ಶೀಘ್ರದಲ್ಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ, ಕಲರ್ಸ್‌ನ ಈ 3 ಸೀರಿಯಲ್ ಮತ್ತು ಶೋಗಳು ಮುಕ್ತಾಯ!

ಬಿಗ್‌ಬಾಸ್‌ ರಿಯಾಲಿಟಿ ಶೋ ನ 11 ಆವೃತ್ತಿಗೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆಯಂತೆ ಅದಕ್ಕೆ ಪೂರಕ ಎಂಬಂತೆ ಕಲರ್ಸ್ ಕನ್ನಡದಲ್ಲಿ ಅನೇಕ ಶೋ ಮತ್ತು ಸೀರಿಯಲ್‌ಗಳು ಮುಕ್ತಾಯವಾಗುತ್ತಿದೆ.

bigg boss kannada season 11 starting  soon many show and serials ends in colors kannada gow

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್‌ಬಾಸ್‌ ರಿಯಾಲಿಟಿ ಶೋನ 10ನೇ ಆವೃತ್ತಿ ಮುಗಿದು ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದು ಈಗ ಇತಿಹಾಸ. ಇದೀಗ ಬಿಗ್‌ಬಾಸ್‌ ರಿಯಾಲಿಟಿ ಶೋ ನ 11 ಆವೃತ್ತಿಗೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ ಎಂದು ಗಾಸಿಪ್ ಎದ್ದಿದೆ. 

ಅದಕ್ಕೆ ಪೂರಕ ಎಂಬಂತೆ ಕಲರ್ಸ್ ಕನ್ನಡದಲ್ಲಿ ಸಾಲು ಸಾಲು ಕಾರ್ಯಕ್ರಮಗಳು ಮುಕ್ತಾಯದ ಹಂತ ತಲುಪಿದೆ. ಬಿಗ್‌ಬಾಸ್‌ ಆರಂಭಕ್ಕೆ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಅದಕ್ಕೂ ಮುನ್ನ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಸಲು ಭರ್ಜರಿ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆ ವೀಕೆಂಡ್ ಕಾರ್ಯಕ್ರಮಗಳಾದ ಗಿಚ್ಚಿಗಿಲಿ ಗಿಲಿ ಸೀಸನ್ 3 ಮತ್ತು ರಾಜಾ ರಾಣಿ ಕೂಡ ಬಿಗ್‌ಬಾಸ್‌ ನಡೆಸಲು ದಿನ ಹತ್ತಿರ ಬಂದಂತೆ ಮುಗಿಯಲಿದೆ.

ಇನ್ನು ಧಾರವಾಹಿಗಳಾದ ಕರಿಮಣಿ, ಅಂತರಪಟ ಮತ್ತು ಕೆಂಡಸಂಪಿಗೆಯನ್ನು ಕೂಡ ಮುಗಿಸಲು ತಯಾರಿ ನಡೆದಿದೆ ಎಂದು ಗಾಸಿಪ್ ಇದೆ. ಕಡಿಮೆ ಟಿಆರ್‌ಪಿ ಬರುತ್ತಿರುವ ಧಾರವಾಹಿಯನ್ನು ಮುಗಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಬಿಗ್‌ಬಾಸ್‌ ಸೀಸನ್‌ 10 ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟು ಕಲರ್ಸ್ ಕನ್ನಡ ಮತ್ತು ಬಿಗ್‌ಬಾಸ್‌ ನಡೆಸುವ ಪ್ರೊಡಕ್ಷನ್ ಹೌಸ್‌ಗೆ ಭಾರೀ ಲಾಭ ತಂದುಕೊಟ್ಟಿತ್ತು. ಅದಲ್ಲದೆ ಅತೀ ಹೆಚ್ಚು ಕಾಂಟ್ರವರ್ಸಿ ಆಗಿತ್ತು ಕೂಡ. ಇದೇ ಹುಮ್ಮಸ್ಸಿನಲ್ಲಿರುವ ಬಿಗ್‌ಬಾಸ್‌ ಟೀಂ ಈಗ ಸೀಸನ್‌ 11ಕ್ಕೆ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದೆ. 

ಇಲ್ಲಿವರೆಗೆ ಒಂದೇ ಬಾರಿ ಬಿಗ್‌ಬಾಸ್ ಓಟಿಟಿ ಸೀಸನ್ ನಡೆದಿದೆ. ಈ ಬಾರಿ ಓಟಿಟಿ ಸೀಸನ್ 2 ನಡೆಯಬಹುದು ಎಂದು ಹೇಳಲಾಗುತ್ತಿದೆ. ಬಿಬಿಕೆ ಸೀಸನ್ 9ಕ್ಕೆ ಮುಂಚೆ ಮೊದಲ ಓಟಿಟಿ ಸೀಸನ್ ನಡೆದಿತ್ತು. ಬಿಬಿಕೆ10 ನೇ ಸೀಸನ್ ನಲ್ಲಿ ಓಟಿಟಿ ಶೋ ನಡೆದಿರಲಿಲ್ಲ.

ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!

ಇನ್ನು ಬಿಬಿಕೆ ಸೀಸನ್‌ 10ರವರೆಗೆ ಕಿಚ್ಚ ಸುದೀಪ್‌ ನಿರೂಪಣೆ ನಡೆಸಿಕೊಟ್ಟಿದ್ದರು. ಮಾತ್ರವಲ್ಲ 10 ಸೀಸನ್‌ ನಡೆಸಿ ಕೊಡಲು ಮಾಡಿರುವ ಒಪ್ಪಂದ ಕೂಡ ಕಳೆದ ಸೀಸನ್ ಗೆ ಮುಗಿದಿದೆ. ಹೀಗಾಗಿ ಈ ಬಾರಿ ಸೀಸನ್‌ 11ರಲ್ಲಿ ಕಿಚ್ಚ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ಅನುಮಾನವಿದೆ.

ಸೀಸನ್‌ 11 ಅನ್ನು ಇದೇ ಅಕ್ಟೋಬರ್‌ನಲ್ಲಿ ತಿಂಗಳಿನಿಂದ ಪ್ರಸಾರ ಮಾಡಲು ತಂಡ ಯೋಚಿಸಿದೆಯಂತೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ. ಅದಲ್ಲದೆ ಪ್ರತೀ ಬಾರಿಯೂ ಅಕ್ಟೋಬರ್‌ ನಲ್ಲೇ ಬಿಗ್‌ಬಾಸ್‌ ಆರಂಭವಾಗುತ್ತಿದೆ.

ಇದೆಲ್ಲದರ ನಡುವೆ ಈ ಬಾರಿ ಯಾರು ಸ್ಪರ್ಧಿಗಳಿರಬಹುದು ಎಂಬ ಬಗ್ಗೆಯೂ ಲೆಕ್ಕಾಚಾರ ಆರಂಭವಾಗಿದೆ. ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಮುಖಗಳು, ಟ್ರೋಲ್‌ಗಳಿಗೆ ತುತ್ತಾಗಿರುವ ವಿವಾದಾತ್ಮಕ ವ್ಯಕ್ತಿಗಳು, ಸಿನಿಮಾ, ಕಿರುತೆರೆ ಜತೆಗೆ ಕಾಮನ್‌ ಮ್ಯಾನ್‌ ಕೂಡ ಈ ಬಾರಿಯ ಬಿಬಿಕೆಯಲ್ಲಿ ಇರಬಹುದು ಎನ್ನಲಾಗಿದೆ. ಕಳೆದ ಸೀಸನ್‌ನಲ್ಲಿ  ನಟ 'ಲವ್ ಗುರು' ತರುಣ್ ಚಂದ್ರ, ಕಾಮಿಡಿ ನಟ ಚಂದ್ರಪ್ರಭ, ಸಿಂಗರ್ ಆಶಾ ಭಟ್‌, ಹುಚ್ಚ ಸಿನೆಮಾದ ನಟಿ ರೇಖಾ, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ಹೆಸರು ಕೇಳಿಬಂದಿತ್ತು. ಆದರೆ ಅವರ್ಯಾರು ಸೀಸನ್‌ 10ಕ್ಕೆ ಬರಲಿಲ್ಲ. ಈ ಬಾರಿಯಾದರೂ ಬರುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios