ಬಿಗ್ ಬಾಸ್ ಮನೆಯಲ್ಲಿ ಸೂರ್ಯ ಗ್ರಹಣದ ಗಂಭೀರ ಚರ್ಚೆಯಾಯಿತು. ಪ್ರಿಯಾಂಕಾ-ಹರೀಶ್ ರಾಜ್ ಮತ್ತು ಸುದೀಪ್ ಮಧ್ಯೆ ಮೊದಲು ಪ್ರಶ್ನೋತ್ತರ ಮಾಲೆ ನಡೆಯುತು. ಸೂರ್ಯ-ಚಂದ್ರ-ಭೂಮಿ ಎಂದುಕೊಂಡು ಮನೆಯವರು ಸುದೀಪ್ ಅವರನ್ನೇ ಕನ್ ಫ್ಯೂಸ್ ಮಾಡಿ ಬಿಟ್ಟರು. ಸುದೀಪ್ ಸಹ ಅಷ್ಟೆ ಮಜಾ ತೆಗೆದುಕೊಂಡರು. ದೀಪಿಕಾ ಮಾತ್ರ ತನಗೆ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡರು.

ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಹ ಅಷ್ಟೆ ಕುತೂಹಲಕಾರಿಯಾಗಿತ್ತು. ಚಪ್ಪಾಳೆ ಸಿಗಬೇಕು ಎಂದರೆ ಆಳ್ ರೌಂಡರ್ ಆಟ ನೀಡಬೇಕು. ಈ ವಾರ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಕುರಿ ಪ್ರತಾಪ್ ಅವರಿಗೆ ಸಿಕ್ಕಿತು. ಕುರಿ ಪ್ರತಾಪ್ ಇಂಗ್ಲಿಷ್ ನಲ್ಲಿ ಧನ್ಯವಾದ ಹೇಳಿದ್ದು ಮತ್ತಷ್ಟು ನಗೆ ಮೂಡಿಸಿತು.

'ವಾಸುಕಿ ಅಲ್ಲಿಂದ ಕೈ ತೆಗಿ, ಗದರಿದ ಪ್ರಿಯಾಂಕಾ'

ಶನಿವಾರದ ಸಂಚಿಕೆಯಲ್ಲಿ ಇಬ್ಬರು ಸೇವ್ ಆಗ್ತೀರಿ ಎಂದು ಸುದೀಪ್ ಹೇಳಿದರು. ಮೊದಲನೆಯವರಾಗಿ ವಾಸುಕಿ ವೈಭವ್ ಸೇವ್ ಆದರು. ನಾನು ಎಲ್ಲಿತನಕ ಮನೋರಂಜನೆ ನೀಡುತ್ತೇನೆ ಅಲ್ಲಿಯವರೆಗೂ ಸೇವ್ ಮಾಡಿ ಎಂದು ವಾಸುಕಿ ಧನ್ಯವಾದ ಹೇಳಿದರು. 

ಎರಡನೆಯವರಾಗಿ ಶೈನ್ ಶೆಟ್ಟಿ ಸೇವ್ ಆದರು. ನಾಮಿನೇಟ್ ಆದಾಗ ಸಪೋರ್ಟ್ ಮಾಡಿ ಎಂದು ಹೇಳಿದರು. ಭೂಮಿ ಶೆಟ್ಟಿ, ಚೈತ್ರಾ ಕೊಟ್ಟೂರು ಮತ್ತು ಚಂದನ್ ಆಚಾರ್ ಅವರು ಡೇಂಜರ್ ಝೋನ್ ನಲ್ಲಿ ಕುಳಿತುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ ನಲ್ಲಿ ರಿವೀಲ್ ಆಗಲಿದೆ. ಸಿಕ್ರೇಟ್ ರೂಂಗೆ ಮನೆಯಿಂದ ಹೊರಬರುವವರನ್ನು ಕಳಿಸಲಾಗುತ್ತದೆ ಎಂದು ಹೇಳಲಾಗಿದೆ.