ಬಾತ್‌ ರೂಂ ನಲ್ಲಿ ನಿದ್ದೆ ಮಾಡಿದ್ರಾ ಡ್ರೋಣ್, ಜೋಕ್‌ ಮಾಡಿದ್ದಕ್ಕೆ ಸಂಗೀತಾ ವಿರುದ್ಧ ತಿರುಗಿಬಿದ್ದ ಪ್ರತಾಪ್

ಕಲರ್ಸ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ  ಪ್ರೀತಿಯ ಅಕ್ಕ-ತಮ್ಮ ಸಂಗೀತಾ ಶೃಂಗೇರಿ ಮತ್ತು ಪ್ರತಾಪ್ ನಡುವೆ ಗಲಾಟೆಯಾಗಿದೆ. ಪ್ರತಾಪ್ ಸಿಟ್ಟಿಗೆ ಕಾರಣವಾಯ್ತಾ ಸಂಗೀತಾ ಜೋಕ್ ಎಂದು ಬಿಡುಗಡೆಯಾದ ಪ್ರೋಮೋದಲ್ಲಿ  ಮನಸ್ತಾಪ ಎದ್ದು ಕಾಣುತ್ತಿದೆ.

bigg boss kannada clash between sangeetha sringeri and drone pratap gow

ಕಲರ್ಸ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ  ಪ್ರೀತಿಯ ಅಕ್ಕ-ತಮ್ಮ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ನಡುವೆ ಗಲಾಟೆಯಾಗಿದೆ. ಪ್ರತಾಪ್ ಸಿಟ್ಟಿಗೆ ಕಾರಣವಾಯ್ತಾ ಸಂಗೀತಾ ಜೋಕ್ ಎಂದು ಬಿಡುಗಡೆಯಾದ ಪ್ರೋಮೋದಲ್ಲಿ  ಮನಸ್ತಾಪ ಎದ್ದು ಕಾಣುತ್ತಿದೆ. ಕಿಚನ್‌ ನಲ್ಲಿ ಎಲ್ಲರೂ ಕೂತುಕೊಂಡು ಮಾತನಾಡುತ್ತಿರುವಾಗ ಪ್ರತಾಪ್ ಇನ್ನೂ ಮಲಗುತ್ತಿದ್ದಾನೆ ಎಂದು ಸಂಗೀತಾ ಹೇಳುತ್ತಿದ್ದಾರೆ. ಈ ವೇಳೆ ವಿನಯ್‌ ಬಾತ್‌ ರೂಮ್‌ ನಲ್ಲಿ ಪ್ರತಾಪ್‌ ಮಲಗಿದ್ದಾನೆ  ಎಂದು ಹೇಳುತ್ತಿದ್ದಾರೆ. ನೀರು ಹಾಕಿಕೊಳ್ಳುವ ಸೌಂಡ್‌ ಕೇಳೋದಿಲ್ಲ ಬಟ್ಟೆ ಒಗೆಯೋ ಸೌಂಡ್‌ ಕೇಳೋದಿಲ್ಲ ಎಂದು ಸಂಗೀತ ವಿನಯ್‌ ಗೆ ಹೇಳುತ್ತಿದ್ದಾರೆ.

ಸಿನೆಮಾ ಸೋತ ಹೃತಿಕ್‌ ಮಾಜಿ ಪ್ರೇಯಸಿ ಬಾಲಿವುಡ್‌ಗೆ ವಿದಾಯ, 38ವರ್ಷಕ್ಕೆ ಅಜ್ಜಿ, ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ಲು

ಬಹುಶಃ ಬಾತ್‌ ರೂಮಿನಿಂದ ಪ್ರತಾಪ್‌ ಬಂದ ಮೇಲೆ ಈ ಬಗ್ಗೆ ಚರ್ಚೆಯಾಗಿದೆ. ಅದಲ್ಲದೆ ಬಾತ್‌ ರೂಮ್‌ ನಲ್ಲಿಯಲ್ಲಿ ನೀರು ಹರಿಯುತ್ತಿರುವುದನ್ನು ಬಿಗ್ಬಾಸ್‌ ತೋರಿಸಿದ್ದಾರೆ. ಈ ವೇಳೆ ಪ್ರತಾಪ್‌ ಕೋಪಗೊಂಡು ದೀ... ಸ್ನಾನ ಮಾಡಬೇಕು ಎಂದರೆ ನಾನು ಸ್ನಾನ ಮಾಡೋದಕ್ಕೆ ಹೋಗುತ್ತೇನೆ ಎಂದು ಖಾರವಾಗಿ ಸಂಗೀತಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೆ ಸಂಗೀತಾ ನೀನು ಯಾಕೆ ಇಷ್ಟೊಂದು ರೇಗಾಡುತ್ತಿದ್ದೀಯಾ? ಇದು ಜೋಕ್‌ ಪ್ರತೂ ಅಂತ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಪ್ರತಾಪ್‌ ನಿಮಗೆ ಜೋಕೆ ಬಿಡಿ ಎಂದಿದ್ದಾರೆ. ಅದಕ್ಕೆ ನನ್ನನ್ಯಾಕೆ ಎಳಿತ್ತಿದ್ದೀಯಾ ನಿಂದೇನು ಪ್ರಾಬ್ಲಂ ಎಂದು ಸಂಗೀತಾ ಕೇಳಿದ್ದಕ್ಕೆ ನಾನು ಎಳೀತಿಲ್ಲ. ನೀವು ಎಳೀತಿರುವುದು ಎಂದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ತಿಲ್ವಾ?: ವಿನಯ್​ ಜೊತೆ ಜಗಳಕ್ಕಿಳಿದ ಸಂಗೀತಾ

ಈ ಕಡೆ ಸೋಫಾದಲ್ಲಿ ಕುಳಿತಿರುವ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್‌ ಅವರು ಇವರಿಬ್ಬರ ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿಕೊಂಡಿದ್ದು, ತುಕಾಲಿ ಅವರು ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ ಎಂಬ ಹಾಡನ್ನು ಹಾಡಿದ್ದಾರೆ. ಇದಕ್ಕೆ ವರ್ತೂರು ಜೇನು ಇಲ್ಲ ಜೇನು ಗೂಡು ಇಲ್ಲ ಎಲ್ಲ ಇರೋದು ಜೇನು ಹುಳುಗಳೆ ಎಂದಿದ್ದಾರೆ. ತುಕಾಲಿ ಅವರು ನಮ್ಮ ದೀ ಗೆದ್ದು ಬಿಟ್ಟರೆ ಸಾಕು ಎನ್ನುತ್ತಿದ್ದ ದೀ ಗೂ ಪ್ರತೂಗು ಆಗಲೇ ಮನಸ್ತಾಪ ಎಂದು ಹೇಳಿದ್ದು, ಪ್ರೋಮೋದ ಹೈಲೈಟ್ ಆಗಿದೆ.

ಇನ್ನು ನಿನ್ನೆಯ ಎಪಿಸೋಡ್‌ನಲ್ಲಿ ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿಶೇಷ ಅತಿಥಿಯಾಗಿ ಆಗಮಿಸಿ ಪ್ರತಾಪ್‌ ಬಗ್ಗೆ ಭವಿಷ್ಯ ನುಡಿದು ಮನೆಯವರಿಂದ ದೂರ ಇದ್ದು ಸಾಧಿಸುವುದು ಚೆನ್ನ. ಕುಟುಂಬ ಜೀವನ ನಿನಗೆ ಹೊಂದಿಬರುವುದಿಲ್ಲ ಎಂದಿದ್ದರು. ಚೆನ್ನಾಗಿ ನಿದ್ದೆ ಮಾಡಬೇಕು ಚಿಂತೆ ಬಿಡಬೇಕು ಎಂದಿದ್ದರು.  ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸ್ವಾಮೀಜಿ ಹೇಳಿದ್ದಕ್ಕೆ ಪ್ರತಾಪ್ ನಿದ್ದೆ ಮಾಡಿದ್ದಾನೆ ಎಂದು ಮೀಮ್ಸ್‌ ಗಳು ಹರಿದಾಡುತ್ತಿದೆ.

Latest Videos
Follow Us:
Download App:
  • android
  • ios