ಬಿಗ್‌ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ, ನಿರಿಕ್ ಯೂಟ್ಯೂಬ್ ಚಾನೆಲ್‌ಗೆ ಕಿರಿಕ್ ಕೀರ್ತಿಯೊಂದಿಗೆ ಸಂದರ್ಶನ ನೀಡಲಿದ್ದಾರೆ. ಏಳು ವರ್ಷಗಳ ಹಿಂದೆ ಇಬ್ಬರ ನಡುವಿನ ಸಾಮಾಜಿಕ ಜಾಲತಾಣದ ಕಿರಿಕ್ ಬಗೆಗೆ ಚರ್ಚಿಸಲಾಗಿದೆ. ಬಿಗ್‌ಬಾಸ್ ಅನುಭವದ ಬಗ್ಗೆಯೂ ಚೈತ್ರಾ ಮಾತನಾಡಿದ್ದಾರೆ. ಜೀವನ ಪಾಠ ಕಲಿಸಿದ ಬಿಗ್‌ಬಾಸ್ ಅನುಭವವನ್ನು ವಿವರಿಸಿದ್ದಾರೆ.
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್ ಆಗಿರೋ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಲ್ಲಿ 105 ದಿನಗಳ ಪ್ರಯಾಣ ಮುಗಿಸಿ ಇದೀಗ ಹೊರಕ್ಕೆ ಬಂದಿದ್ದಾರೆ. ಇದಾಗಲೇ ಹಲವಾರು ಯೂಟ್ಯೂಬ್ ಚಾನೆಲ್ ಜೊತೆ ಅವರು ಮಾತನಾಡಿದ್ದಾರೆ. ಇದೀಗ ಅವರು ನಿರಿಕ್ ಯೂಟ್ಯೂಬ್ ಚಾನೆಲ್ ಜೊತೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಆದರೆ ಇವರ ಜೊತೆ, ಕಿರಿಕ್ ಕೀರ್ತಿ ಅವರೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಬಗ್ಗೆ ಕೀರ್ತಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ನಾನು ಬಿಗ್‌ಬಾಸ್‌ನಿಂದ ಹೊರಗೆ ಬಂದಾಗ ನನಗೂ ಚೈತ್ರಾಗೂ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಆಗಿತ್ತು... ಆಮೇಲೆ ಸಂಧಾನವಿಲ್ಲದೇ ಸಮಾಧಾನದಲ್ಲಿ ಮುಗಿದಿತ್ತು... ಈಗ ಚೈತ್ರಾ ಬಿಗ್‌ಬಾಸ್‌ನಿಂದ ಹೊರಗೆ ಬಂದಾಗ ಮೊದಲ ಭೇಟಿ... ಒಂದೊಳ್ಳೆ ಹರಟೆ ಹೊಡೆದಿದ್ದೇವೆ... ಸದ್ಯದಲ್ಲೇ Mr.Nirik YouTube channelನಲ್ಲಿ interview telecast ಆಗುತ್ತೆ... ನೋಡಿ... ಎಂದು ಕೀರ್ತಿ ಹೇಳಿದ್ದಾರೆ.
ಅಷ್ಟಕ್ಕೂ ಕಿರಿಕ್ ಕೀರ್ತಿ ಅವರು ಬಿಗ್‌ಬಾಸ್ 4ರಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ಈ ಬಿಗ್‌ಬಾಸ್ ನಡೆದಿತ್ತು. ಇದರಲ್ಲಿ ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದರು. ಅವರು ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಜೊತೆ ಏನು ಕಿರಿಕ್ ಆಗಿತ್ತು? ಅವರಿಬ್ಬರ ನಡುವೆ ನಡೆದ ಸಂಧಾನ ಏನು ಎಂಬ ಬಗ್ಗೆ ಕುತೂಹಲ ಇದ್ದು, ಆ ಕುತೂಹಲಕ್ಕಾಗಿ ಈ ಸಂದರ್ಶನ ನೋಡಿ ಎಂದು ಕೀರ್ತಿ ಹೇಳಿದ್ದಾರೆ.
ಎಲಿಮಿನೇಟಾಗಿ ಹೊರಬರ್ತಿದ್ದಂತೆಯೇ ನೇರಪ್ರಸಾರದಲ್ಲಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಬಗ್ಗೆ ಹೇಳಿದ್ದೇನು?
ಅಷ್ಟಕ್ಕೂ ಬಿಗ್‌ಬಾಸ್‌ನಿಂದ ಗೆಲ್ಲಲಿ, ಬಿಡಲಿ ಅವರು ಹೊರಬಂದ ಮೇಲೆ ಒಂದಷ್ಟು ವರ್ಷ ಕ್ಲಿಕ್ ಆಗುವುದು, ಸೆಲೆಬ್ರಿಟಿ ರೂಪದಲ್ಲಿ ಮೆರೆಯುವುದು ಸಹಜವೇ. ಕೆಲವೊಮ್ಮೆ ಕೆಲವು ಸ್ಪರ್ಧಿಗಳ ಲೈಫ್ ಅನ್ನೇ ಬಿಗ್‌ಬಾಸ್ ಬದಲಿಸಿದ್ದೂ ಇದೆ. ಅದರಲ್ಲಿ ಒಂದು 'ಬಿಗ್ ಬಾಸ್ ಕನ್ನಡ 4'. ಇದರಲ್ಲಿ ವಿನ್ನರ್ ಆಗಿದ್ದ, ಒಳ್ಳೆ ಹುಡುಗ ಎನ್ನುವ ಟೈಟಲ್ ಹೊತ್ತು ಬಂದ ಪ್ರಥಮ್ಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು. ಅದೇ ರೀತಿ ರನ್ನರ್ ಅಪ್ ಆದ ಕಿರಿಕ್ ಕೀರ್ತಿ ಕೂಡ ಸಿನಿಮಾದಲ್ಲಿ ಗುರುತಿಸಿಕೊಂಡರು. ಜೊತೆಗೆ ಇವರು ಸಾರ್ವಜನಿಕವಾಗಿಯೂ ಸಾಕಷ್ಟು ಗುರುತಿಸಿಕೊಂಡರು.
ಚೈತ್ರಾ ಕುಂದಾಪುರ ಮೊದಲೇ ಗುರುತಿಸಿಕೊಂಡಿದ್ದರಿಂದ ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದಿಷ್ಟು ಕಾಂಟ್ರವರ್ಸಿಗಳಾಗಿ ಈಗ ಮತ್ತೆ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆಯೇ ಹೊಸ ಹೊಸ ವಿಷಯಗಳನ್ನು ಲಿತಿರುವ ಬಗ್ಗೆ ತಿಳಿಸಿದ್ದಾರೆ. 'ಹೊಸ ಹೊಸ ಅನುಭವ ಹೊತ್ತುಕೊಂಡು ಹೊರಗೆ ಬಂದಿದ್ದೇನೆ. ಬಿಗ್‌ಬಾಸ್ ನನಗೆ ಸುಂದರ ಅನುಭವ ನೀಡಿದೆ. ಇದು ವಿಭಿನ್ನ ಆಗಿರುವಂಥ ಅನುಭವ. ಬದುಕಿನಲ್ಲಿ ಬಹಳ ಕಡಿಮೆ ಜನರಿಗೆ ಇಂಥದ್ದೊಂದು ಅವಕಾಶ ಸಿಗುತ್ತದೆ. ಅನಿರೀಕ್ಷಿತವಾಗಿ ನರಕಕ್ಕೆ ಹೋಗಬೇಕಾಯ್ತು. ಅಲ್ಲಿಂದ ನನ್ನ ಬಿಗ್‌ಬಾಸ್ ಪ್ರಯಾಣ ಆರಂಭವಾಯಿತು. ಹೊಡೆದಾಟ, ಕಡಿಮೆ ಮೂಲಭೂತ ಸೌಕರ್ಯ ಇವುಗಳನ್ನೆಲ್ಲಾ ಎದುರಿಸಿದೆ. ಆಗ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ, ಜೀವನದಲ್ಲಿ ಸರ್ವೈವ್ ಆಗುವುದು ಹೇಗೆ ಎನ್ನುವ ಬಹುದೊಡ್ಡ ಪಾಠವನ್ನು ಇದರಿಂದ ಕಲಿತೆ ಎಂದಿದ್ದಾರೆ ಚೈತ್ರಾ. ಅಲ್ಲಿಂದ ನೇರವಾಗಿ ಸ್ವರ್ಗಕ್ಕೆ ಹೋದೆ. ಅಲ್ಲಿಯೂ ಹೊಸ ಹೊಸ ಅನುಭವ ಸಿಕ್ಕಿತು. ಬದುಕಿನಲ್ಲಿ ಯಾವುದೇ ರೀತಿಯ ಏರುಪೇರು ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಅನುಭವ ಈ ಅವಧಿಯಲ್ಲಿ ಬಿಗ್‌ಬಾಸ್ ನನಗೆ ಕೊಟ್ಟಿತು ಎಂದಿದ್ದಾರೆ.
ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್ ಮಾತು...
