ಸೋಮವಾರದ ಎಪಿಸೋಡ್ ಆರಂಭವಾದ ತಕ್ಷಣವೇ ಬಿಗ್ ಬಾಸ್ ಈ ವಾರದ ನಾಮಿನೇಶನ್ ಪ್ರಕ್ರಿಯೆ ಆರಂಭವಾಗಲಿದ್ದು ಒಬ್ಬೊಬ್ಬರಾಗಿ ಕನ್ಫೆಶನ್ ರೂಂ ಗೆ ಬರುವಂತೆ ತಿಳಿಸಿದರು.

ಮನೆಯಲ್ಲಿ ನಾಮಿನೇಶನ್ ನಲ್ಲಿ 7 ಮತ ಪಡೆದುಕೊಂಡು ಮೊದಲ ಸ್ಥಾನದಲ್ಲಿ ಚಂದನ್ ಆಚಾರ್ ಇದ್ದರು. ಟಾಸ್ಕ್ ವೇಳೆ ರಾಜು ತಾಳಿಕೋಟೆ ಅವರ ಕೈ ಕಚ್ಚಿದ್ದು ಮತ್ತು ಕಿಶನ್ ಅವರ ವೀರಾವೇಶದ ವರ್ತನೆ ನಾಮಿನೇಶನ್ ನಲ್ಲಿ ಅವರಿಗೆ ಮುಳುವಾಯಿತು.

ಚಂದನ್ ಆಚಾರ್, ದೀಪಿಕಾ, ಕಿಶನ್ ಮತ್ತು ನೇರವಾಗಿ ನಾಮಿನೇಟ್ ಆಗಿರುವ ದೀಪಿಕಾ ಈ ಸಾರಿ ಬಲೆಯಲ್ಲಿ ಬಿದ್ದರು. ಕ್ಯಾಪ್ಟನ್ ಆಯ್ಕೆಯಲ್ಲಿ ಗೆದ್ದರೆ ನಾಮಿನೇಟ್ ಆದವರು ಇಮ್ಯೂನಿಟಿ ಪಡೆಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದರು. ’

‘ಬೇಕಾದರೆ ದೀಪಿಕಾ ಟಿ ಶರ್ಟ್ ಒಳಗೆ ಕೈಹಾಕಲು ಸಿದ್ಧ’

ಆದರೆ ಮರುದಿನ ನಡೆದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಗೆದ್ದ ಶೈನ್ ಶೆಟ್ಟಿ 6ನೇ ವಾರದ ಕ್ಯಾಪ್ಟನ್ ಆದರು. ಅಲ್ಲದೇ ಬಿಗ್ ಬಾಸ್ ಸೂಚನೆ ಮೇರೆಗೆ ಕುರಿ ಪ್ರತಾಪ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು.

ಇದಾದ ಮೇಲೆ ಮನೆಯಲ್ಲಿ ಗೇಮ್ ಗಳು ಶುರುವಾದವು.  ತಿರುಗುವ ಮಣೆ ಇಟ್ಟುಕೊಂಡು ಅಲ್ಲಿ ಯಾರ ಹೆಸರು ಬರುತ್ತದೆಯೋ ಅವರು ಮನೆಯವರು ಹೇಳಿದಂತೆ ಮಾಡಬೇಕು ಎಂಬ ಚಕ್ರವ್ಯೂಹ ಎಂಬ ಮೋಜಿನ ಚಟುವಟಿಕೆ ನೀಡಲಾಗಿತ್ತು.

ದೀಪಿಕಾ ದಾಸ್ ಅವರ ಹೆಸರು ಬಂದಾಗ ಅವರಿಗೆ ಈಜು ಕೋಳದಲ್ಲಿ ಸ್ವಿಮ್ ಮಾಡಿ ಬಂದು ನಾಟಿ ಟೀಚರ್ ಪಾತ್ರ ಮಾಡುವಂತೆ ಹೇಳಲಾಯಿತು. ಅಂತೆಯೇ ಈಜು ಕೋಳಕ್ಕೆ ಜಿಗಿದ ದೀಪಿಕಾ ನಾಟಿ ಟೀಚರ್ ಆದರು. ಈ ವೇಳೆ ಕಿಶನ್ ಅವರ ಬಳಿ ಮಾತನಾಡುತ್ತ ಮಾತನಾಡುತ್ತ ಅವರ ಕ್ಯಾಮರಾವನ್ನು ಹೊರತೆಗೆದು ಕ್ಯಾಮರಾವನ್ನು ಶೈನ್ ಬಳಿ ಕೊಟ್ಟು ಇಬ್ಬರು ಅಪ್ಪಿಕೊಂಡೇ ನೀರಿಗೆ ಧುಮುಕಿದರು. ಆದರೆ ತಮ್ಮ ಕ್ಯಾಮರಾ ಹೊರತೆಗೆಯಲು ಮರೆತಿದ್ದರು.