Asianet Suvarna News Asianet Suvarna News

ಬಿಗ್ ಬಾಸ್ ಮನೆಯಿಂದ ನೀತು ವನಜಾಕ್ಷಿ ಔಟ್; ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ ಫುಲ್ ಗಾಸಿಪ್!

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. 

Bigg Boss kannada season 10 contestant Nithu Vaanjaksshi elimination gossip srb
Author
First Published Nov 26, 2023, 8:00 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. 

ಬಿಗ್ ಬಾಸ್ ಕನ್ನಡ 10ನೇ ಸೀಸನ್ 7ನೇ ವಾರದ ಕೊನೆಗೆ ಸಾಗಿಬಂದಿದೆ. ಇಂದು, 26 ನವೆಂಬರ್ 2023ರಂದು ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಬೀಳಲಿದ್ದಾರೆ. ಅವರು ಯಾರೆಂಬುದನ್ನು ಅಧಿಕೃತವಾಗಿ ಹೇಳಲಾಗದಿದ್ದರೂ ಊಹೆ ಮಾಡಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ಗಾಸಿಪ್ ಆಧರಿಸಿ ಹೇಳುವುದಾದರೆ  ಇಂದು ಎಲಿಮಿನೇಟ್‌ ಆಗಲಿರುವ ಸ್ಪರ್ಧಿ ನೀತು ವನಜಾಕ್ಷಿ. ಹಾಗಂತ ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಆದರೆ ಇದನ್ನು ಗಾಸಿಪ್ ಎನ್ನಬಹುದೇ ಹೊರತೂ ಅಧಿಕೃತ ಸುದ್ದಿ ಎನ್ನಲು ಸಾಧ್ಯವಿಲ್ಲ. 

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿರುವ ನೀತು ವನಜಾಕ್ಷಿ 6 ವಾರಳನ್ನು ಕಳೆದು ಏಳನೆಯ ವಾರದ ಕೊನೆಗೆ ಬಂದು ನಿಂತಿರುವುದು ಸಾಧನೆಯೇ ಸರಿ. ಆದರೆ, ಇಂದು ಈ ಹಂತದಲ್ಲಿ ಎಲಿಮಿನೇಟ್ ಆಗಲಿರುವ ಸ್ಪರ್ಧಿ ಅವರೇ ಎಂದು ಹಲವರು ಕಾಮೆಂಟ್ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. ನಾಮಿನೇಟ್ ಆಗಿದ್ದರೂ ಸಿರಿ ಈ ವಾರ ಹೊರಹೋಗುತ್ತಿಲ್ಲ. ಬದಲಿಗೆ ನೀತು ವನಜಾಕ್ಷಿಯೇ ಇಂದು ಬಿಗ ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಎನ್ನಲಾಗುತ್ತಿದೆ. ಈ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಕಲರ್ಸ್ ಕನ್ನಡದಲ್ಲಿ ಇಂದು ಪ್ರಸಾರ ಕಾಣಲಿರುವ 'ಸುಪರ್ ಸಂಡೇ ವಿತ್ ಸುದೀಪ' ನೋಡಬೇಕು. 

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ದಿನದಿನಕ್ಕೂ ಹಲವಾರು ಮಹತ್ತರ ಬದಲಾವಣೆಗಳು ಆಗುತ್ತಿರುತ್ತವೆ. ಇಂದಿನ ಸಂಚಿಕೆ ಪ್ರೋಮೋ ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕೇಳಿ ಬರುತ್ತಿರುವ ತುಕಾಲಿ ಸಂತೋಷ್ ಮಾತುಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಗಿರುವ ಹಲವು ಸೂಚನೆಗಳ ಝಲಕ್ ಕಾಣಿಸುತ್ತಿದೆ ಎನ್ನಬಹುದು. ಬಿಗ್ ಬಾಸ್ ಗೇಮ್ ಶೋ ಹೋಸ್ಟ್ ಸುದೀಪ್ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತ ತುಕಾಲಿ ಸಂತೋಷ್ ಮನೆಯ ಸದ್ಯದ ಹಲವು ಸ್ಥಿತಿಗತಿಗಳ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಎನ್ನಬಹುದು. 

ಖ್ಯಾತ ನಟಿ ಮೇಲೆ ಅನಾಮಿಕನ ದಾಳಿ, ಹಲ್ಲೆ ಮಾಡಿ ಪರಾರಿಯಾದ ಆರೋಪಿ; ವೈರಲ್ ಆಯ್ತು ಪೋಸ್ಟ್!

ಕಿಚ್ಚ ಸುದೀಪ್ ಮಾತಿಗೆ ಉತ್ತರಿಸುತ್ತ ತುಕಾಲಿ ಸಂತು 'ಈ ಮನೆಯಲ್ಲಿ ಅತಿ ಹೆಚ್ಚು ನೋವು ಅನುಭವಿಸಿರುವುದು ಕಾರ್ತಿಕ್, ಅವರಿಗೆ ಅಧ್ಯಕ್ಷ ಸ್ಥಾನ' ಎಂದಿದ್ದಾರೆ. 'ವರ್ತೂರು ಸಂತೋಷ್ ಮಾತನಾಡಿದರೂ ಕೂಡ ಅತ್ತಂತೆ ಇರುತ್ತದೆ. ಇನ್ನು ಪ್ರತಾಪ್ ಯಾವುದೇ ಟೀಮ್ ಸೇರಿಕೊಳ್ಳದೇ ಹೊರಗೇ ಇರಬೇಕೆಂದು ನಿರ್ಧರಿಸಿದ್ದರೂ ಇದ್ದ ಟೀಮ್‌ನಲ್ಲಿ ಅಪಾರ ನೋವು ಅನುಭವಿಸಿ ಈಗ ಇನ್ನೊಂದು ಟೀಮ್‌ಗೆ ಮರಳಿ ಹಾಯಾಗಿದ್ದಾರೆ' ಎನ್ನುವ ಮೂಲಕ ಆ ಮನೆಯಲ್ಲಿ ಇರುವ ಹಲವು ಸ್ಪರ್ಧಿಗಳ ಸ್ಥಿತಿ ಮತ್ತು ಮನಸ್ಥಿತಿ ಬಗ್ಗೆ ಹೇಳಿದಂತಾಗಿದೆ. ಇಂದಿನ ಸಂಚಿಕೆ ಮೂಲಕ ಇನ್ನೊಂದು ಎಲಿಮಿನೇಶನ್ ಆಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬರು ಸ್ಪರ್ಧಿ ಕಮ್ಮಿ ಆಗಲಿದ್ದಾರೆ.

ಯಾವತ್ತೂ ನಗುನಗುತ್ತಿರು, ಅಮ್ಮನ ಮಾತೇ ನನಗೆ ವೇದವಾಕ್ಯ; ರಶ್ಮಿಕಾ ಮಾತಿಂದ ಕಣ್ಣೀರಾದ್ರು ಸಂದರ್ಶಕಿ!

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

Follow Us:
Download App:
  • android
  • ios