ಬಿಗ್‌ಬಾಸ್‌ ೧೧ರ ಮೊದಲ ಫೈನಲಿಸ್ಟ್ ಹಳ್ಳಿ ಹೈದ ಹನುಮಂತು. ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿ ಪಡೆದ ಹನುಮಂತು ಈಗ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಸ್ನೇಹಿತನೊಬ್ಬನ ಪ್ರಕಾರ, ಹನುಮಂತುವಿಗೆ ಒಂದು ರೂಪಾಯಿ ಚಾಕಲೇಟ್‌ ಮತ್ತು ಹ್ಯಾಪಿಡೆಂಟ್‌ ಹಚ್ಚಿಕೊಳ್ಳುವ ಅಭ್ಯಾಸವಿದೆ. ಗೆಲುವಿನತ್ತ ಬಲವಾಗಿ ಸಾಗುತ್ತಿರುವ ಹನುಮಂತುವಿಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಬೆಂಬಲವಿದೆ.

ಬಿಗ್ ಬಾಸ್ ಕನ್ನಡ 11 ಸೀಸನ್ ಫೈನಲಿಸ್ಟ್, ಹಳ್ಳಿ ಹೈದ ಹನುಮಂತನ (Hanumanthu) ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ವೈಯ್ಡ್‌ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಗೆ ಎಂಟ್ರಿ ಪಡೆದ ಸಿಂಗರ್ ಹನುಮಂತು, ಬಳಿಕ ಅಲ್ಲಿದ್ದವರನ್ನೆಲ್ಲಾ ಮೀರಿಸಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದಾನೆ. ಅಷ್ಟೇ ಅಲ್ಲ, ಇದೀಗ ಮೊದಲ ಫೈನಲಿಸ್ಟ್ ಆಗಿ ಸಹ ಹೊರಹೊಮ್ಮಿದ್ದಾನೆ. ಬೇರೆ ಯಾರೆಲ್ಲ ಪೈನಲ್‌ಗೆ ಬರುತ್ತಾರೋ ಇಲ್ಲವೋ, ಆದರೆ ಹನುಮಂತು ಅದಾಗಲೇ ಆ ಜಾಗಕ್ಕೆ ಹೋಗಿ ಕುಳಿತುಬಿಟ್ಟಿದ್ದಾನೆ. 

ಅಂಥ ಹನುಮಂತು ಬಗ್ಗೆ ಇದೀಗ ಸುದ್ದಿಯೊಂದು ವೈರಲ್ ಆಗುತ್ತಿದೆ. ಅದೇನು ಎಂಬ ಕುತೂಹಲ ಖಂಡಿತ ಬಹಳಷ್ಟು ಜನರಿಗೆ ಇದ್ದೇ ಇರುತ್ತೆ. ಹಾಗಿದ್ದರೆ ಮುಂದೆ ನೋಡಿ.. ಹನುಮಂತು ಸ್ನೇಹಿತರೊಬ್ಬರಿಗೆ ಕರೆ ಮಾಡಿ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿ ಹನುಮಂತು ಬಗ್ಗೆ ಪ್ರಶ್ನೆ ಕೇಳಲಾಗಿದೆ. ಆತ ಕೊಟ್ಟ ಉತ್ತರ ಈಗ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿದೆ. ಹನುಮಂತ ಮುಗ್ದ ಮಾತ್ರವಲ್ಲ, ತುಂಬಾ ಬುದ್ಧಿವಂತ ಕೂಡ ಎಂದು ಈಗ ಕಿರುತೆರೆ ವೀಕ್ಷಕರು, ಬಿಗ್ ಬಾಸ್ ಪ್ರಿಯರು ಮಾತನ್ನಾಡಿಕೊಳ್ಳುತ್ತಿದ್ದಾರೆ.

7 ವರ್ಷದ ಹಿಂದೆ ಕಿರಿಕ್​ ಕೀರ್ತಿ- ಚೈತ್ರಾ ಕುಂದಾಪುರ ನಡುವೆ ಅಂಥದ್ದೇನು ನಡೆದಿತ್ತು? ಸಂದರ್ಶನದಲ್ಲಿ ರಿವೀಲ್​

ಇಬ್ಬರೂ ಜೊತೆಯಲ್ಲೆ ಇರುತ್ತೀರಿ, ನಿಮ್ಮ ಸ್ನೇಹಿತ ಹನುಮಂತುಗೆ ಏನಾದ್ರೂ ದುಶ್ಚಟ ಇದ್ಯಾ ಎಂಬ ಪ್ರಶ್ನೆಗೆ ಆತನ ಸ್ನೇಹಿತ 'ಖಂಡಿತ ಆತನಿಗೆ ಕೆಟ್ಟ ಅಭ್ಯಾಸ ಅನ್ನುವಂಥದ್ದು ಏನೂ ಇಲ್ಲ. ನಾನು ಗುಟ್ಕಾ ಹಾಕಿಕೊಂಡರೆ ನನಗೆ ಬೈತಾನೆ. ಅದನ್ನೆಲ್ಲ ತಿನ್ಬೇಡ, ಅದರ ಬದಲು ಚಾಕಲೇಟ್ ತಿನ್ನು ಅಂತಾನೆ. ಆದರೆ ನಾನು ನೋಡಿರುವ ಹಾಗೆ, ಹನುಮಂತುಗೆ ಒಂದು ಅಭ್ಯಾಸ ಇದೆ, ಅದು ಕೆಟ್ಟದೇನೂ ಅಲ್ಲ ಅಂತ ನನ್ನ ಭಾವನೆ. ಅವನಿಗೆ ಒಂದು ರೂಪಾಯಿ ಚಾಕಲೇಟ್ ತಿನ್ನುವುದು ಹಾಗೂ ಹ್ಯಾಪಿಡೆಂಟ್ ಹಾಕಿಕೊಳ್ಳುವ ಅಭ್ಯಾಸ ಇದೆ. ಅದು ಬಿಟ್ಟರೆ ಅವನಿಗೆ ಬೇರೆ ಯಾವುದೇ ದುರಾಭ್ಯಾಸ ಇಲ್ಲ' ಎಂದಿದ್ದಾನೆ. 

ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ಬಂದಿದೆ. ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತು ಗೆಲುವು ನಿಶ್ಚಿತ ಎಂದು ಬಹಳಷ್ಟು ಮಂದಿ ಈಗಾಗಲೇ ನಿರ್ಧರಿಸಿದ್ದಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಹನುಮಂತನದೇ ಹವಾ ಜಾಸ್ತಿ ಇದೆ, ಜೊತೆಗೆ, ವೋಟಿಂಗ್ ಪ್ರಕ್ರಿಯೆಯಲ್ಲಿ ಕೂಡ ಹನುಮಂತ ಎಲ್ಲರಿಗಿಂತ ಮುಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸದ್ಯ ಟ್ರೆಂಡ್ ಯಾವ ರೀತಿ ಇದೆ ಎಂದರೆ, ಹನುಮಂತನ ಕೈಗೆ ಬಿಗ್ ಬಾಸ್ ಕನ್ನಡ 11 ಟ್ರೋಫಿ ಯಾವ ಮುಹೂರ್ತದಲ್ಲಿ ಕೈ ಸೇರಲಿದೆ ಎಂಬ ಕ್ಷಣವಷ್ಟೇ ಬಾಕಿ ಎಂಬಂತಾಗಿದೆ.

ಜಗದೀಶ್ ಕೊಟ್ಟ ಕಿರುಕುಳ ಮರೆಯಲ್ಲ; ರೋಲ್ ಕಾಲ್ ಲಾಯರ್‌ ಎಂದಿದ್ದಕ್ಕೆ ಕ್ಲಾರಿಟಿ ಕೊಟ್ಟ ಚೈತ್ರಾ ಕುಂದಾಪುರ