ಡ್ರೋನ್ ವಿಷಯ ಮತ್ತೆ ಎಳೆದು ತಂದ ವಿನಯ್-ಸ್ನೇಹಿತ್, ಸಂದೇಹಗಳಿಗೆ ಬೆಚ್ಚಿಬಿದ್ರಾ ಪ್ರತಾಪ್?

ಬೇರೆ ಒಂದು ಕಡೆ ನಿಂತಿರುವ ಕಾರ್ತಿಕ್ ಮತ್ತು ರಕ್ಷಕ್ ನಡುವೆ ಸಂಭಾಷಣೆ ನಡೆದಿದೆ. ರಕ್ಷಕ್ 'ಅವ್ರೆಲ್ಲ ಸೇರಿ ಅವ್ನ ಇಂಟರ್‌ವ್ಯೂ ಮಾಡ್ತಿದಾರೆ. ಸುಮ್ನೆ ಕೆಲಸ ಇಲ್ದೇ ಇವ್ನು ತಾನೇ ಹೋಗಿ ಸಿಕ್ಕಾಕೊಂಡಿದಾನೆ. ಇವತ್ತು ಅವ್ನ ಸರಿಯಾಗಿ ರುಬ್ಬತಾರೆ ನೋಡಿ' ಎಂದ ರಕ್ಷಕ್‌ಗೆ ಕಾರ್ತಿಕ್ 'ಹೌದಾ, ಯಾಕೆ?' ಎಂದು ಕೇಳಿದ್ದಾರೆ.

Vinay Gowda and Snehith Gowda targets Drone prathap in Bigg Boss Kannada 10 srb

ಬಿಗ್ ಬಾಸ್ ಕನ್ನಡ ಸೀಸನ್ 10 ಶೋದ ಬಿಗ್ ಬಾಸ್ ಮನೆಯಲ್ಲಿ ಡ್ರೋಣ್ ಪ್ರತಾಪ್‌ನ ಸಂದರ್ಶನ ನಡೆಯುತ್ತಿದೆಯಾ? ಹೀಗೊಂದು ಅನುಮಾನ ಕಾಡಲು ಕಾರಣವಾಗಿದೆ ಸ್ವಲ್ಪ ಹೊತ್ತಿಗೂ ಮೊದಲು ಬಿಡುಗಡೆ ಆಗಿರುವ ಪ್ರೋಮೋ. ಹೌದು, ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆಫೀಸಿಯಲ್ ಆಗಿ ಹರಿಬಿಟ್ಟಿರುವ ಪ್ರೊಮೋ ನೋಡಿದರೆ, ಡ್ರೋನ್ ಪ್ರತಾಪ್ ಸಂದರ್ಶನವೋ ಅಥವಾ ಒಂದು ಗುಂಪು ಬಿಗ್ ಮನೆಯಲ್ಲಿ ಪ್ರತಾಪ್ ಅವರನ್ನು ರುಬ್ಬುತ್ತಿದೆಯಾ ಎಂಬ ಅನುಮಾನ ಮೂಡಲು ಕಾರಣವಾಗಿದೆ. 

ವಿನಯ್ ಗೌಡ, ಸ್ನೇಹಿತ್, ಮೈಕೆಲ್, ತುಕಾಲಿ ಸಂತು ಹಾಗೂ ನಮ್ರತಾ ಇರುವ ಗುಂಪಿನಲ್ಲಿ ಡ್ರೋನ್ ಪ್ರತಾಪ್ ಕೂಡ ಸಿಕ್ಕಿಹಾಕಿಕೊಂಡಿದ್ದಾನೆ. ಅಲ್ಲಿ ಪ್ರತಾಪ್‌ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ವಿನಯ್ ಗೌಡ 'ನೀನು ಕಾಲೇಜ್ ಬಿಟ್ಟ ತಕ್ಷಣ ಡ್ರೋನ್ ಕಂಡುಹಿಡಿದೆ ಅಲ್ವಾ? ಅದಕ್ಕೆ ಹಣ ಯಾರು ಕೊಟ್ರು?' ಎಂದು ಕೇಳಿದ್ದಾರೆ. ಅದಕ್ಕೆ ಪ್ರತಾಪ್ ಇನ್‌ಸ್ಟಿಟ್ಯೂಶನ್ ನವರು' ಎಂದಿದ್ದಾನೆ. 'ಅಂದ್ರೆ?' ಎಂಬ ವಿನಯ್ ಪ್ರಶ್ನೆಗೆ ಪ್ರತಾಪ್ 'ನಾನು ಓದಿದ ಇನ್‌ಸ್ಟಿಟ್ಯೂಶನ್' ಎಂದಿದ್ದಾನೆ. 

ಸ್ನೇಹಿತ್ ಗೌಡ ಡ್ರೋನ್ ಪ್ರತಾಪ್ ಬಳಿ 'ಅದಕ್ಕೆ ಎಷ್ಟು ದುಡ್ಡು ಕೊಟ್ಟರು' ಎನ್ನಲು ಪ್ರತಾಪ್ 'ಸಮ್ ಅಮೌಂಟ್ ' ಎಂದಿದ್ದಾನೆ. ವಿನಯ್ 'ಎಷ್ಟು ಅಂತ ಹೇಳೋಕೆ ಇಷ್ಟವಿಲ್ವಾ?' ಎಂದು ಕೇಳಲು ಪ್ರತಾಪ್ 'ಹೌದು' ಎಂದು ಹೇಳಿದ್ದಾನೆ. ಸ್ನೇಹಿತ್ '10 ಲಕ್ಷ ಕ್ಕಿಂತ ಕಮ್ಮಿನಾ' ಎನ್ನಲು ಪ್ರತಾಪ್ 'ಹೌದು' ಎಂದಿದ್ದಾನೆ. ಎಷ್ಟು ಎಂಬುದನ್ನು ಕೊನೆಗೂ ಪ್ರತಾಪ್ ಇಲ್ಲಿ ಬಹಿರಂಗ ಪಡಿಸಲಿಲ್ಲ. ತುಕಾಲಿ ಸಂತು ವೀಸಾ, ಪಾಸ್‌ಪೋರ್ಟ್‌ ಅಂತ ಏನೇನೋ ಪ್ರಶ್ನೆ ಕೇಳಿದ್ದಾನೆ, ಆದರೆ ಪ್ರತಾಪ್ ಅದಕ್ಕೆ ಸರಿಯಾಗಿ ಉತ್ತರಿಸಿಲ್ಲ. 

ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ಮೇಲೆ ಇನ್ನೂ ಲವ್ ಇದೆ, ಇದಕ್ಕೆ ಸ್ಪಷ್ಟನೆ ಇಲ್ಲಿದೆ

ಅವರೆಲ್ಲರ ಪ್ರಶ್ನೆಗಳ ಬಗ್ಗೆ ಬೇರೆ ಒಂದು ಕಡೆ ನಿಂತಿರುವ ಕಾರ್ತಿಕ್ ಮತ್ತು ರಕ್ಷಕ್ ನಡುವೆ ಸಂಭಾಷಣೆ ನಡೆದಿದೆ. ರಕ್ಷಕ್ 'ಅವ್ರೆಲ್ಲ ಸೇರಿ ಅವ್ನ ಇಂಟರ್‌ವ್ಯೂ ಮಾಡ್ತಿದಾರೆ. ಸುಮ್ನೆ ಕೆಲಸ ಇಲ್ದೇ ಇವ್ನು ತಾನೇ ಹೋಗಿ ಸಿಕ್ಕಾಕೊಂಡಿದಾನೆ. ಇವತ್ತು ಅವ್ನ ಸರಿಯಾಗಿ ರುಬ್ಬತಾರೆ ನೋಡಿ' ಎಂದ ರಕ್ಷಕ್‌ಗೆ ಕಾರ್ತಿಕ್ 'ಹೌದಾ, ಯಾಕೆ?' ಎಂದು ಕೇಳಿದ್ದಾರೆ. ರಕ್ಷಕ್ ' ತಾನೇ ವಿಷ್ಯ ತೆಗ್ದು ಪ್ರತಾಪ್ ಇಶ್ಯೂ ಮಾಡ್ಕೊತಿದಾನೆ' ಎಂದಿದ್ದಾನೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ನನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಲಾಗಿದ್ಯಾ? ಉತ್ತರಕ್ಕೆ ಎಪಿಸೋಡ್ ನೋಡಬೇಕು. 

ಬಿಗ್ ಬಾಸ್‌ನಲ್ಲಿ ಇಶಾನಿ-ಮೈಕಲ್‌ 'ಅನ್‌ಸೀನ್‌ ಕಥೆಗಳು', ಏನಿದು ಲವ್ ಮಿಸ್ಟರಿ!

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Latest Videos
Follow Us:
Download App:
  • android
  • ios