Asianet Suvarna News Asianet Suvarna News

ಡಿಂಗ್ರಿ ಕುಡಿ ರಾಜವರ್ಧನ್ 'ಗಜರಾಮ' ಆಗಮನ ಸನ್ನಿಹಿತ; ತುಪ್ಪದ ಬೆಡಗಿ ಥಕಧಿಮಿತ..!

ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಮಗನೇ ರಾಜವರ್ಧನ್. 2020ರ ಫೆಬ್ರವರಿ 28ರಂದು ಬಿಡುಗಡೆಯಾಗಿ ಸುದ್ದಿಯಾಗಿದ್ದ 'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಪಡೆದಿದ್ದ ರಾಜವರ್ಧನ್, ಇದೀಗ 'ಗಜರಾಮ'ನಾಗಿ ಮತ್ತೊಮ್ಮೆ ಕನ್ನಡ ಸಿನಿಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. 

Dingri Nagaraj son Rajavardan Gajarama movie shooting in final stage srb
Author
First Published Oct 7, 2023, 3:34 PM IST

ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ನಾಯಕರಾಗಿ ನಟಿಸುತ್ತಿರುವ 'ಗಜರಾಮ' ಸಿನಿಮಾ ಶೂಟಿಂಗ್ ಅಂತಿಮ ಹಂತದಲ್ಲಿದೆ. ಈ ಚಿತ್ರ ಬಿಗ್ ಬಜೆಟ್ ಹಾಗೂ Action ಓರಿಯಂಟೆಡ್ ಸಿನಿಮಾ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಕೋವಿಡ್ ಕಾರಣದಿಂದ ಸ್ವಲ್ಪ ತಡವಾಗಿ ಶೂಟಿಂಗ್ ಆರಂಭಿಸಿದ ಈ ಚಿತ್ರ ನಿಧಾನವಾಗಿಯೇ ಶೂಟಿಂಗ್ ನಡೆಸುತ್ತಿದೆ. ಸ್ವಲ್ಪ ಲೇಟ್ ಆದರೂ ಪರವಾಗಿಲ್ಲ, ಲೇಟೇಸ್ಟ್ ಆಗಿ ಗ್ರಾಂಡ್‌ ಆಗಿ ಬರಲಿ ಎಂಬುದು ಚಿತ್ರತಂಡದ ಕಮಿಟ್ಮೆಂಟ್ ಅಗಿದೆಯಂತೆ. ಸೋ, ಗಜರಾಮ 'ಗಜಗಾಂಭೀರ್ಯ' ಹೆಜ್ಜೆಯನ್ನಿಟ್ಟು ಬರುತ್ತಿದ್ದಾನೆ ಎನ್ನಲಾಗಿದೆ. 

ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತ ನಟ. ಅವರ ಮಗನೇ ರಾಜವರ್ಧನ್. ಈ ಮೊದಲು 2020ರ ಫೆಬ್ರವರಿ 28ರಂದು ಬಿಡುಗಡೆಯಾಗಿ ಸುದ್ದಿಯಾಗಿದ್ದ 'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಪಡೆದಿದ್ದ ರಾಜವರ್ಧನ್ (Rajavardhan), ಇದೀಗ 'ಗಜರಾಮ'ನಾಗಿ ಮತ್ತೊಮ್ಮೆ ಕನ್ನಡ ಸಿನಿಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. ಬಿಚ್ಚುಗತ್ತಿಯಲ್ಲಿ ಹರಿಪ್ರಿಯಾ ಮತ್ತು ರಾಜವರ್ಧನ್ ಜೋಡಿಯಾಗಿ ಮೋಡಿ ಮಾಡಿದ್ದರು.

ಮುಂಬರುವ 'ಗಜರಾಮ (Gajarama)' ಚಿತ್ರದಲ್ಲಿ ರಾಜವರ್ಧನ್‌ಗೆ ನಾಯಕಿಯಾಗಿ ತಪಸ್ವಿನಿ ನಟಿಸಿದ್ದಾರೆ. ರಗಡ್ ಪೊಲೀಸ್ ಪಾತ್ರದಲ್ಲಿ ನಟ ದೀಪಕ್ ಮಿಂಚಿದ್ದು, ನಟ ಕಬೀರ್ ಸಿಂಗ್ ವಿಲನ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಯೋಗರಾಜ್ ಭಟ್, ದುನಿಯಾ ಸೂರಿ ಮುಂತಾದವರೊಡನೆ ಕೆಲಸ ಮಾಡಿದ ಅನುಭವವುಳ್ಳ ಸುನಿಲ್ ಕುಮಾರ್ ವಿಎ ಈಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮನೋಮೂರ್ತಿ ಸಂಗೀತ, ಕೆಎಸ್ ಚಂದ್ರಶೇಖರ್ ಛಾಯಾಗ್ರಾಹಣ ಈ ಚಿತ್ರಕ್ಕಿದೆ. 'ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್' ಬ್ಯಾನರ್‌ನಲ್ಲಿ ನರಸಿಂಹಮೂರ್ತಿ ಜತೆ ಜೇವಿಯರ್ ಫರ್ನಾಂಡಿಸ್-ಮಲ್ಲಿಕಾರ್ಜುನ್ ಕಾಶಿ 'ಗಜರಾಮ' ಚಿತ್ರವನ್ನು ನಿರ್ಮಿಸಿದ್ದಾರೆ.

 ಬಿಗ್ ಬಾಸ್‌ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!

"ಗಜರಾಮ' ಚಿತ್ರದ  ಶೂಟಿಂಗ್ ಕೊನೆಯ ಹಂತದಲ್ಲಿದೆ. ಕಳೆದ ಒಂದು ವರ್ಷದಿಂದ ಶೂಟಿಂಗ್ ನಡೆಸುತ್ತಿದ್ದೇವೆ. ನಮ್ಮ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರಾಮ್. ಆದರೆ, ರಾವಣ ಕೂಡ ಇದ್ದಾನೆ. ಶಾಕಿಂಗ್ ಅಥವಾ 'ಅಚ್ಚರಿ' ಸಂಗತಿ ಏನೆಂದರೆ 'ರಾಮ-ರಾವಣ' ಎರಡೂ ನಾನೇ" ಎಂದಿದ್ದಾರೆ 'ಗಜರಾಮ' ನಾಯಕ, ನಟ  ರಾಜವರ್ಧನ್. 

ನಟ ಸಿದ್ಧಾರ್ಥ್ ಹೇಳಿಕೆ: ನಾನು ಬೆತ್ತಲೆ ಆಗಿದ್ದಾಗ ನರ್ಸ್‌ಗಳು, ವೈದ್ಯರು ಫೋಟೋ, ವಿಡಿಯೋ ಮಾಡಿಕೊಂಡಿದ್ರು..!

Follow Us:
Download App:
  • android
  • ios