Asianet Suvarna News Asianet Suvarna News

BBK9; ಬಿಗ್ ಮನೆಯಲ್ಲಿ ಕಿಚ್ಚು ಹೊತ್ತಿಸಿದ ಚಿನ್ನದ ಗಣಿ, ಇಲ್ಲಿ ರಾಜಾಹುಲಿ ಯಾರು ರಾಜಾ ಇಲಿ ಯಾರು?

ಬಿಗ್ ಬಾಸ್ ಮೂರನೆ ವಾರದ ಎರಡನೇ ದಿನದ ಪ್ರೋಮೋ ರಿಲೀಸ್ ಆಗಿದೆ. ಕ್ಯಾಪ್ಟನ್ಸಿ ಅಧಿಕಾರ ಬೇಕು ಅಂದ್ರೆ ಚಿನ್ನದ ಗಣಿಯಲ್ಲಿ ಬೆವರು ಸುರಿಸ್ಬೇಕು. ಚಿನ್ನಕ್ಕಾಗಿ ಸ್ಪರ್ಧಿಗಳು  ಕಿತ್ತಾಡುತ್ತಿದ್ದಾರೆ. 

Bigg boss kannada 9 fight between Prashanth sambargi and rupesh rajanna for Gold mining task sgk
Author
First Published Oct 11, 2022, 1:17 PM IST

ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ 3ನೇ ವಾರಕ್ಕೆ ಕಾಲಿಟ್ಟಿದೆ. ಎರಡನೇ ವಾರ ಬಿಗ್ ಬಾಸ್ ಮನೆಯಿಂದ ನವಾಜ್ ಎಲಿಮಿನೇಟ್ ಹೊರ ಹೋಗಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಜೊತೆ ಅಳು, ನಗು, ಕಿತ್ತಾಟ, ವಾಗ್ವಾದ ಕೂಡ ಜೋರಾಗಿದೆ. ಈ ವಾರ ಕೂಡ ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟ ಹೆಚ್ಚಾಗಿದೆ. ಕ್ಯಾಪ್ಟನ್ಸಿ ಟಾಸ್ಕ್‌‌ಗಾಗಿ ಬಿಗ್ ಮನೆ ಹೊತ್ತಿ ಉರಿದಿದೆ. ಕ್ಯಾಪ್ಟನ್ ಆಯ್ಕೆಗೆ ಬಿಗ್ ಬಾಸ್ ಚಿನ್ನದ ಗಣಿ ಟಾಸ್ಕ್ ನೀಡಿದೆ. ಚಿನ್ನಕ್ಕಾಗಿ ಬಿಗ್ ಸ್ಪರ್ಧಿಗಳ ನಡುವೆ ಕಿತ್ತಾಟ ಜೋರಾಗಿದೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರಗಿ ನಡುವೆ ಚಿನ್ನದ ಕಿಚ್ಚು ಉಳಿದ ಸ್ಪರ್ಧಿಗಳಿಗೆ ಶಾಕ್ ನೀಡಿದೆ. 

ಬಿಗ್ ಬಾಸ್ ಮೂರನೆ ವಾರದ ಎರಡನೇ ದಿನದ ಪ್ರೋಮೋ ರಿಲೀಸ್ ಆಗಿದೆ. ಕ್ಯಾಪ್ಟನ್ಸಿ ಅಧಿಕಾರ ಬೇಕು ಅಂದ್ರೆ ಚಿನ್ನದ ಗಣಿಯಲ್ಲಿ ಬೆವರು ಸುರಿಸ್ಬೇಕು. ಚಿನ್ನಕ್ಕಾಗಿ ಸ್ಪರ್ಧಿಗಳು  ಕಿತ್ತಾಡುತ್ತಿದ್ದಾರೆ. ರೂಪೇಶ್ ಮತ್ತು ವಿನೋದ್ ನಡುವೆ ವಾಗ್ವಾದ ತಾರಕಕ್ಕೇರಿದೆ. ಇಬ್ಬರ ಜಗಳ ನೋಡಿ ಪ್ರಶಾಂತ್ ಸಂಬರಗಿ ಜೋರಾಗಿ ನಗುತ್ತಾ ವ್ಯಂಗ್ಯ ಮಾಡುತ್ತಿದ್ದಾರೆ. ಈ ಟಾಸ್ಕ್ ಪ್ರಕಾರ ಎದುರಾಳಿ ಸದಸ್ಯರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಹಾಕಬೇಕು. ಯಾರು ಹೆಚ್ಚು ಚಿನ್ನ ತೆಗೆಯುತ್ತಾರೆ ಎನ್ನುವುದರ ಮೇಲೆ ಈ ಟಾಸ್ಕ್ ನಿಂತಿದೆ. ಚಿನ್ನಕ್ಕಾಗಿ ಎಲ್ಲರೂ ಮುಗಿಬಿದ್ದಾರೆ. 

ರೂಪೇಶ್ ರಾಜಣ್ಣ, ಪ್ರಶಾಂತ್ ವಿರುದ್ಧ ಮುಗಿಬಿದ್ದಾರೆ. ಕುಂತ್ರಿ ಅಂತ ಎಲ್ಲರೂ ಸರಿಯಾಗಿ ಕೊಟ್ಟಿದ್ದಾರೆ ಎಂದು ಗರಂ ಆಗಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಪ್ರಸಾಂತ್ ಸಂಬರಗಿ ನಗುತ್ತಲೇ ಟಾಸ್ಕ್ ನಲ್ಲಿ ಭಾಗಿಯಾಗಿದ್ದಾರೆ. ರೂಪೇಶ್‌ಗೆ ಪ್ರಶಾಂತ್ ರಾಜಹುಲಿ ಜಯವಾಗಲಿ ಎಂದು ಕಾಲೆಳೆದರು. ಇದರಿಂದ ಮತ್ತಷ್ಟು ಕೋಪಗೊಂಡ ರೂಪೇಸ್ ರಾಜಣ್ಣ ನೀನೇನು ರಾಜ ಇಲಿನಾ ಎಂದು ತಿರುಗೇಟು ನೀಡಿದರು. ಈ ಪ್ರೋಮೋ ಸದ್ಯ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ತುಂಬಾ ಇಂಟ್ರಸ್ಟಿಂಗ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ರೂಪೇಶ್ ರಾಜಣ್ಣ ಈ ವಾರ ಹೆಚ್ಚು ಆಕ್ಟೀವ್ ಆಗಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಎಂದಿನಂತೆ ಪ್ರಶಾಂತ್ ಸಂಬರ್ಗಿ ಅವರ ಅಬ್ಬರ ಜೊರಾಗಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಇವತ್ತಿನ ಬಿಗ್ ಬಾಸ್ ಶೇ ನೋಡಲು ರಾತ್ರಿ 9.30ರ ವರೆಗೂ ಕಾಯಲೇ ಬೇಕು. 

BBK9 ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ; ತಾಳ್ಮೆ ಹೆಚ್ಚಾಗಿದೆ ಅಂದಿದಕ್ಕೆ ಕಣ್ಣೀರಿಟ್ಟ ನಟಿ

ಬಿಗ್ ಬಾಸ್ 9 ಸ್ಪರ್ಧಿಗಳು

ಅಂದಹಾಗೆ ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9 ಬಿಗ್ ಬಾಸ್ ಮನೆಯಿಂದ ಸೈಕ್ ನವಾಜ್ ಔಟ್; ಜೀವನದ ಪಾಠ ಹೇಳಿದ ಕಿಚ್ಚ!

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಜೊತೆಗೆ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 16 ಮಂದಿ ಮನೆಯಲ್ಲಿದ್ದಾರೆ. ಮೂರನೇ ವಾರ ಯಾರು ಹೊರಹೋಗುತ್ತಾರೆ ಎಂದು ಕಾದುನೋಡಬೇಕಿದೆ. 

Follow Us:
Download App:
  • android
  • ios