ಈ ಸಾರಿಯ ಬಿಗ್ ಬಾಸ್  ಮನೆ ಮುತ್ತಿನ ಮನೆಯಾಗಿ ಬದಲಾಗುತ್ತಿದೆ. ಕಿಶನ್ ಕಿಸ್ಸಿಂಗ್ ಸ್ಟಾರ್ ಆಗುತ್ತಿದ್ದಾರೆ. ಹಿಂದಿಯ ಇಮ್ರಾನ್ ಹಶ್ಮಿ ಅವರನ್ನೇ ಹಿಂದೆ ಹಾಕುತ್ತಿದ್ದಾರೆ. ಅವಕಾಶ ಸಿಕ್ಕಾಗ ಹೆಣ್ಣು ಮಕ್ಕಳಿಗೆ ಒಂದು ಮುತ್ತು ನೀಡಿಯೇ ಹೆಜ್ಜೆ ಹಿಂದಕ್ಕೆ ಇಡೋದು ಕಿಶನ್ ಸ್ಪೆಷಾಲಿಟಿ.

ಸುಂದರಿ ಚಂದನಾಳ ಸಮಾಧಾನ ಪಡಿಸುವ ಸಂದರ್ಭ ಕಿಶನ್ ಕೊಟ್ಟ ಕಿಸ್ ದೊಡ್ಡ ಸುದ್ದಿಯಾಗಿತ್ತು. ಅದಾದ ಮೇಲೆ ಹೆಣ್ಣು ಮಕ್ಕಳೆ ಪರಸ್ಪರ ಕಿಸ್ ಕೊಟ್ಟುಕೊಂಡಿದ್ದರು. ಇದನ್ನು ಕಂಡ ಗಾಯಕ ವಾಸುಕಿ ವೈಭವ್ ಹೌಹಾರಿದ್ದರು. ಒಂದಲ್ಲ ಎರಡೆರಡು ಸಾರಿ ಭೂಮಿ ಶೆಟ್ಟಿ ಮತ್ತು ದೀಪಿಕಾ ತುಟಿಗೆ ತುಟಿ ಒತ್ತಿದ್ದರು.

ಎಲ್ಲರೆದುರೇ ಭೂಮಿ-ದೀಪಿಕಾ ಲಿಪ್ ಲಾಕ್

ಇದೀಗ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮುತ್ತಿನ ಕತೆ ಅನಾವರಣವಾಗಿದೆ. ಕಿಸ್ ವಿಚಾರವನ್ನೇ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಿಶನ್ ಭೂಮಿ ಶೆಟ್ಟಿಗೆ ಕಿಸ್ ಮಾಡಿದ್ದಾರೆ. ಒದು ಕ್ಷಣ ಮನೆ ದಂಗಾಗಿ ಹೋಗಿದೆ.

ಸುಂದರಿ ಚಂದನಾಳಿಗೆ ಕಿಶನ್ ಮೊದಲ ಮುತ್ತು

ಅವಕಾಶ ಸಿಕ್ಕಾಗ ದೀಪಿಕಾ ಕೆನ್ನೆಗೂ ಈ ಕಿಸ್ಸಿಂಗ್ ಕುಮಾರ ಮುತ್ತು ಕೊಡದೇ ಬಿಟ್ಟಿಲ್ಲ. ಮನೆಯಲ್ಲಿರುವ, ಮನೆಯಲ್ಲಿದ್ದ ಎಲ್ಲ ಹೆಣ್ಣು ಮಕ್ಕಳಿಗೂ ಮುತ್ತಿನ ರುಚಿ ತೋರಿಸಿದ್ದಾನೆ.

ದೀಪಿಕಾಗೆ ಕಿಸ್ ಕೊಡುವುದು ಮೋಸ್ಟ್ ಡಿಫಿಕಲ್ಟ್ ಟಾಸ್ಕ್ ಆಗಿತ್ತು. ಅದನ್ನೇ ಮಾಡಿದ್ದೇನೆ ಎಂದು ಕಿಶನ್ ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಆ ದಿನ ಟಾಸ್ಕ್ ವೊಂದನ್ನು ಗೆದ್ದಾಗ ಗ್ಯಾಪ್ ನಲ್ಲಿ ದೀಪಿಕಾಗೂ ಕಿಸ್ ಮಾಡಿದ್ಧೇನೆ ಎಂದು ಕಿಶನ್ ಸಾವರಿಸಿಕೊಂಡೆ ಹೇಳಿದರು.

ಒಟ್ಟಿನಲ್ಲಿ ಮನೆಯಲ್ಲೊಬ್ಬ ಕಿಸ್ಸಿಂಗ್ ಸ್ಟಾರ್ ಹುಟ್ಟಿಕೊಂಡಿದ್ದಾನೆ. ಅಥವಾ ಆತ ಮೊದಲಿನಿಂದಲೂ ಹಾಗೇ ಿಇದ್ದಾನೆಯೋ ಗೊತ್ತಿಲ್ಲ. ಅವಕಾಶ ಸಿಕ್ಕಾಗ ಹೆಣ್ಣು ಮಕ್ಕಳ ಕೆನ್ನೆಗೆ ಮುತ್ತಿಡುವುದು ಇವನಿಗೊಂದು ಅಭ್ಯಾಸ ಆಗಿ ಬಿಟ್ಟಿದೆ.