Asianet Suvarna News Asianet Suvarna News

Big Boss Finale: ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಕಿರೀಟ, ರಾಕೇಶ್​ ಅಡಿಗ ರನ್ನರ್ ಅಪ್

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9ರ ಆಟಕ್ಕೆ ಬ್ರೇಕ್ ಬಿದ್ದಿದ್ದು, ರೂಪೇಶ್ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗ್ರ್ಯಾಂಡ್​ ಫಿನಾಲೆಯಲ್ಲಿ ರೂಪೇಶ್ ಹಾಗೂ ​ರಾಕೇಶ್ ನಡುವೆ ಬಿಗ್​ ಫೈಟ್​ ಏರ್ಪಟ್ಟಿತ್ತು.

bigg boss kannada 9 winner is roopesh shetty gvd
Author
First Published Dec 31, 2022, 9:15 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9ರ ಆಟಕ್ಕೆ ಬ್ರೇಕ್ ಬಿದ್ದಿದ್ದು, ರೂಪೇಶ್ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗ್ರ್ಯಾಂಡ್​ ಫಿನಾಲೆಯಲ್ಲಿ ರೂಪೇಶ್ ಹಾಗೂ ​ರಾಕೇಶ್ ನಡುವೆ ಬಿಗ್​ ಫೈಟ್​ ಏರ್ಪಟ್ಟಿತ್ತು. ಈ ವೇಳೆ ಕಿಚ್ಚ ಸುದೀಪ್ ಇಬ್ಬರ ಕೈ ಹಿಡಿದು ಸ್ಪರ್ಧಿಗಳಿಗೆ ಟೆನ್ಷನ್ ಕೊಟ್ಟು ಬಳಿಕ ರೂಪೇಶ್​ ಶೆಟ್ಟಿಯನ್ನು ಬಿಗ್​ ಬಾಸ್ ಸೀಸನ್​ 9 ವಿನ್ನರ್​ ಎಂದು ಘೋಷಣೆ ಮಾಡಿದ್ದಾರೆ. ರನ್ನರ್ ಅಪ್ ಪಟ್ಟ ರಾಕೇಶ್ ಅಡಿಗಗೆ ಸಿಕ್ಕಿದೆ. ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ರೂಪೇಶ್ ಶೆಟ್ಟಿ ಸಂಚಲನ ಮೂಡಿಸಿದ್ದರು ಹಾಗೂ ಆರ್​ಜೆ ಆಗಿ ಕೂಡಾ ಫೇಮಸ್. 'ಗಿರಿಗಿಟ್' ಚಿತ್ರದ ಮೂಲಕ ಸೂಪರ್ ಸಕ್ಸಸನ್ನು ಕಂಡಿದ್ದರು. 

ಈ ಚಿತ್ರದ ನಟನೆ ನೋಡಿಯೇ, ಬಿಗ್ ಬಾಸ್‌ಗೆ ಬರಲು ರೂಪೇಶ್ ಶೆಟ್ಟಿಗೆ ಅವಕಾಶ ಸಿಕ್ಕಿತ್ತು. ಒಟಿಟಿ ಮತ್ತು ಟಿವಿ ಬಿಗ್‌ಬಾಸ್ ಎರಡರಲ್ಲೂ ಸ್ಟ್ರಾಂಗ್‌ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು. ಇನ್ನು ಟಾಪ್ 5 ಫೈನಲಿಸ್ಟ್‌ಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿದ್ದರು. ರಾಕೇಶ್ ಅಡಿಗ, ದೀಪಿಕಾ ದಾಸ್, ರಾಜಣ್ಣಗೆ ಭಾರೀ ಪೈಪೋಟಿ ಕೊಟ್ಟು ಇದೀಗ ರೂಪೇಶ್ ಬಿಗ್‌ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ. ಇನ್ನು ಬಿಗ್​ ಬಾಸ್​ ಮನೆಯಲ್ಲಿ ಕೂಲ್ ಆಗಿ ಆಟವಾಡಿಕೊಂಡು ಬಂದಿದ್ದ ರಾಕೇಶ್​ಗೆ ರನ್ನರ್ ಅಪ್ ಪಟ್ಟ ಸಿಕ್ಕಿದೆ. ನಟ ರಾಕೇಶ್​ ಹಾಗೂ ರೂಪೇಶ್​ ಇಬ್ಬರು ಓಟಿಟಿಯಿಂದ ಬಿಗ್ ಬಾಸ್​ ಸೀಸನ್ 9ಗೆ ಪ್ರವೇಶ ಪಡೆದಿದ್ದರು. ರಾಕೇಶ್​ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ.

ಈಗಲೂ ಭಾವನೆ ಇದ್ಯಾ?; ಹೊರ ಬರ್ತಿದ್ದಂತೆ ಸಾನ್ಯಾ ತಬ್ಬಿಕೊಂಡು ಈ ಪ್ರಶ್ನೆ ಕೇಳಬೇಕಂತೆ ರೂಪೇಶ್

ಕೊನೆತನಕ ಫೈಟ್​ ನೀಡಿದ್ದ ದೀಪಿಕಾ ದಾಸ್​ ಅವರು ಎಲಿಮಿನೇಟ್​ ಆಗಿ ಸೆಕೆಂಡ್​ ರನ್ನರ್​ ಅಪ್ ಆದರು. ಆದರೆ ಟ್ರೋಫಿ ಪಡೆಯಬೇಕು ಎಂಬ ಅವರ ಆಸೆ ಮಾತ್ರ ಈಡೇರಿಲ್ಲ. ಅಲ್ಲದೇ 'ಎರಡನೆಯವಳು ನಾನಾಗಬೇಕು' ಎಂದು ದೀಪಿಕಾ ದಾಸ್​ ಹೇಳಿದ್ದರು. ಆದರೆ ಈ ಕನಸು ಭಗ್ನ ಆಗಿದೆ ಎಂದು ದೀಪಿಕಾ ದಾಸ್​ ಹೇಳಿಕೊಂಡಿದ್ದಾರೆ. ಈ ಬಾರಿ ದಿವ್ಯಾ ಉರುಡುಗ ಕೂಡಾ ಫಿನಾಲೆ ತನಕ ಬಂದಿದ್ದಾರೆ.

BBK 9: ಮಗ ರೂಪಿ, ಈ ಟಾಸ್ಕ್‌ ನೀನೇ ಗೆಲ್ಲಬೇಕಿತ್ತು! ತಂದೆ ಪ್ರೇಮದಲ್ಲಿ ಕಣ್ಣೀರಾದ ಆರ್ಯವರ್ಧನ್

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಸ್ಪರ್ಧಿಗಳು: ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

Follow Us:
Download App:
  • android
  • ios