕೊಡುಗೆ ಏನು?

  • ಕಾವ್ಯ ಶೈವಳಿಗೆ ಗಿಲ್ಲಿ ನಟ ಫೇವರ್‌ ಮಾಡ್ತಿರೋದು ನಿಜವೇ?
  • ಅಶ್ವಿನಿ ಪ್ರೀತಿ ಕೊಟ್ಟರೂ ಕೂಡ ಗಿಲ್ಲಿ ನಟ ಅವರು ಚುಚ್ಚುವ ಮಾತಾಡೋದು ಯಾಕೆ?
  • ರಕ್ಷಿತಾ ನಿರ್ಧಾರ ಕೆಲವೊಮ್ಮೆ ಧ್ರುವಂತ್‌, ಅಶ್ವಿನಿಗೆ ಇಷ್ಟ ಆಗುತ್ತವೆ
  • ಅಶ್ವಿನಿ ಗೌಡಗೆ ಸರ ಮರಳಿ ಕೊಟ್ಟು, ರಕ್ಷಿತಾ ಫಸ್ಟ್ ಥ್ಯಾಂಕ್ಸ್‌ ಹೇಳಿಲ್ಲ‌, ಯಾಕೆ?
  • ಮುದುಕಿ, ವಿಗ್‌, ಹಲ್ಲು ಸೆಟ್‌ ಅಂತ ಹೇಳೋದು ಬಾಡಿ ಶೇಮಿಂಗ್‌ ಆಗೋದಿಲ್ವಾ?
  • ಸೊಂಟ ಇಲ್ಲ, ಸ್ಪೈನಲ್‌ ಕಾರ್ಡ್‌ ಮುರಿದು ಹೋಗಿದೆ ಎಂದು ಹೇಳೋದು ಸರಿಯೇ?
  • ಸ್ಪಂದನಾ ಮನೆಯಿಂದ ಹೊರಹೋಗಬೇಕು ಅಂತ ರಕ್ಷಿತಾ ಕಾಯ್ತಿದ್ದಾರೆ, ನಿಜವೇ?
  • ಸುದೀಪ್‌ ಸರ್‌ ಬೈತಾರೆ ಅಂತ ಗಿಲ್ಲಿ ರೆಡಿಯಾಗಿದ್ದಾರೆ, ತಪ್ಪು ಮಾಡಿದ್ದಾರೆ ಅಂತ ಗಿಲ್ಲಿಗೆ ಭರವಸೆಯೇ?
  • ಹಣೆಬರಹ ಸರಿ ಇಲ್ಲ ಎಂದು ಗಿಲ್ಲಿ ನಟ ಬೇಸರ ಮಾಡಿಕೊಂಡ್ರು