ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಈ ಬಾರಿ ಸುದೀಪ್  ಹಿಂದೆಂದೂ ಇಲ್ಲದ ರೀತಿ ಬಿಗ್ ಬಾಸ್ ನಡೆಸಿಕೊಟ್ಟರು. ಇಲ್ಲಿಯವರೆಗೂ ಹೇಳದ ರಹಸ್ಯವೊಂದನ್ನು ಹೇಳಿದರು.

ಮೊದಲ ಸಾರಿ ನಾಮಿನೇಶನ್ ಆದ ಸ್ಪರ್ಧಿಗಳು ಸೇವ್ ಆಗಬೇಕಿದ್ದರೆ ಯಾರು ಹೆಚ್ಚಿನ ಮತ ಪಡೆದುಕೊಂಡಿದ್ದಾರೆ ಅಂತ ಆರ್ಡರ್ ವೈಸ್ ನಲ್ಲಿಯೇ ಹೇಳುತ್ತಾ ಹೋದರು.

‘ಬೇಕಾದರೆ ದೀಪಿಕಾ ಟೀ ಶರ್ಟ್ ಒಳಗೂ ಕೈ ಹಾಕಲು ಸಿದ್ಧ’

ಮನೆಯವರೂ ಯಾರೂ ಊಹಿಸದ ರೀತಿ ಮತ ಬಿದ್ದಿದ್ದು ಮನೆಯವರಿಗೆಲ್ಲ ಅಚ್ಚರಿ ತಂದಿತು. ಅತಿ ಹೆಚ್ಚಿನ ಅಂದರೆ ಶೇ. 22 ಮತ ಪಡೆದುಕೊಂಡು ಶೈನ್ ಶೆಟ್ಟಿ ಮೊದಲನೆಯವತರಾಗಿ ಸೇವ್ ಆದರು. ಇದಾದ ನಂತರದಲ್ಲಿ ಎರಡನೇಯವರಾಗಿ ಚಂದನಾ, ಕುರಿ ಪ್ರತಾಪ್, ಚಂದನ್ ಆಚಾರ್, ಕಿಶನ್  ಸೇವ್ ಆದರು.

ಕಳೆದ ವಾರ 11 ಜನರನ್ನು ನಾಮಿನೇಶನ್ ಮಾಡಲಾಗಿತ್ತು. ಪೃಥ್ವಿ, ಹರೀಶ್ ರಾಜ್, ಜೈಜಗದೀಶ್, ಸುಜಾತಾ, ರಾಜು ತಾಳಿಕೋಟೆ  ಸಹ ಕೊನೆಯಲ್ಲಿ ಉಳಿದುಕೊಂಡಿದ್ದು ಯಾರು ಹೊರಹೋಗುತ್ತಾರೆ ಎನ್ನುವ ಕುತೂಹಲವನ್ನು ಸುದೀಪ್ ಇಟ್ಟುಕೊಂಡೆ ಶನಿವಾರದ ಎಪಿಸೋಡ್ ಮುಗಿಸಿದರು.