Asianet Suvarna News

ಪ್ರಿಯಾಂಕಾಗೆ ಮಿಡಲ್ ಫಿಂಗರ್ ತೋರಿಸಿದ 'ಬೀಪ್' ಚಕ್ರವರ್ತಿ!

*  ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಔಟ್
* ಫಿನಾಲೆಗೆ ಹತ್ತಿರವಾಗುತ್ತಿರುವ ಬಿಗ್ ಬಾಸ್
* ಚಕ್ರವರ್ತಿಯನ್ನು ನೇರವಾಗಿ ನಾಮಿನೇಟ್ ಮಾಡಿದ ಪ್ರಿಯಾಂಕಾ
* ಮಿಡಲ್ ಫಿಂಗರ್ ತೋರಿಸಿ ಚಕ್ರವರ್ತಿ ಆಕ್ರೋಶ

BBK8 Priyanka Thimmesh Directly Nominates Chakravarthy Chandrachud For Upcoming Eviction mah
Author
Bengaluru, First Published Jul 18, 2021, 11:19 PM IST
  • Facebook
  • Twitter
  • Whatsapp

ಬೆಂಗಳೂರು(ಜು. 18)ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಪ್ರಯಾಣ ಅಂತ್ಯವಾಗಿದೆ. ಹೊರಬರುವ ವೇಳೆ ಚಕ್ರವರ್ತಿಗೆ ಶಾಕ್ ನೀಡಿದ್ದು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಚಕ್ರವರ್ತಿ ಮಾತಿಗೆ ಬೀಪ್ ಹಾಕಿ ಸುಸ್ತಾಗಿದ್ದ  ಬಿಗ್ ಬಾಸ್ ಇಂದು  ಬ್ಲರ್ ಮಾಡಬೇಕಾದ ಸ್ಥಿತಿಗೂ ಬಂದರು. ಬಿಗ್ ಬಾಸ್ ಮನೆಯಿಂದ ಹೊರಹೋಗುತ್ತಿರುವ ಪ್ರಿಯಾಂಕಾ ಅವರಿಗೆ ವಿಶೇಷ ಅಧಿಕಾರ ನೀಡಿ ನೀವು ಮುಂದಿನ ವಾರಕ್ಕೆ ನೇರವಾಗಿ ಯಾರನ್ನು ನಾಮಿನೇಟ್ ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ  ಉತ್ತರಿಸಿದಿದ ಪ್ರಿಯಾಂಕಾ  ಚಕ್ರವರ್ತಿ ಅವರ ಹೆಸರು  ಹೇಳಿದರು.

ಬರುವಾಗ ಚಕ್ರವರ್ತಿಗೆ ದೊಡ್ಡ ಆಘಾತ ಕೊಟ್ಟು ಮನೆಯಿಂದ ಹೊರಬಂದ ಪ್ರಿಯಾಂಕಾ

ಮನೆಯ ಬಾಕಿಯವರೆಲ್ಲರೂ ಪ್ರಿಯಾಂಕಾ ಅವರನ್ನು ಕಳಿಸಿಕೊಡಲು  ಬಂದಿದ್ದರೆ ಚಕ್ರವರ್ತಿ ಸೋಫಾದ ಮೇಲೆಯೇ ಕುಳಿತಿದ್ದರು. ಪ್ರಿಯಾಂಕಾ ನಾಮಿನೇಟ್ ಮಾಡಿದಾಗ ಮಿಡಲ್ ಫಿಂಗರ್ ತೋರಿಸಿದ್ದು ಚರ್ಚೆಗೆ ಕಾರಣವಾಯಿತು. ಈ ವೇಳೇ ಅಲ್ಲಿಗೆ ಹೋದ ಪ್ರಶಾಂತ್ ಇದು ಪಬ್ಲಿಕ್ ಡೋಮೇನ್ ಇಂಥ ಸನ್ನೆ ಮಾಡುವುದು ಸರಿ ಅಲ್ಲ ಎಂದು ತಿಳಿಸಿದರು.

ಒಟ್ಟಿನಲ್ಲಿ  ಕಳಪೆ ಬೋರ್ಡ್ ಹೊತ್ತು ಕಳೆದ ವಾರ ಜೈಲು ಸೇರಿದ್ದ ಚಕ್ರವರ್ತಿ ಅನೇಕ  ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಈಗ ನಾಮಿನೇಟ್ ಆದ ವೇಳೆ ಇಂಥದ್ದೊಂದು ಸೈನ್ ತೋರಿಸಿದ್ದು ಆಕ್ರೋಶಕ್ಕೆ ಕಾರಣವಾಗುತ್ತಿದೆ. 

 

Follow Us:
Download App:
  • android
  • ios