ಹೊರ ಬಂದ್ಮೇಲೆ ಸತ್ಯ ಗೊತ್ತಾಗಿದ್ದು, ಫೇಕ್ ಪ್ರೀತಿ ತೋರಿಸಿಬಿಟ್ಟರು; ಮೈಕಲ್‌ನಿಂದ ದೂರ ಉಳಿಯಲು ಕಾರಣ ಹೇಳಿದ ಇಶಾನಿ!

ಮೈಕಲ್ ಜೊತೆಗಿನ ಸ್ನೇಹದ ಬಗ್ಗೆ ಸ್ಪಷ್ಟನೆ ನೀಡಿದ ಇಶಾನಿ. ಹೊರ ಬಂದ ಮೇಲೆ ಸತ್ಯ ಗೊತ್ತಾಗಿದೆ....

Bigg boss kannada eshani gives clarification about micheal and negative trolls vcs

ಬಿಗ್‌ ಬಾಸ್ ಕನ್ನಡ ಸೀಸನ್ 10ರಲ್ಲಿ ಮಿಂಚಿದ ರ್ಯಾಪರ್ ಇಶಾನಿ ಇದೀಗ ತಮ್ಮ ಮ್ಯೂಸಿಕ್ ಆಲ್ಬಂ ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನೆಗೆಟಿವ್ ಕಾಮೆಂಟ್, ಟ್ರೋಲ್, ಮದುವೆ, ಫ್ಯಾಮಿಲಿ ಪ್ರತಿಯೊಂದನ್ನು ತಮ್ಮ ಹಾಡಿನಲ್ಲಿ ಸೇರಿಸಿದ್ದಾರೆ. ಇಷ್ಟು ದಿನ ಉತ್ತರ ಕೊಡದವರಿಗೆ ಹಾಡಿನ ಮೂಲಕವೇ ಉತ್ತರಿಸಿದ್ದಾರೆ. ಈ ನಡುವೆಯೂ ನೆಗೆಟಿವ್ ಪೋಸ್ಟ್‌ ಮತ್ತು ಗೆಳೆಯ ಮೈಕಲ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ನೆಗೆಟಿವ್ ಕಾಮೆಂಟ್: 

'ನೆಗೆಟಿವ್ ಕಾಮೆಂಟ್ ಬರುವಾಗ ನಾನು ಉತ್ತರ ಕೊಟ್ಟಿದ್ದೀನಿ ಆದರೆ ಈಗ ಪ್ರತಿಯೊಂದಕ್ಕೂ ಪಾಸಿಟಿವ್ ಆಗಿ ಉತ್ತರ ಕೊಡುತ್ತಿದ್ದಾರೆ ಹೀಗಾಗಿ ಪಾಸಿಟಿವ್ ಆಗಿರಲಿ. ಈಗ ನೆಗೆಟಿವ್ ಕಾಮೆಂಟ್ಸ್ ಬಂದ್ರೂ ಯೋಚನೆ ಮಾಡುವುದಿಲ್ಲ ಹಾಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ ಹಾಗಂತ ಸದಾ ಅದರ ಬಗ್ಗೆ ಯೋಚನೆ ಮಾಡಿದರೆ ತಲೆ ಕೆಡುತ್ತದೆ. ಬಿಗ್ ಬಾಸ್‌ ಒಂದು ದೊಡ್ಡ ವೇದಿಕೆ ಅದರಿಂದಲೇ ನನಗೆ ಯಶಸ್ಸು ಮತ್ತು ಜನರ ಪ್ರೀತಿ ಸಿಕ್ಕಿರುವುದು, ಅಲ್ಲಿಂದ ಜೀವನದ ಬಗ್ಗೆ ಸಾಕಷ್ಟು ಪಾಠಗಳನ್ನು ಕಳಿತಿದ್ದೀನಿ. ಈಗಿನ ಪ್ರಪಂಚದಲ್ಲಿ ನಾನು ಸಾಫ್ಟ್‌ ಆಗಿದ್ದರೆ ಜನರು ನಮ್ಮನ್ನು ತಿಂದು ಹಾಕಿಬಿಡುತ್ತಾರೆ ಹೀಗಾಗಿ ನಮ್ಮ ಬಗ್ಗೆ ನಾವು ಜಾಸ್ತಿ ಯೋಚನೆ ಮಾಡಬೇಕು ಅನ್ನೋದು ತಲೆಗೆ ಬಂತು. ಬಿಗ್ ಬಾಸ್‌ ಮನೆಯಲ್ಲಿ ಹೇಗೆ ಆಟ ಆಡಬೇಕು ಅನ್ನೋದು ನನಗೆ ಅರ್ಥವಾಗಿರಲಿಲ್ಲ ಆದರೆ ಹೊರ ಬರುವ ದಿನ ಮತ್ತೊಂದು ಚಾನ್ಸ್‌ ಬೇಕಿತ್ತು ಅನಿಸಿತ್ತು. 

ಮೈಸೂರು ಹುಡುಗಿ ಆಗಿ ಮೈ ಕಾಣೋ ಬಟ್ಟೆ ಹಾಕ್ಬೇಡಿ; ಕರಿಮಣಿ ಸಾಹಿತ್ಯಾ ಕಾಲೆಳೆದ ನೆಟ್ಟಿಗರು

ಮೈಕಲ್ ಬಗ್ಗೆ ಸ್ಪಷ್ಟನೆ:

'ಮೈಕಲ್ ಹೆಸರಿನ ಜೊತೆ ಓಡಾಡುತ್ತಿದ್ದ ಕಾಮೆಂಟ್ಸ್‌ಗಳು ಈಗ ಹೋಗಿದೆ ಹೀಗಾಗಿ ಮತ್ತೆ ಮಾತನಾಡಲು ಇಷ್ಟ ಪಡುವುದಿಲ್ಲ. ಸ್ನೇಹ ಮಾಡಿದಾಗ ಅನಿಸುತ್ತಿತ್ತು ಏನೋ ಆಗುತ್ತದೆ ಎಂದು ಆದರೆ ಹೊರ ಬಂದ ಮೇಲೆ ನಂಗೆ ನಿಜ ಗೊತ್ತಾಗಿದೆ. ನಿಜ ಏನು ಎಂದು ನಾನು ಹೇಳುವುದಕ್ಕೆ ಹೋಗಲ್ಲ, ಬಿಬಿ ಮನೆಯಲ್ಲಿ ಇದ್ದಾಗ ನನ್ನ ಫೀಲಿಂಗ್ಸ್‌ಗಳು ನಿಜ ಇತ್ತು ಆದರೆ ಎದುರಿಗಿದ್ದ ವ್ಯಕ್ತಿಯಿಂದ ಸರಿಯಾಗಿ ಪ್ರೀತಿ ಸಿಕ್ಕಿಲ್ಲ. ಅವರು ಭಾವನೆಗಳು ತುಂಬಾ ಫೇಕ್ ಆಗಿತ್ತು. ಇರಲಿ ಆ ವ್ಯಕ್ತಿ ಬಗ್ಗೆ ಮತ್ತೆ ಯಾಕೆ ಮಾತನಾಡಬೇಕು. ಈಗ ನಾವು ಸ್ನೇಹಿತರಾಗಿದ್ದೀವಿ ಹೀಗೆ ಇರಲು ಇಷ್ಟ ಪಡುತ್ತೀನಿ ಅಲ್ಲದೆ ಅಪರೂಪಕ್ಕೆ ಒಮ್ಮೆ ಮಾತನಾಡುತ್ತೀವಿ.

ಆಸ್ಪತ್ರೆಗೆ ದಾಖಲಾದ ಧನುಶ್ರೀ; ನಾರ್ತ್‌ ಇಂಡಿಯನ್ ಮೀಲ್ಸ್ ತಿನ್ಕೊಂಡು ವಿಡಿಯೋ ಮಾಡುತ್ತಿರುವುದಕ್ಕೆ ನೆಟ್ಟಿಗರು ಗರಂ

Latest Videos
Follow Us:
Download App:
  • android
  • ios