*  ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಔಟ್* ಫಿನಾಲೆಗೆ ಹತ್ತಿರವಾಗುತ್ತಿರುವ ಬಿಗ್ ಬಾಸ್* ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶ ಮಾಡಿದ್ದರು. 

ಬೆಂಗಳೂರು(ಜು. 18) ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ ಸುದೀಪ್ ಅನೇಕ ವಿಚಾರಗಳನ್ನು ಮನೆಯವರಿಂದ ಹೊರಹಾಕಿದರು. ಅರವಿಂದ್ ಅವರ ವೀಕ್ ನೆಸ್ ಏನು ಎಂಬುದನ್ನು ತಿಳಿದುಕೊಳ್ಳಲು ಮನೆಯವರಿಂದ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಮನೆಯ ಬಹುತೇಕರು ಯೆಸ್ ಕೊಟ್ಟರು. ಮಂಜು ಮತ್ತು ಪ್ರಶಾಂತ್ ಮಾತ್ರ ನೋ ಎಂದು ಹೇಳಿದರು. ನನಗೆ ಇರುವ ವೀಕ್ ನೆಸ್ ನನಗೆ ಗೊತ್ತಿಲ್ಲ. ಸಾಹಿತ್ಯ ಮತ್ತು ಸಿನಿಮಾ ರಿಲೇಟೆಡ್ ವಿಷಯಗಳಲ್ಲಿ ಸಣ್ಣ ವೀಕ್ ನೆಸ್ ಇದೆ ಎಂದರು.

Add Asianetnews Kannada as a Preferred SourcegooglePreferred

ಈ ವಾರದ ಕಿಚ್ಚನ ಚಪ್ಪಾಳೆ ಬಹಳ ಕುತೂಹಲಕಾರಿಯಾಗಿತ್ತು. ಕಳೆದ ವಾರ ಯಾರಿಗೂ ಸಿಕ್ಕಿರಲಿಲ್ಲ. ಎರಡೂ ಇನಿಂಗ್ಸ್ ನಲ್ಲಿಯೂ ಚೆನ್ನಾಗಿ ಆಡಿದ್ದಾರೆ. ದೇಹಕ್ಕೆ ಏಟಾದರೂ ಪ್ರೀತಿಯಿಂದ, ಪಾಸಿಟಿವ್ ಆಗಿ ಆಟ ಆಡುತ್ತಿರುವ ದಿವ್ಯಾ ಯು. ಅವರಿಗೆ ಸಲ್ಲುತ್ತದೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಶುಭಾ ಮತ್ತು ಅರವಿಂದ್ಗೂ ಕಿಚ್ಚ ವಾರದ ಆಟಕ್ಕೆ ಮೆಚ್ಚುಗೆ ಸೂಚಿಸಿದರು.

ಚಕ್ರವರ್ತಿಯ ಮಾತುಗಳಿಂದ ಬೀಪ್ ಹಾಕಿ ಸುಸ್ತಾದ ಬಿಗ್ ಬಾಸ್

ಮೊದಲನೆಯವರಾಗಿ ಶುಭಾ ಪೂಂಜಾ ಸೇವ್ ಆದರು. ಇದಾದ ಮೇಲೆ ಪ್ರಶಾಂತ್ ಸಂಬರಗಿ ಸೇವ್ ಆದರು. ಮನೆಯಿಂದ ಪ್ರಿಯಾಂಕಾ ತಿಮ್ಮೇಶ್ ಪ್ರಯಾಣ ಮುಗಿಸಿ ಹೊರಬಂದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶ ಮಾಡಿದ್ದ ಪ್ರಿಯಾಂಕಾ ನೇರ ನುಡಿಗೆ ಹೆಸರಾಗಿದ್ದರು. ಪ್ರಶಾಂತ್ ಸಂಬರಗಿ ಮತ್ತೆ ಆಟ ಕಾಯ್ದುಕೊಂಡಿದ್ದಾರೆ. ಮನೆಯಿಂದ ಹೊರಗೆ ಬರುವ ವೇಳೆ ಪ್ರಿಯಾಂಕಾ ಚಕ್ರವರ್ತಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದ ಮೂಲಕ ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.