Bigg Boss Kannada Kavya Shaiva: ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರು ಸ್ನೇಹಿತರು. ಇವರಿಬ್ಬರ ಮಧ್ಯೆ ಜಗಳ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಗಿಲ್ಲಿಯನ್ನು ಅವಾಯ್ಡ್ ಮಾಡುತ್ತಿದ್ದ ಕಾವ್ಯ ಶೈವ ಅವರು ಬೇಕಾದಾಗ ಯೂಸ್ ಮಾಡಿಕೊಳ್ತಾರೆ ಎಂಬ ಆರೋಪ ಕೇಳಿ ಬಂದಿದೆ.
Bigg Boss Kannada Season 12 Update: ಅಶ್ವಿನಿ ಗೌಡ ಅವರು ಯಾವ ಘಳಿಗೆಯಲ್ಲಿ ಕಾವ್ಯ ಶೈವ ಅವರು ಪ್ರಿ ಪ್ರೊಡಕ್ಟ್ ಎಂದು ಹೇಳಿದರೋ, ಅದನ್ನು ಅವರು ಅಲ್ಲಿಂದ ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಹೌದು, ಕಾವ್ಯ ಶೈವ ಮೇಲೆ ಗಿಲ್ಲಿ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.
ಕಾವ್ಯ ಮನಸ್ಸಿಗೆ ಬೇಸರ
ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ಅವರು ಕಾವ್ಯರನ್ನು ರೇಗಿಸುತ್ತಾರೆ. ಕಳೆದ ವಾರ ಕೂಡ ಕಾವ್ಯ ಇನ್ನೂ ಸರ್ಕಲ್‌ನಲ್ಲಿದ್ದಾರೆ ಎಂದಿದ್ದರು. ಇದು ಕಾವ್ಯ ಮನಸ್ಸಿಗೆ ಬೇಸರ ತಂದಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆಗಿದೆ.
ಟಾಪ್ 6 ಹೋಗಬೇಕು
ಕಾವ್ಯ ಶೈವ ಅವರು ಗಿಲ್ಲಿ ನಟನ ಜೊತೆ ಮಾತನಾಡಿಲ್ಲ. ಆಗ ಗಿಲ್ಲಿ ಕೂಡ ಕಾವ್ಯಳಿಗೆ ಟಾಂಟ್ ಕೊಡುತ್ತಲೇ ಇದ್ದರು. ಮಿಡ್ ವೀಕ್ ಎಲಿಮಿನೇಶನ್ ಹತ್ತಿರ ಇದೆ, ಟೈಮ್ ಬಂದಿದೆ ಎಂದು ಕೂಡ ಹೇಳಿದ್ದರು. ನನ್ನ ಟಾಸ್ಕ್‌ನಲ್ಲಿ ಮಣ್ಣು ಹಾಕಬೇಡ, ನಾನು ಟಾಪ್ 6 ಹೋಗಬೇಕು ಎಂದು ಕಾವ್ಯ ಶೈವ ಅವರು ಗಿಲ್ಲಿಗೆ ಹೇಳಿದ್ದರು.
ಗಿಲ್ಲಿ ಭರ್ಜರಿ ಆಟ
ಈ ವಿಚಾರಕ್ಕೂ ಕೂಡ ಕಾವ್ಯ ಶೈವ ಅವರನ್ನು ಗಿಲ್ಲಿ ರೇಗಿಸಿದ್ದುಂಟು. ಇನ್ನು ಟವರ್ ಟಾಸ್ಕ್‌ನಲ್ಲಿ ಕೂಡ ಕಾವ್ಯ ಅವರು ಗಿಲ್ಲಿಗೆ ಬೆಂಬಲ ಕೊಡ್ತೀಯಾ ಎಂದು ಹೇಳಿದ್ದರು. ಗಿಲ್ಲಿಗೆ ಅನಾರೋಗ್ಯ ಆಗಿತ್ತು. ಫಿಸಿಕಲ್ ಟಾಸ್ಕ್ ಮಾಡೋದಿಲ್ಲ ಎಂದು ಎಲ್ಲರೂ ಹೇಳಿದರೂ ಕೂಡ ಗಿಲ್ಲಿ ಇದನ್ನೇ ಚಾಲೆಂಜ್ ಆಗಿ ತಗೊಂಡು ಕಾವ್ಯ ಗೆಲ್ಲಲು ಸಹಾಯ ಮಾಡಿದ್ದರು. ಇದರಿಂದ ಕಾವ್ಯ ಗೆದ್ದರೂ, ಗಿಲ್ಲಿಗೆ ಏನೂ ಸಿಕ್ಕಿಲ್ಲ.
ಬೇಕಾದಾಗ ಯೂಸ್ ಮಾಡಿಕೊಳ್ತಾರೆ
ಆಟದ ವೇಳೆ ಗಿಲ್ಲಿ ಬೇಗ ಓಡ್ತಿಲ್ಲ, ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಯುತ್ತಿಲ್ಲ, ಕೋಲು ಎತ್ತಿಕೊಂಡು ಬರ್ತಿಲ್ಲ ಎಂದು ಕಾವ್ಯ ಶೈವ ಕೂಗಾಡಿದ್ದಾರೆ, ಕಿರುಚಿದ್ದಾರೆ, ಆ ಹಾವಭಾವಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಕೆಟ್ಟ ಪ್ರಪಂಚ, ಬೇಕಾದಾಗ ಯೂಸ್ ಮಾಡಿಕೊಳ್ತಾರೆ ಎಂದು ಕಾವ್ಯ ಅವರನ್ನು ಟ್ರೋಲ್ ಮಾಡಲಾಗ್ತಿದೆ.
ಧನುಷ್ ಗೌಡ, ಕಾವ್ಯ ಶೈವ ಚರ್ಚೆ
ಗಿಲ್ಲಿ ನಟ ಪ್ರೀತಿ ಅಂತಾನೆ, ತಾಳಿ ಕಟ್ತೀನಿ ಅಂತಾನೆ, ಬ್ರಾಸ್‌ಲೈಟ್ ಹಾಕಿದ್ದಕ್ಕೆ ಎಂಗೇಜ್‌ಮೆಂಟ್ ಅಂತಾನೆ. ಅವನು ಪದೇ ಪದೇ ಕೈ ಹಿಡಿದುಕೊಳ್ತಾನೆ ಎಂದು ಗಿಲ್ಲಿ ನಟನ ವಿರುದ್ಧ ಧನುಷ್ ಗೌಡ ಅವರು ಕಾವ್ಯ ಶೈವ ಬಳಿ ಹೇಳಿಕೊಂಡಿದ್ದರು. ಇನ್ನು ಕಾವ್ಯ ಕೂಡ ಗಿಲ್ಲಿ ಬಗ್ಗೆ ಮಾತನಾಡಿದ್ದರು.


