ʼಬಿಗ್ ಬಾಸ್ ಕನ್ನಡ ಸೀಸನ್ 11ʼ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಅವರು ಸಿಸಿಎಲ್‌ಗೆ ಆಯ್ಕೆ ಆಗಿದ್ದಾರೆ. ಇವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ʼಬಿಗ್ ಬಾಸ್ ಕನ್ನಡ 11ʼ ಶೋ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ಅವರು ಆದಷ್ಟು ಬೇಗ ಹೊರಗಡೆ ಬಂದರೆ ಸಿಸಿಎಲ್ ಆಡಬಹುದು ಎಂದು ತಮಾಷೆ ಮಾಡಿದ್ದರು. ಆಗ ತ್ರಿವಿಕ್ರಮ್ ಅವರು ʼಅಣ್ಣಾ…ʼ ಎಂದು ರಾಗ ಎಳೆದಿದ್ದರು. ಈಗ ಈ ಶೋ ಮುಗಿದಿದ್ದು, ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ. ಈಗ ಸಿಸಿಎಲ್ ಆರಂಭವಾಗಿದ್ದು ತ್ರಿವಿಕ್ರಮ್ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಮ್ಯಾಚ್ ಹೇಗೆ ನಡೆಯಲಿದೆ?
11ನೇ ಸಿಸಿಎಲ್ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯಲಿದೆ. ಫೆಬ್ರವರಿ 8ರಂದು ಸಿಸಿಎಲ್ ಸೀಸನ್ 11 ಶೋ ಆರಂಭ ಆಗುವುದು. ಏಳು ತಂಡಗಳು ಇರಲಿವೆ, ಹದಿನೇಳು ಮ್ಯಾಚ್ ಇರಲಿವೆ. ನಾಲ್ಕು ವಾರಗಳ ಕಾಲ ಈ ಪಂದ್ಯ ನಡೆಯವುದು. ಎರಡು ಇನ್ನಿಂಗ್ಸ್ ಇದ್ದು, ಪ್ರತಿ 10 ಓವರ್ಸ್ ಇರಲಿವೆ. ಇನ್ನು ಓರ್ವ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವುದು.
ಮಗಳ ಜೊತೆಗೆ ವಿಮಾನದಲ್ಲಿ ಪ್ರಯಾಣಿಸಿದ ಕಿಚ್ಚನ ಜೊತೆ ಗಗನಸಖಿಯ ಸೆಲ್ಫಿ ಸಂಭ್ರಮ!
ಈ ಮ್ಯಾಚ್ ಎಲ್ಲಿ ನೋಡಬೇಕು?
ಡಿಸ್ನಿ ಹಾಟ್‌ಸ್ಟಾರ್, ಸೋನಿ ಸ್ಪೋರ್ಟ್ಸ್ ಸೇರಿದಂತೆ ಸ್ಥಳೀಯ ವಾಹಿನಿಗಳು ಸಿಸಿಎಲ್ ಪ್ರಸಾರ ಮಾಡಲಿವೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದು, “ನಮ್ಮ ಬೆಂಗಳೂರಿನ ಹೊಸ ಸೀಸನ್ ಆರಂಭ ಆಗಲಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ ಮಧ್ಯೆ ಆಟ ನಡೆಯಲಿದೆ. ನಿಮ್ಮೆಲ್ಲರನ್ನು ದೊಡ್ಡ ಸಂಖ್ಯೆಯಲ್ಲಿ ನೋಡಲು ಕಾಯುತ್ತಿರುವೆ. ನಿಮ್ಮ ಉತ್ಸಾಹ ನಮಗೆ ಬೇಕು” ಎಂದು ಹೇಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸಿದರೆ, ತೆಲುಗು ವಾರಿಯರ್ ತಂಡವನ್ನು ಅಖಿಲ್ ಅಕ್ಕಿನೇನಿ ಮುನ್ನಡೆಸಲಿದ್ದಾರೆ.
ತ್ರಿವಿಕ್ರಮ್‌ಗೆ ಕ್ರಿಕೆಟ್ ಅಂದ್ರೆ ಇಷ್ಟ
ತ್ರಿವಿಕ್ರಮ್ ಅವರು ದೊಡ್ಡ ಕ್ರಿಕೆಟರ್ ಆಗಬೇಕು ಅಂತ ಆಸೆಪಟ್ಟಿದ್ದರು. ಎಂಟೂವರೆ ವರ್ಷಗಳ ಕಾಲ ಅವರು ಕ್ರಿಕೆಟ್ ಅಭ್ಯಾಸ ಮಾಡಿದ್ದರು. ಇನ್ನೊಂದು ಕಡೆ ರಣಜಿಯಂತಹ ಪಂದ್ಯಗಳಲ್ಲಿ ಅವರು ಆಡಬೇಕು ಅಂತ ಕನಸು ಕಂಡಿದ್ದರು. ಆದರೆ ಅಪಘಾತವೊಂದು ಅವರ ಕನಸನ್ನು ನುಚ್ಚು ನೂರು ಮಾಡಿತು. ತ್ರಿವಿಕ್ರಮ್ ಕಾಲಿಗೆ ಗಾಯ ಆದ್ಮೇಲೆ ಅವರು ಜಿಮ್ ಟ್ರೇನರ್ ಆಗಿ ಕೆಲಸ ಮಾಡಿದರು. ಆಮೇಲೆ ಅನಿರೀಕ್ಷಿತವಾಗಿ ನಟನಾ ಅವಕಾಶ ಒಲಿದು ಬಂತು. ಆಮೇಲೆ ಅವರು ನಟನಾಗಿ ಇಂದು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅವರಿಗೆ ಸಿಸಿಎಲ್‌ನಲ್ಲಿ ಆಟ ಆಡುವ ಅವಕಾಶ ಸಿಕ್ಕಿದೆ. ಈ ಮೂಲಕ ಅವರಿಗೆ ಕ್ರಿಕೆಟ್ ಲೋಕದಲ್ಲಿ ಸ್ವಲ್ಪ ಸಮಯವಾದರೂ ಆಟ ಆಡುವ ಅವಕಾಶ ಸಿಕ್ಕಿದಂತಾಗುತ್ತದೆ.
BBK 11: ತ್ರಿವಿಕ್ರಮ್, ರಶ್ಮಿಕಾ ಮಂದಣ್ಣ ಜೊತೆಗಿರೋ ಫೋಟೋ ವೈರಲ್! ಏನಪ್ಪಾ ಇದು ಹೊಸ ಕಥೆ?
ಕ್ರಿಕೆಟ್ ತಯಾರಿ ನಡೆಯುತ್ತಿದೆ..!
ಅಂದಹಾಗೆ ಈಗಾಗಲೇ ತ್ರಿವಿಕ್ರಮ್ ಅವರು ಕಿಚ್ಚ ಸುದೀಪ್ ತಂಡದ ಜೊತೆಗೆ ಕ್ರಿಕೆಟ್ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ತಂಡ ಹೇಗೆ ಆಟ ಆಡಲಿದೆ ಎಂದು ಕಾದು ನೋಡಬೇಕಿದೆ.
ಚಿತ್ರರಂಗದಲ್ಲಿ ಆಕ್ಟಿವ್ ಆಗಬೇಕಿದೆ..!
ಅಂದಹಾಗೆ ಇತ್ತೀಚೆಗೆ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಆಟ ಆಡಿ ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ʼಬಿಗ್ ಬಾಸ್ʼ ಲೋಕದಿಂದಾಚೆ ಬಂದು ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಬೇಕಿದೆ. ಸಂದರ್ಶನಗಳನ್ನು ನೀಡುತ್ತ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲಿರುವ ತ್ರಿವಿಕ್ರಮ್ ಅವರು ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಕಡೆಗೂ ಗಮನ ಕೊಡಬೇಕಿದೆ. ಈ ಬಾರಿ ನೀವು ಸಿಸಿಎಲ್ ನೋಡಲು ಉತ್ಸುಕರಾಗಿದ್ದೀರಾ? ನಿಮ್ಮ ಅಭಿಪ್ರಾಯ ತಿಳಿಸಿ…
