ಬಿಗ್ ಬಾಸ್ ಮನೆ ಅಂದ ಮೇಲೆ ಗಲಾಟೆ, ಕೋಪ, ರೋಮ್ಯಾನ್ಸ್ ಎಲ್ಲವೂ ಇರಲೇಬೇಕು. ಹಿಂದಿಯ ಬಿಗ್ ಬಾಸ್ ಸೀಸನ್ 13ರ ದೃಶ್ಯವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಸ್ಪರ್ಧಿಗಳ ರೊಮ್ಯಾನ್ಸ್ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಇದೀಗ ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 13ನೇ ಆವೃತ್ತಿಯಲ್ಲಿ ಸ್ಪರ್ಧಿಗಳು ಮೈ ಮರೆತು ಫುಲ್ ರೋಮ್ಯಾನ್ಸ್ ಮಾಡಿದ್ದಾರೆ. ಸಿದ್ದಾರ್ಥ್ ಹಾಗೂ ರಶ್ಮಿ ದೇಸಾಯಿ ರೊಮ್ಯಾನ್ಸ್ ಯಾವ ಹಾಟ್ ಸಾಂಗ್‌ ಗೂ ಕಡಿಮೆ ಇಲ್ಲ.

ಬಿಗ್ ಬಾಸ್ ಮನೆಯಲ್ಲಿ ಎಂಥೆಂಥಾ ಸ್ಟೆಪ್

ಆದರೆ ಇದರ ಅಸಲಿ ಕತೆ ಬೇರೆಯಿದೆ. ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್ ಆಗಿತ್ತಂತೆ. ಅಲ್ಲದೇ ಮೊಬೈಲ್ ಒಂದರಿಂದ ಶೂಟ್ ಮಾಡಲು ಹೇಳಲಾಗಿತ್ತಂತೆ. ಕನ್ನಡದ ಬಿಗ್ ಬಾಸ್ ಆವೃತ್ತಿಯಲ್ಲಿಯೂ ಇಂಥ ರೋಮ್ಯಾನ್ಸ್ ಬಂದರೆ ಏನಾಗಬಹುದು?