ಮೈಸೂರು ಹುಡುಗಿ ಆಗಿ ಮೈ ಕಾಣೋ ಬಟ್ಟೆ ಹಾಕ್ಬೇಡಿ; ಕರಿಮಣಿ ಸಾಹಿತ್ಯಾ ಕಾಲೆಳೆದ ನೆಟ್ಟಿಗರು
ಮಾಡರ್ನ್ ಲುಕ್ ಸೂಟ್ ಆಗುತ್ತೆ ಅಂತ ಇಷ್ಟೋಂದು ಮಾಡರ್ನ್ ಹಾಕೋಡ್ರೆ ನಾವು ಸೀರಿಯಲ್‌ನ ನೋಡಲ್ಲ ಅಂತಿದ್ದಾರೆ ಫ್ಯಾನ್ಸ್.....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿ ವೀಕ್ಷಕರ ಮನಸ್ಸು ಗೆದ್ದಿ. ಪ್ರಮುಖ ಪಾತ್ರಧಾರಿ ಆಗಿರುವ ಸಾಹಿತ್ಯಾ ಉರ್ಫ್ ಸ್ಪಂದನಾ ಸೋಮಣ್ಣ ಇವರೇ...
ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರು. ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ನಟನೆಗೆಂದು ಬೆಂಗಳೂರಿಗೆ ಕಾಲಿಟ್ಟಿದ್ದಾರೆ.
ಇಂಜಿನಿಯರಿಗ್ ಮುಗಿಸುತ್ತಿದ್ದಂತೆ ಪುಣೆಯಲ್ಲಿ ಕೆಲಸ ಗಿಟ್ಟಿಸಿಕೊಂಡರು ಅದರೆ ಅವರ ಹಣೆ ಬರಹದಲ್ಲಿ ನಟನೆ ಅಂತ ಹಚ್ಚೆ ಹಾಕಿತ್ತು ಅನ್ಸುತ್ತೆ...ಅಷ್ಟರಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು.
ಕರಿಮಣಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸ್ಪಂದನಾ ತಮ್ಮ ಮೊದಲ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನೀಲಿ ಬಣ್ಣದ ಡಿಸೈನ್ ಗೌನ್ ಧರಿಸಿ ಸಖತ್ ಮಿಂಚಿದ್ದಾರೆ.
ಡ್ರೆಸ್ ಸಿಕ್ಕಾಪಟ್ಟೆ ಮಾಡರ್ನ್ ಆಗಿದ್ದ ಕಾರಣ ಅಯ್ಯೋ ದಯವಿಟ್ಟು ಮೈಸೂರು ಹುಡುಗಿಯರಿಗೆ ಗೌರವ ಕೊಡಿ ನೀವು ಈ ರೀತಿ ಹಾಟ್ ಡ್ರೆಸ್ ಧರಿಸಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಸ್ಪಂದನಾ ಸಖತ್ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಸೀರಿಯಲ್ ತಂಡದವರು ಈ ಫೋಟೋಗಳನ್ನು ನೋಡಿ ಆಡಿಷನ್‌ಗೆ ಕರೆದಿದ್ದರಂತೆ. ಆದರೆ ಮೊದಲ ಆಡಿಷನ್‌ನಲ್ಲಿ ಅವಕಾಶ ಕಳೆದುಕೊಂಡರು.
ಕರಿಮಣಿ ಸೀರಿಯಲ್‌ನಲ್ಲಿ ಮಾತ್ರವಲ್ಲ ತೆಲುಗಿನ ಅಭಿಲಾಷಾ ಮತ್ತು ಕನ್ನಡದ ನಾನು ನನ್ನ ಕನಸು ಸೀರಿಯಲ್‌ಗಳಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ.