* ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ದಿನ* ಮಂಜು ಅವರನ್ನು ಸೇವ್ ಮಾಡಿದ ದಿವ್ಯಾ ಸುರೇಶ್* ಶುಭಾ ಅತ್ಯಂತ ಕಳಪೆ ಸ್ಪರ್ಧಿ ಎಂದ ಪ್ರಶಾಂತ್* ವೈಯಕ್ತಿಕ ಟಾಸ್ಕ್ ನೀಡಿ ಕೊನೆಯಲ್ಲಿ ಉಳಿಯುವವರು ನೇರ  ನಾಮಿನೇಟ್

ಬೆಂಗಳೂರು(ಜು. 19) ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿ ವರ್ತನೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಬಿಗ್ ಬಾಸ್ ಮನೆ 99 ದಿನಗಳನ್ನು ಪೂರೈಸಿದೆ. ಸೋಮವಾರ ನಾಮಿನೇಶನ್ ದಿನ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ರೀತಿಯಯಲ್ಲಿ ಓಪನ್ ನಾಮಿನೇಶನ್ ಮಾಡಲಾಯಿತು. ಹೊರಗೆ ತೆರಳಿ ಪತ್ರದಲ್ಲಿ ಹೆಸರು ಸೂಚಿಸಲು ಕೇಳಿಕೊಳ್ಳಲಾಯಿತು. ನಾಮಿನೇಶನ್ ಪ್ರಕಾರ ಮಂಜು, ಪ್ರಶಾಂತ್, ಶಮಂತ್, ದಿವ್ಯಾ ಯು, ಶುಭಾ ಪೂಂಜಾ ಬಲೆಗೆ ಬಿದ್ದರು. ಇನ್ನೊಂದು ಕಡೆ ಪ್ರಿಯಾಂಕಾರಿಂದ ನೇರವಾಗಿ ನಾಮಿನೇಟ್ ಮಾಡಿದ ಚಕ್ರವರ್ತಿ ಇದ್ದರು.

ನಾಮಿನೇಟ್ ಮಾಡಿದ ಪ್ರಿಯಾಂಕಾಗೆ ಮಿಡಲ್ ಫಿಂಗರ್ ತೋರಿಸಿದ ಚಕ್ರವರ್ತಿ

ಈ ನಡುವೆ ಬಿಗ್ ಬಾಸ್ ನಾಯಕಿ ದಿವ್ಯಾ ಸುರೇಶ್ ಗೆ ನಾಮಿನೇಶನ್ ಆದವರಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಕೇಳಿಕೊಂಡಾಗ ಮಂಜು ಪಾವಗಡ ಅವರನ್ನು ಸೇವ್ ಮಾಡಿದರು. ಮಂಜು ಅವರು ಮೊದಲಿನಿಂದಲೂ ಚೆನ್ನಾಗಿ ಆಡಿಕೊಂಡು ಬಂದಿದ್ದು ಮನೆಯಲ್ಲಿ ಅವರು ಇರಬೇಕು ಎಂದರು.

ಈ ನಡುವೆ ಬಿಗ್ ಬಾಸ್ ವೈಯಕ್ತಿಕ ಟಾಸ್ಕ್ ನೀಡಿದ್ದು ಕೈ ಕೆಸರಾದರೆ ಬಾಯಿ ಮೊಸರು ಎಂದು ಕೆಸರಿನಲ್ಲಿ ಮುತ್ತು ಹುಡುಕಲು ಹೇಳಿದ್ದಾರೆ. ನಾಮಿನೇಶನ್ ಮಾಡುವ ವೇಳೆ ಪ್ರಶಾಂತ್ ಶುಭಾ ಹೆಸರನ್ನು ಸೂಚಿಸಿದ್ದು ಬಿಗ್ ಬಾಸ್ 8 ರ ಅತ್ಯಂತ ಕಳಪೆ ಸ್ಪರ್ಧಿ ಎಂದು ಉಲ್ಲೇಖಿಸಿದರು.