ಮನೆಗೆ ಬಂದ ಚೈತ್ರಾ ಕೊಟ್ಟೂರು ಡ್ರೆಸ್ ಸೇನ್ಸ್ ಬದಲಾಗಿದೆ.  ಬದಲಾಗಿದ್ದಕ್ಕೆ ಕಾರಣವನ್ನು ಅವರೇ ಹೇಳಿದ್ದಾರೆ. ಮೊದಲು ನಾನು ಹೀಗೆ ಇರಲಿಲ್ಲ. ಮನೆಯಲ್ಲಿ ಇರುವವರು ಅವರವರೇ ಗ್ರೂಪ್ ಮಾಡಿಕೊಂಡಿದ್ದಾರೆ. ಹಾಗಾಗಿ ನಾಮಿನೇಶನ್ ವಿಚಾರ ಬಂದಾಗ ನಾವು ಅವರ ಕೈಗೆ ಸುಲಭವಾಗಿ ಸಿಕ್ಕಿ ಬೀಳುತ್ತಿದ್ದೇವು ಎಂದು ರಕ್ಷಾ ಬಳಿ ಕಸ ಗುಡಿಸುತ್ತಲೇ ಚೈತ್ರಾ ಕೊಟ್ಟೂರು ಹೇಳಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಚಂದನ ಆಚಾರ್ ಸಹ ಇದಕ್ಕೆ ಧ್ವನಿ ಗೂಡಿಸಿದ್ದಾರೆ.

ಬಿಗ್ ಬಾಸ್ ಒಂದಿಷ್ಟು ಸಾಮಗ್ರಿಗಳನ್ನು ನೀಡಿ ತೆಪ್ಪ ರಚಿಸಿ ಮನೆಯ ಮಂದಿ ಅದನ್ನು ಬಳಸಿಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳಬೇಕು ಎಂದಿದ್ದರು. ಶೈನ್ ಅವರ ಐಡಿಯಾ ಉಪಯೋಗಿಸಿ ತೆಪ್ಪ ಸಿದ್ಧ ಮಾಡಲಾಯಿತು.  ಅಂಬಿಗನಾಗಿ ಕಾಣಿಸಿಕೊಂಡ ಶೈನ್ ಶೆಟ್ಟಿ ಒಬ್ಬೊಬ್ಬರಾಗಿ ಎಲ್ಲರನ್ನು ದಾಟಿಸಿ ಮನೆಯವರ ಮೆಚ್ಚುಗೆ ಪಡೆದುಕೊಂಡರು.

ಬಿಗ್ ಬಾಸ್ ಮನೆಯಲ್ಲಿ ಗಂಡ-ಹೆಂಡತಿ ಮೀರಿದ ರೋಮಾನ್ಸ್..ಅಬ್ಬಬ್ಬೋ!

ಬಿಗ್ ಬಾಸ್ ಈಜುಕೋಳಕ್ಕೆ ಧುಮುಕಲು ಆದೇಶಿಸುತ್ತಾರೆ ಎಂದು ಹೇಳಿ ಹೊಸ ಹುಡುಗಿ ರಕ್ಷಾ ಸೋಮಶೇಖರ್ ಅವರನ್ನು ಪೃಥ್ವಿ ಗೆ ಮಾಡಿದಂತೆ ಫ್ರಾಂಕ್ ಮಾಡಿ ಈಜುಕೋಳಕ್ಕೆ ಧುಮುಕುವಂತೆ ಮಾಡಲಾಯಿತು.

ಈ ನಡುವೆ ಬಿಗ್ ಬಾಸ್ ದೀಪಿಕಾಗೆ ಸೀಕ್ರೆಟ್ ಟಾಸ್ಕ್ ಒಂದನ್ನು ನೀಡಿ ನೀವು ಹೇಗಾದರೂ ನಂಚಿಸಿ ಈ ವಾರದ ಕೊನೆಯೊಳಗೆ ಶೈನ್ ಶೆಟ್ಟಿ ಅವರ ಗಡ್ಡ ತೆಗಿಸಬೇಕು ಇಲ್ಲವೇ ಟ್ರಿಮ್ ಮಾಡಿಸಬೇಕು. ಹಾಗೆ ಮಾಡಿದರೆ 300 ಅಂಕ ಸಿಗಲಿದೆ ಎಂಬ ಆಮಿಷವನ್ನು ಮುಂದೆ ಇಟ್ಟರು.