Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಸ್ಪಂದನಾ ಸೋಮಣ್ಣ ಅವರು ರೊಚ್ಚಿಗೆದ್ದು, ರಕ್ಷಿತಾ ಶೆಟ್ಟಿ ವಿರುದ್ಧ ಜಗಳ ಆಡಿದ್ದಾರೆ. ಹಾಗಾದರೆ ಏನಾಯ್ತು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರಿಗೆ ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಅವರನ್ನು ಕಂಡರೆ ಆಗೋದಿಲ್ಲ. ಈಗಾಗಲೇ ಈ ಮೂವರ ವಿರುದ್ಧ ಸಾಕಷ್ಟು ಮನಸ್ತಾಪ ಇದೆ, ಜಗಳ ನಡೆಯುತ್ತಲೇ ಇದೆ. ಈಗ ಸ್ಪಂದನಾ ಅವರು ರೊಚ್ಚಿಗೆದ್ದಿರೋದು ಸಾಕಷ್ಟು ಕುತೂಹಲ ನಡೆದಿದೆ.
ಸದ್ಯ ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಅಲ್ಲಿ ಸ್ಪಂದನಾ, ರಕ್ಷಿತಾ ಜಗಳ ಆಡಿರೋದು ಕಂಡಿದೆ. ಈ ವಾರ ಕೊನೆಯ ಎಲಿಮಿನೇಶನ್‌ನಲ್ಲಿ ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಇದ್ದರು, ಆಗ ಸ್ಪಂದನಾ ಉಳಿದುಕೊಂಡರು, ಮಾಳು ಎಲಿಮಿನೇಟ್ ಆದರು. ಹೊರಗಡೆ ಬಂದಿರುವ ಮಾಳು ನಿಪನಾಳ ಕೂಡ ಸಂದರ್ಶನಗಳಲ್ಲಿ, “ನಾನು ಬೆಟರ್ ಇದ್ದೆ, ಸ್ಪಂದನಾ ಮನೆಯಲ್ಲಿ ಕಾಣಿಸುತ್ತಿರಲಿಲ್ಲ, ಅವರು ಎಲಿಮಿನೇಟ್ ಆಗಿದ್ದಾರೆ, ನಾನು ಹೊರಗಡೆ ಬಂದಿರೋದು ಆಶ್ಚರ್ಯ ತಂದಿದೆ” ಎಂದು ಹೇಳಿದ್ದಾರೆ.
ಏನು ಸಂಭಾಷಣೆ ನಡೆಯಿತು?
ಟಾಸ್ಕ್‌ವೊಂದರಲ್ಲಿ ರಕ್ಷಿತಾ ಶೆಟ್ಟಿ ಅವರು “ವ್ಯಕ್ತಿತ್ವದಲ್ಲಿ ಸ್ಪಂದನಾ ಸೋಮಣ್ಣನಿಗಿಂತ ಮಾಳು ಅಣ್ಣನೇ ಬೆಸ್ಟ್” ಎಂದು ಹೇಳಿದ್ದಾರೆ. ಇದನ್ನು ಕೇಳಿ ಸ್ಪಂದನಾ ಸೋಮಣ್ಣ ಅವರು ರೊಚ್ಚಿಗೆದ್ದಿದ್ದಾರೆ.
“ನನ್ನ ಅಭಿಪ್ರಾಯವನ್ನು ನಿಮಗೆ ಪ್ರಶ್ನೆ ಮಾಡಲು ನಿಮಗೆ ಯಾರೂ ಅಧಿಕಾರ ಕೊಟ್ಟಿಲ್ಲ” ಎಂದುʻ ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.
“ಮನೆಯಲ್ಲಿ ನಿನ್ನ ಅಭಿಪ್ರಾಯಕ್ಕಿಂತ, ನನ್ನ ಅಭಿಪ್ರಾಯವನ್ನು ನಾನು ಹಾಗೆ ಕೊಡಬಹುದು. ಬೇರೆಯವರನ್ನು ಬಿಂಬಿಸೋದು, ಆಡೋದು. ಮಾಳು ಅಣ್ಣ ಮನೆಗೆ ಹೋಗೋಕೆ ನೀನೆ ಕಾರಣ. ಅರ್ಧ ಆಟವನ್ನು ಆಡದೆ, ಮನೆಗೆ ಹೋದರೆ ನನಗೆ ಖುಷಿ ಆಗುತ್ತದೆ” ಎಂದು ಸ್ಪಂದನಾ ಆಡಿದ್ದಾರೆ.
“ನಿನ್ನ ಆಟವನ್ನು ಮೂರು ವಾರದಿಂದ ಜನರು ನೋಡುತ್ತಲಿದ್ದಾರೆ” ಎಂದು ಕಾವ್ಯ ಶೈವ ಹೇಳಿದ್ದಾರೆ.
ಕೆಲವು ವಾರಗಳಿಂದ ಕಾವ್ಯ ಶೈವ, ಸ್ಪಂದನಾ ಸೋಮಣ್ಣ ಟಾಸ್ಕ್‌ನಲ್ಲಿ ಸೋಲಬೇಕು, ಹೊರಗಡೆ ಹೋಗಬೇಕು ಎಂದು ರಕ್ಷಿತಾ ಅವರು ಪ್ರಯತ್ನಪಟ್ಟಿದ್ದರು, ಸೀಕ್ರೆಟ್ ರೂಮ್‌ನಲ್ಲಿ ಇದು ಎದ್ದು ಕಂಡಿತ್ತು. ರಕ್ಷಿತಾ ಪ್ರಯತ್ನಕ್ಕೆ ಬೆಲೆ ಸಿಗದೆ, ಕಾವ್ಯ ಕ್ಯಾಪ್ಟನ್ ಆದರು.
ಇನ್ನೇನು ಮನೆಗೆ ಹೋಗಬೇಕಿದ್ದ ಸ್ಪಂದನಾ ಉಳಿದುಕೊಂಡಿರೋದು ಕೂಡ ಆಶ್ಚರ್ಯ ತಂದಿದೆ. ಅಂದಹಾಗೆ ಇಷ್ಟುದಿನಗಳಲ್ಲಿ ಒಮ್ಮೆ ಧ್ರುವಂತ್ ಜೊತೆ ಜಗಳ ಆಡಿದ್ದ ಸ್ಪಂದನಾ ಈಗ ರೊಚ್ಚಿಗೆದ್ದಿರೋದು ಎಲ್ಲರಿಗೂ ಅಚ್ಚರಿ ತಂದಿದೆ. ಮುಂದಿನ ವಾರ ಉಳಿದುಕೊಳ್ಳಬೇಕು, ಫಿನಾಲೆಗೆ ಹೋಗಬೇಕು ಎಂದು ಸ್ಪಂದನಾ ಹೀಗೆ ಜಗಳ ಆಡಿದ್ರಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.


