ʼಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ʼ ಶೋ ಅಂತ್ಯ ಆಗುತ್ತಿದ್ದಂತೆ ಜಶ್ವಂತ್ ಬೋಪಣ್ಣ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಈಗ ಅವರು ಇನ್ನೊಂದು ಬ್ರೇಕಪ್ ಮಾಡಿಕೊಂಡಿದ್ದಾರಂತೆ.
ʼಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ ಶೋನಲ್ಲಿ ಭಾಗವಹಿಸಿದ್ದ ಜಶ್ವಂತ್ ಬೋಪಣ್ಣ ಅವರು ನಂದಿನಿ ಜೊತೆ ಬ್ರೇಕಪ್ ಮಾಡಿಕೊಂಡರು. ರೋಡೀಸ್‌ನಲ್ಲಿ ಭಾಗವಹಿಸಿದ್ದ ನಂದಿನಿ, ಜಶ್ವಂತ್ ಅವರು ಪ್ರೇಮಿಗಳಾಗಿ ದೊಡ್ಮನೆ ಬಾಗಿಲು ಪ್ರವೇಶ ಮಾಡಿದ್ದರು. ಶೋನಲ್ಲಿಯೇ ಈ ಜೋಡಿ ಮಧ್ಯೆ ಮನಸ್ತಾಪ ಉಂಟಾಗಿ, ಆಮೇಲೆ ಹೊರಗಡೆ ಬಂದ್ಮೇಲೆ ಬ್ರೇಕಪ್ ಘೋಷಣೆ ಮಾಡಿದ್ದರು. ಈಗ ಇನ್ನೊಂದು ಶೋ ಮುಗಿಯುತ್ತಿದ್ದಂತೆ ಜಶ್ವಂತ್ ಬೋಪಣ್ಣ ಮತ್ತೆ ಬ್ರೇಕಪ್ ಮಾಡಿಕೊಂಡಿದ್ದಾರೆ, ಅದು ಇನ್ನೊಂದು ಮಾಡೆಲ್ ಜೊತೆ..
splitsvilla x5 ವಿಜೇತರು!
ಹೌದು, ʼsplitsvilla x5ʼ ಶೋನಲ್ಲಿ ಭಾಗವಹಿಸಿದ್ದ ಆಕೃತಿ ನೇಗಿ ಜೊತೆ ಜಶ್ವಂತ್ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಶೋನಲ್ಲಿ ಜಶ್ವಂತ್ ಕೂಡ ಭಾಗವಹಿಸಿದ್ದರು. ಇಲ್ಲಿಯೇ ಈ ಜೋಡಿ ಮಧ್ಯೆ ಸ್ನೇಹ, ಪ್ರೀತಿ ಶುರುವಾಗಿತ್ತು. ಅಷ್ಟೇ ಅಲ್ಲದೆ ಈ ಜೋಡಿ ಒಟ್ಟಿಗೆ ಈ ಶೋ ಕೂಡ ಗೆದ್ದಿತ್ತು. ಶೋನಲ್ಲಿ ಗೆದ್ದವರೀಗ ಪ್ರೀತಿ ವಿಷಯದಲ್ಲಿ ಸೋತಿದ್ದಾರೆ. ಈ ಬಗ್ಗೆ ಜಶ್ವಂತ್ ಅವರೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
BBK 11: ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್ ಹೇಳಿಲ್ಲ: ಮೋಕ್ಷಿತಾ ಪೈ
ಜಶ್ವಂತ್ ಬೋಪಣ್ಣ ಏನಂದ್ರು?
“ನಮ್ಮ ಸಂಬಂಧದಲ್ಲಿ ಬ್ಯಾಲೆನ್ಸ್ ಮಿಸ್ ಆಗುತ್ತಿತ್ತು. ವ್ಯಕ್ತಿಗಳು ಇಬ್ಬರೂ ಸಮನಾಗಿ ಆಸಕ್ತಿ ಹೊಂದಿದ್ದಾಗ ಮಾತ್ರ ಒಂದು ಸಂಬಂಧ ಮುಂದುವರೆದುಕೊಂಡು ಹೋಗುತ್ತದೆ. ಎಲ್ಲೋ ಒಂದು ಕಡೆ ಕನೆಕ್ಷನ್ ಮಿಸ್ ಆಗುತ್ತದೆ ಅಂತ ಅನಿಸಿತ್ತು. ದೂರ ಆಗೋದು ಕಷ್ಟದ ನಿರ್ಧಾರ ಆದರೂ ಕೂಡ ನಾವು ಗೌರವದಿಂದ, ಅರ್ಥ ಮಾಡಿಕೊಂಡು ದೂರ ಆಗಿದ್ದೇವೆ” ಎಂದು ಜಶ್ವಂತ್ ಬೋಪಣ್ಣ ಮಾತನಾಡಿಕೊಂಡಿದ್ದಾರೆ.
“ಈ ರೀತಿ ನಿರ್ಧಾರ ತಗೊಳೋದು ಕಷ್ಟ ಆಗಿತ್ತು. ಆದರೆ ಈ ನಿರ್ಧಾರ ತಗೊಳ್ಳಲೇಬೇಕಿತ್ತು. ಸ್ಪಷ್ಟನೆ ಸಿಗೋಕೆ ಸ್ವಲ್ಪ ಸಮಯ ಸಿಗಬೇಕು. ಇಲ್ಲಿ ಸ್ವಲ್ಪ ಗೊಂದಲ ಇದ್ದರೂ ಕೂಡ, ನಾನು ಯಾವುದೇ ಆರೋಪಗಳನ್ನು ಹಿಡಿದಿಟ್ಟುಕೊಳ್ಳಲು ಇಷ್ಟಪಡೋದಿಲ್ಲ. ನಮ್ಮಿಬ್ಬರಿಗೂ ಸ್ವಲ್ಪ ಸಮಯ, ಗೌರವ ಬೇಕು. ಬೇರೆ ಬೇರೆ ದಾರಿಗಳಲ್ಲಿ ಹೋದರೂ ಕೂಡ, ನಾವಿಬ್ಬರು ವೈಯಕ್ತಿಕವಾಗಿ ಬೆಂಬಲ ಕೊಟ್ಟುಕೊಳ್ತೀವಿ ಅಂತ ನಂಬಿದ್ದೇವೆ” ಎಂದು ಜಶ್ವಂತ್ ಬೋಪಣ್ಣ ಹೇಳಿದ್ದಾರೆ.
ರಣಜಿ ಕ್ರಿಕೆಟ್ ಆಟ ಆಡಬೇಕಿದ್ದ ಕನಸು ನುಚ್ಚು ನೂರಾಗಿತ್ತು; ಬಿಗ್ ಬಾಸ್ ತ್ರಿವಿಕ್ರಮ್‌ಗೆ ಮತ್ತೊಂದು ಸುವರ್ಣಾವಕಾಶ!
ʼಆಕೃತಿ ನೇಗಿ ಯಾರು?
ʼsplitsvilla x5ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಜಶ್ವಂತ್ ಬೋಪಣ್ಣ ಅವರಿಗೆ ಆಕೃತಿ ನೇಗಿ ಮೇಲೆ ಲವ್ ಆಗಿತ್ತು. ಎಂಟಿವಿ ರೋಡೀಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಆಕೃತಿ ನೇಗಿ ಅವರು splitsvilla x5 ಶೋನಲ್ಲಿ ಭಾಗವಹಿಸಿದ್ದರು. ಈ ಹಿಂದೆ ಅವರು ಸಚಿನ್ ಶರ್ಮಾ ಎನ್ನುವವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು, ಅಷ್ಟೇ ಅಲ್ಲದೆ ಸಚಿನ್ ನನ್ನ ಜೊತೆ ಅನುಚಿತವಾಗಿ ನಡೆದುಕೊಂಡರು, ಫೋನ್‌ನಲ್ಲಿ ನಮ್ಮಿಬ್ಬರ ರೊಮ್ಯಾಂಟಿಕ್ ಫೋಟೋಗಳನ್ನು ಇಟ್ಟುಕೊಂಡಿದ್ದಾರೆ ಎಂದು ಅವರು ಆರೋಪ ಮಾಡಿ ಎಫ್‌ಐಆರ್ ಕೂಡ ದಾಖಲಿಸಿದ್ದರು.
ಜಗಳ ಆಡಿಕೊಂಡಿದ್ದ ಜೋಡಿ..!
ಇನ್ನು ಸಹಸ್ಪರ್ಧಿ ಜಶ್ವಂತ್ ಬೋಪಣ್ಣ ಅವರ ಜೊತೆ ಆಕೃತಿ ನೇಗಿ ಅವರ ಬಾಂಧವ್ಯ ಜಾಸ್ತಿ ಆಗಿತ್ತು. ಜಶ್ವಂತ್ ಅವರು ಬೇರೆ ಹುಡುಗಿಯನ್ನು ಹೊಗಳಿದರೆ, ಮಾತನಾಡಿದರೂ ಕೂಡ ಆಕೃತಿಗೆ ಇಷ್ಟ ಆಗ್ತಿರಲಿಲ್ಲ. ಈ ಪೊಸೆಸ್ಸಿವ್ ಕಾರಣಕ್ಕೆ ಇವರಿಬ್ಬರು ಸಾಕಷ್ಟು ಜಗಳ ಆಡಿದ್ದರು. ಇನ್ನು ಜಶ್ವಂತ್, ಆಕೃತಿ ಜೋಡಿ ಪ್ರೀತಿಯಲ್ಲಿ ಮುಳುಗಿ ಹೋಗಿದ್ದರು. ಇವರಿಬ್ಬರು ಸೇರಿಕೊಂಡು ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದು, ಆ ವಿಡಿಯೋಗಳು ಭಾರೀ ವೈರಲ್ ಆಗುತ್ತಿದ್ದವು. ಕೆಲ ತಿಂಗಳುಗಳಿಂದ ಈ ಜೋಡಿ ಒಟ್ಟಿಗೆ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಅಷ್ಟೇ ಅಲ್ಲದೆ ಒಟ್ಟಿಗೆ ರೀಲ್ಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿಯೂ ಹಾಕಿಕೊಂಡಿರಲಿಲ್ಲ. ಆಗಲೇ ಕೆಲವರು ಈ ಜೋಡಿ ಬೇರೆ ಬೇರೆ ಆಗಿದೆ ಅಂತ ಊಹಿಸಿದ್ದರು. ಈಗ ಇವರಿಬ್ಬರ ಲವ್ ಬ್ರೇಕಪ್ ಸತ್ಯ ಎನ್ನೋದು ಪಕ್ಕಾ ಆಗಿದೆ.
