ಆಸ್ಪತ್ರೆಗೆ ದಾಖಲಾದ ಧನುಶ್ರೀ; ನಾರ್ತ್‌ ಇಂಡಿಯನ್ ಮೀಲ್ಸ್ ತಿನ್ಕೊಂಡು ವಿಡಿಯೋ ಮಾಡುತ್ತಿರುವುದಕ್ಕೆ ನೆಟ್ಟಿಗರು ಗರಂ

ಎದ್ದೇಳಲು ಕಷ್ಟ ಪಡುತ್ತಿದ್ದರೂ ವ್ಲಾಗ್ ಮಾಡುತ್ತಿರುವ ಧನುಶ್ರೀ. ಖುಷಿ ನೋಡಿದ್ದೀರಾ ಕಷ್ಟನೂ ನೋಡಬೇಕು ಅಂತಿದ್ದಾರೆ......

Bigg boss Dhanushree hospitalised due to fever netizen angry for her vlogging habit vcs

ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಅಂದ್ರೆ ಜನರಿಗೆ ಮೊದಲು ನೆನಪಾಗುವುದು ಯೂಟ್ಯೂಬ್ ವಿಡಿಯೋಗಳು ಅಥವಾ ಕಿಚ್ಚ ಸುದೀಪ್ ಕೊಟ್ಟ ಟಾಂಗ್. ಸಿಕ್ಕಾಪಟ್ಟೆ ವೈರಲ್ ರೀಲ್ಸ್‌ಗಳನ್ನು ಮಾಡುವ ಧನುಶ್ರೀ ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸಣ್ಣಗಾಗಬೇಕು ವರ್ಕೌಟ್ ಮಾಡಬೇಕು ಎಂದು ಒಂದು ಚೂರು ರೆಸ್ಟ್‌ ಮಾಡದೆ ಡಯಟ್ ಮತ್ತು ವರ್ಕೌಟ್ ಮಾಡಿದ ಕಾರಣ ಈಗ ವಿಪರೀತ ಚಳಿ ಜ್ವರ ಆಗಿದೆ. ಹುಷಾರಿಲ್ಲ ಅಂತನೂ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. 

ಧನುಶ್ರೀ ಆಸ್ಪತ್ರೆಗೆ ದಾಖಲು:

ಸೆಪ್ಟೆಂಬರ್ 18ರಂದು ಇದ್ದಕ್ಕಿದ್ದಂತೆ ಜ್ವರ ಮೈ ಕೈ ನೋವು ಕಾಣಿಸಿಕೊಂಡೆ ಅದಾದ ಮೇಲೆ ಧನುಶ್ರೀ ಮನೆಯಲ್ಲಿಯೇ ರೆಸ್ಟ್ ಮಾಡಿದ್ದಾರೆ. ತಮಗೆ ಪರಿಚಯ ಇರುವ ಡಾಕ್ಟರ್‌ಗೆ ಕರೆ ಮಾಡಿ ಔಷಧಿಗಳನ್ನು ತೆಗೆದುಕೊಂಡಿದ್ದಾರೆ ಆದರ ವಿಪರೀತ ಚಳಿ ಜ್ವರ ಆದ ಕಾರಣ ತಮ್ಮ ಹಳೆ ಮನೆಯ ಬಳಿ ಇರುವ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಹೋಗಲಾಗಿದೆ. ಜ್ವರದಿಂದ ನರಳುತ್ತಿದ್ದ ಧನುಶ್ರೀಗೆ ವೈದ್ಯರು ಡ್ರಿಪ್ಸ್‌ ಹಾಕಿಸಿ ಒಂದೆರಡು ಗಂಟೆಗಳ ಕಾಲ ರೆಸ್ಟ್‌ ಮಾಡಲು ಹೇಳಿದ್ದಾರೆ. ಅಂದೇ ರಾತ್ರಿ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಿದ್ದಾರೆ. ಆಸ್ಪತ್ರೆಗೆ ಹೋಗುತ್ತಿರುವ ಕ್ಷಣದಿಂದ ಹಿಡಿದು ಮನೆಗೆ ಬರೆವವರೆಗೂ ಏನು ಆಯ್ತು ಎಂದು ವಿಡಿಯೋ ಮಾಡಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. 

ಮಗಳು ಸುಂದ್ರಿ ಅಂದ್ಕೊಂಡೆ ಆದರೆ ನೀವು ತ್ರಿಪುರ ಸುಂದರಿ; ಚಾರು ತಾಯಿ ಜೊತೆಗಿರುವ ಫೋಟೋ ವೈರಲ್!

ವೈದ್ಯರು ಚಿಕಿತ್ಸೆ ನೀಡುವಾಗ ಧನುಶ್ರೀ ಫುಲ್ ರೆಸ್ಟ್‌ ಮಾಡುತ್ತಿದ್ದಾಗ ಅತ್ತಿಗೆ ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಕಾರು ಬಾಗಿಲು ತೆಗೆಯಲು ಆಗುತ್ತಿಲ್ಲ, ಎದ್ದೇಳಲ್ಲು ಆಗುತ್ತಿಲ್ಲ ಎನ್ನುತ್ತಿರುವ ಧನುಶ್ರೀ ವ್ಯೂಸ್‌ ಬರಲಿ ಎಂದು ನಾಟಕ ಮಾಡುತ್ತಿದ್ದಾಳೆ ಎಂದು ಕಾಲೆಳೆದಿದ್ದಾರೆ. ಅಲ್ಲದೆ ಆಸ್ಪತ್ರೆಯಿಂದ ನೇರವಾಗಿ ಹೋಟೆಲ್‌ಗೆ ಹೋಗಿ ನಾರ್ತ್‌ ಇಂಡಿಯನ್ ಮೀಲ್ಸ್ ಸೇವಿಸಿದ್ದಾರೆ, ಅಯ್ಯೋ ನಾನು ಅಂದುಕೊಂಡಿದ್ದಕ್ಕಿಂತ ಜಾಸ್ತಿನೇ ಇದೆ ಅದರಲ್ಲೂ ಸೂಪ್‌ ಮತ್ತು ಹಪ್ಪಳ ಕೊಟ್ಟಿದ್ದಾರೆ ಎಂದು ಚೆನ್ನಾಗಿ ತಿನ್ನುತ್ತಿರುವುದನ್ನು ನೋಡಿ ನೆಟ್ಟಿಗರು ಮತ್ತೆ ಬೈದಿದ್ದಾರೆ.

ಅಪ್ಪ ದಯವಿಟ್ಟು ಬಾ.....; ಮಗನ ಮೆಸೇಜ್ ನೋಡಿ ಕಿರಿಕ್ ಕೀರ್ತಿ ಭಾವುಕ

'ದೇಹಕ್ಕೆ ವಿಶ್ರಾಂತಿ ಮತ್ತು ಕಣ್ಣಿಗೆ ನಿದ್ರೆ ಕೊಡದೆ ಅತಿಯಾಗಿ ಕೆಲಸ ಮಾಡಿ ನಮ್ಮನ್ನು ನಾವು ಸುಸ್ತು ಮಾಡಿಕೊಂಡರೆ ಕೆಲವೊಂದು ಸಲ ಈ ರೀತಿ ಹುಷಾರು ಇಲ್ಲದಂತೆ ಆಗುತ್ತೆ. ಹೀಗಾಗಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ' ಎಂದು ಧನುಶ್ರೀ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios