ಚೈತ್ರಾ ಕೊಟ್ಟೂರು ಸುಮ್ಮನೆ ಕ್ಯಾಮರಾ ಮುಂದೆ ಒಬ್ಬರೆ ಹಲುಬುತ್ತಾರೆ. ಒಬ್ಬರೆ ಅಳುತ್ತಾರೆ. ಇನ್ನು ಕಾರಣವಿಲ್ಲದೇ ಅಳುವ ಭೂಮಿ ಶೆಟ್ಟಿಗೆ ಪ್ರಿಯಾಂಕ ಸಮಾಧಾನ ಮಾಡುತ್ತಾರೆ.

ಮಂಗಳವಾರದ ಆಟ ರಣಾಂಗಣ ಟಾಸ್ಕ್ ಹೊರಬಿದ್ದಾಗಲೇ ಮನೆಯಲ್ಲಿ ಗಲಾಟೆ, ಗೊಂದಲ ನಿರ್ಮಾಣವಾಗುವ ಲಕ್ಷಣಗಳು ಕಂಡುಬಂದಿದ್ದವು. ಬಿಗ್ ಬಾಸ್ ಮನೆ ಹೊರಗಿನಿಂದ ನೀಡುವ ವಸ್ತುಗಳನ್ನು ನಿರ್ಮಿಸಿ ಮನೆ ರೀತಿಯಲ್ಲಿ ಪ್ಲೋರ್ ಗಳನ್ನು ಕಟ್ಟಬೇಕು ಎಂದು ಸೂಚಿಸಲಾಗಿತ್ತು.

ಅಡಲ್ಟ್ ಸಿನಿಮಾದಲ್ಲಿ ನಟಿಸಿದ ಸ್ಪರ್ಧಿ ಬಿಗ್ ಬಾಸ್ ಮನೆಯೊಳಗಿದ್ದಾರೆ!

ಮನೆಯನ್ನು ಎಡು ತಂಡಗಳಾಗಿಯೂ ಮಾಡಲಾಗಿತ್ತು. ಒಂದು ತಂಡಕ್ಕೆ ಭೂಮಿ ಶೆಟ್ಟಿ ನಾಯಕಿಯಾದರೆ ಇನ್ನೊಂದಕ್ಕೆ ದೀಪಿಕಾ ದಾಸ್ ನಾಯಕಿಯಾದರು. ಮನೆಯಲ್ಲಿ ದೊಡ್ಡ ಜಟಾಪಟಿಗಳೆ ನಡೆದು ಹೋದವು.

ಬಿಗ್ ಬಾಸ್ ನೀಡಿದ್ದ ಬಾಲ್ ಬಳಸಿ ಇನ್ನೊಂದು ತಂಡ ನಿರ್ಮಾಣ ಮಾಡುವ ಗೋಪುರ ಕೆಡಗುವ ಸಾಧ್ಯತೆಯನ್ನು ನೀಡಲಾಗಿತ್ತು. ಒಂದು ಹಂತದಲ್ಲಿ ಜೈಜಗದೀಶ್ ಚೈತ್ರಾ ಕೊಟ್ಟೂರು ಅವರ ಮೇಲೆ ತೆಂಗಿನಕಾಯಿನ್ನು ಎಸೆದಿದ್ದು ದೊಡ್ಡ ಗಲಾಟೆಗೆ ಕಾರಣವಾಯಿತು.

ಟಾಸ್ಕ್ ಒಂದು ಹಂತದಲ್ಲಿ ಬ್ರೇಕ್ ನೀಡಿದ್ದಾಗ ಒಬ್ಬರನ್ನೊಬ್ಬರು ಸಮಾಧಾನ ಮಾಡುತ್ತಿದ್ದರು. ಈ ವೇಳೆ ಚಂದನಾ ಹತ್ತಿರ ಬಂದ ಡ್ಯಾನ್ಸರ್ ಕಿಶನ್ ಸಮಾಧಾನ ಪಡಿಸುವ ಭರದಲ್ಲಿ ಚಂದನಾರ ಕೆನ್ನೆಗೆ ಮುತ್ತು ನೀಡಿದರು. ಇದು ಸಹ ಸಣ್ಣ ಪ್ರಮಾಣದ ಚರ್ಚೆಗೆ ಕಾರಣವಾಯಿತು

ನಾನು ಮನೆಗೆ ಬಂದ ಮೇಲೆ ಇದೇ ಮೊದಲ ಸಾರಿ ಫ್ರಸ್ಟ್ರೇಟ್  ಆಗಿದ್ದೇನೆ. ಟಾಸ್ಕ್ ಸಂದರ್ಭದಲ್ಲಿ ಕೆಲವರು ನನ್ನ ಎದುರಗಡೆಯೇ ಕೈಹಾಕಿ ಹೋದರು ಎಂದು ಚಂದನಾ ಅಳಲು ತೋಡಿಕೊಂಡರು.