Asianet Suvarna News Asianet Suvarna News

ಖ್ಯಾತ ನಟಿ ಮೇಲೆ ಅನಾಮಿಕನ ದಾಳಿ, ಹಲ್ಲೆ ಮಾಡಿ ಪರಾರಿಯಾದ ಆರೋಪಿ; ವೈರಲ್ ಆಯ್ತು ಪೋಸ್ಟ್!

ನಾನು ನೋವಿನಿಂದ ಕಿರಿಚುತ್ತಿದ್ದರೆ ಆತ 'ರೆಡ್ ಕಾರ್ಡ್‌ ಕೊಡು' ಎಂದು ಒಂದೇ ಸಮನೆ ನನಗೆ ಒತ್ತಾಯಿಸುತ್ತಿದ್ದ. ಆತ ತಮಿಳು ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟನಿ ಕಡೆಯವನಿರಬಹುದು ಎಂಬ ಸಂದೇಹ ನನಗೆ ಮೂಡಿದೆ' ಎಂದಿದ್ದಾರೆ ನಟಿ ವನಿತಾ ವಿಜಯ್ ಕುಮಾರ್. ಆದರೆ, ನಟಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ. 

Tamil actress Vanitha Vijaykumar attacked by unknown person in Tamil Nadu srb
Author
First Published Nov 26, 2023, 7:09 PM IST

ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಮುಖ್ಯವಾಗಿ ತಮಿಳು ಸಿನಿರಂಗದ ಜನಪ್ರಿಯ ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ, ವನಿತಾ ವಿಜಯಕುಮಾರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಸಂಗತಿಯನ್ನು ಸ್ವತಃ ನಟಿ ವನಿತಾ ವಿಜಯ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಗಾಯಗೊಂಡಿರುವ ತಮ್ಮ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಿರುವ ನಟಿ ಆರೋಪಿ ಯಾರೆಂಬ ಊಹೆಯನ್ನು ಕೂಡ ರಿವೀಲ್ ಮಾಡಿದ್ದಾರೆ. 

ಹೌದು, ನಟಿ ವನಿತಾ ವಿಜಯ್ ಕುಮಾರ್ ತಮ್ಮ ಮೇಲೆ ಮಧ್ಯರಾತ್ರಿ ನಡೆದಿರುವ ಹಲ್ಲೆ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಜಗತ್ತಿಗೆ ತಿಳಿಸಿದ್ದಾರೆ. ಮಧ್ಯರಾತ್ರಿಯಲ್ಲಿ ನಿಗೂಢ ವ್ಯಕ್ತಿಯೊಬ್ಬ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನಾನು ನನ್ನ ಮಗಳ ಬಿಗ್ ಬಾಸ್ ಶೋ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದೆ, ನಾನು ನನ್ನ ಸಹೋದರಿಯ ಮನೆಯ ಬಳಿ ನನ್ನ ಕಾರು ಪಾರ್ಕ್‌ ಮಾಡಿದ್ದೆ. ಅಲ್ಲಿಂದ ನನ್ನ ಮನೆಗೆ ಕಾರು ಚಲಾಯಿಸಿಕೊಂಡು ಹೋಗಲು ಕಾರ್ ಬಳಿ ಹೋಗುತ್ತಿದ್ದಂತೆ ಕತ್ತಲಲ್ಲಿ ಯಾರೋ ಒಬ್ಬ ಬಂದು ನನ್ನ ಮುಖಕ್ಕೆ ಗುದ್ದಿದ್ದಾನೆ. 

ತಾಳಿ ಬಿಗಿಯಾಗಿ ಕಟ್ಟಪ್ಪ, ಹೊಸ ಗ್ಲಾಸು ಅಷ್ಟೊಂದ್ ಬಿಗಿಯಾಗಿ ಕಟ್ಬೇಡ; ಏನಿದು ಲಕ್ಷ್ಮೀ ನಿವಾಸ ಕಥೆ!

ನಾನು ನೋವಿನಿಂದ ಕಿರಿಚುತ್ತಿದ್ದರೆ ಆತ 'ರೆಡ್ ಕಾರ್ಡ್‌ ಕೊಡು' ಎಂದು ಒಂದೇ ಸಮನೆ ನನಗೆ ಒತ್ತಾಯಿಸುತ್ತಿದ್ದ. ಆತ ತಮಿಳು ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟನಿ ಕಡೆಯವನಿರಬಹುದು ಎಂಬ ಸಂದೇಹ ನನಗೆ ಮೂಡಿದೆ' ಎಂದಿದ್ದಾರೆ ನಟಿ ವನಿತಾ ವಿಜಯ್ ಕುಮಾರ್. ಆದರೆ, ನಟಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ. ಬದಲಾಗಿ, ನನಗೆ ಈ ಕೇಸ್, ಪೊಲೀಸ್ ಪ್ರೊಸೆಸ್ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಹೀಗಾಗಿ, ನಾನು ನನ್ನ ಮೇಲೆ ಆಗಿರುವ ಹಲ್ಲೆಗೆ ನ್ಯಾಯಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದೇನೆ' ಎಂದಿದ್ದಾರೆ.

ನನ್ನ ಸೊಂಟದ ಸುತ್ತಳತೆ ಮೇಲೆ ಯಾವತ್ತೂ ಕಣ್ಣು ನೆಟ್ಟಿರುತ್ತೆ; ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಬೆರಗಾಯ್ತು ಹಾಲಿವುಡ್ !

ಒಟ್ಟಿನಲ್ಲಿ, ಈ ಮೊದಲು ಹಲವಾರು ಬಾರಿ ತಮ್ಮ ಎರಡನೆಯ, ಮೂರನೆಯ ಮದುವೆ, ವಿಚ್ಛೇದನಗಳಿಗೆ, ಬಿಗ್ ಬಾಸ್ ಕಾಂಟ್ರೋವರ್ಸಿಗಳಿಗೆ ನಟಿ ವನಿತಾ ವಿಜಯ್‌ಕುಮಾರ್  ಸುದ್ದಿಗೆ ಗ್ರಾಸವಾಗಿದ್ದರು. ಆಗ ತಮಿಳು ಮೀಡಿಯಾಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಈ ನಟಿಯ ಬಗ್ಗೆ ಬಹಳಷ್ಟು ನೆಗೆಟಿವ್ ಸುದ್ದಿ ಹಾಗೂ ಕಾಮೆಂಟ್ಸ್‌ಗಳು ಹರಿದಾಡಿದ್ದವು. ಈಗ ತನ್ನ ಮೇಲೆ ಮಧ್ಯರಾತ್ರಿ ಅನಾಮಿಕನೊಬ್ಬ ಹಲ್ಲೆ ಮಾಡಿದ್ದಾನೆ ಎಂದು ತಾವೇ ಸ್ವತಃ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ನಟಿ ವನಿತಾ ವಿಜಯ್‌ಕುಮಾರ್.

Follow Us:
Download App:
  • android
  • ios