ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8ʼ ಸ್ಪರ್ಧಿ, ನಿರೂಪಕಿ ಚೈತ್ರಾ ವಾಸುದೇವನ್‌ ಅವರು ಮದುವೆಗೋಸ್ಕರ ವಿಶೇಷ ಸೀರೆ ಖರೀದಿ ಮಾಡಿದ್ದಾರೆ. ಈ ಸೀರೆ ಬೆಲೆಯಲ್ಲಿ ಸೆಕೆಂಡ್‌ಹ್ಯಾಂಡ್‌ ಸೀರೆ ಖರೀದಿ ಮಾಡಬಹುದಂತೆ.  

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಸ್ಪರ್ಧಿʼ ಚೈತ್ರಾ ವಾಸುದೇವನ್‌ ಅವರು ಮರು ಮದುವೆಯಾಗುತ್ತಿದ್ದಾರೆ. ಸರಳವಾಗಿ ಮದುವೆಯಾಗ್ತಿದ್ದೇನೆ, ಆದರೂ ಸ್ವಲ್ಪ ವಿಶೇಷ ಅರೇಂಜ್‌ಮೆಂಟ್ಸ್‌ ಕೂಡ ಇರಲಿದೆ ಎಂದು ಅವರು ಹೇಳಿದ್ದರು. ಈಗ ಇವರ ಸೀರೆ ಬೆಲೆ, ಸೀರೆ ಬೋರ್ಡರ್‌ಗೆ ಮತ್ತೆ ಡಿಸೈನ್‌ ಮಾಡಿದ್ದು ನೋಡಿದ್ರೆ ಅದೇ ದುಡ್ಡಲ್ಲಿ, ಸೆಕೆಂಡ್‌ ಹ್ಯಾಂಡ್‌ ಕಾರ್‌ ತಗೋಬಹುದು ಎಂದು ಅನಿಸುವುದು. 

ವಿಶೇಷ ಸೀರೆ ಡಿಸೈನ್‌ ಮಾಡಿಸಿಕೊಂಡ್ರು! 
ಹೌದು, ಚೈತ್ರಾ ವಾಸುದೇವನ್‌ ಅವರಿಗೆ ಬಟ್ಟೆಗಳೆಂದರೆ ತುಂಬ ಇಷ್ಟ. ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ ಒಪನ್‌ ಮಾಡಿ ನೋಡಿದ್ರೆ ಅಲ್ಲಿ, ವಿವಿಧ ಸ್ಟೈಲ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿರೋದು ಕಾಣುವುದು. ಈಗ ಅವರು ಮದುವೆ ಪ್ರಯುಕ್ತ ವಿಶೇಷ ಸೀರೆ ಡಿಸೈನ್‌ ಕೂಡ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ಕಂಚಿಯಿಂದ ತಂದ ಸೀರೆ! 
ಚೈತ್ರಾ ವಾಸುದೇವನ್‌ ಅವರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಸೀರೆ ಖರೀದಿ ಮಾಡಿದ್ದಾರೆ. ಕಂಚಿಯಿಂದಲೇ ಈ ಸೀರೆ ಖರೀದಿಸಿದ್ದಾರೆ. ಚೈತ್ರಾ ಇಷ್ಟಪಟ್ಟ ಸೀರೆ ಸಿಂಗಲ್‌ ಪೀಸ್‌ ಇತ್ತು. ಹೀಗಾಗಿ ಚೈತ್ರಾ ಅವರು ದುಬಾರಿಯಾದರೂ ಕೂಡ ಆ ಸೀರೆ ಖರೀದಿಸಿದ್ದಾರೆ. ಇನ್ನು ಚೈತ್ರಾ ಅವರು ಆ ಸೀರೆ ಬೋರ್ಡರ್‌ಗೆ ಇನ್ನೊಂದಿಷ್ಟು ಡಿಸೈನ್‌ ಕೂಡ ಮಾಡಿಸುತ್ತಿದ್ದಾರೆ. ಹೊಸ ಡಿಸೈನರ್‌ ಬಳಿ ಆ ಸೀರೆ ಡಿಸೈನ್‌ ಮಾಡಲು ಕೊಟ್ಟಿದ್ದರು. ಇನ್ನೂ ಆ ಸೀರೆ ರೆಡಿಯಾಗಿ ಬಂದಿಲ್ಲ. ಈ ಸೀರೆ ಡಿಸೈನ್‌ಗೆ ಎಷ್ಟು ಬಿಲ್‌ ಹಾಕುತ್ತಾರೆ ಎಂದು ಚೈತ್ರಾಗೂ ಕೂಡ ಗೊತ್ತಿಲ್ವಂತೆ. 

'ಬ್ರೇಕಪ್‌ ಆದ ಬೇಸರಕ್ಕೆ ಬಿಕಿನಿ ಬಾಡಿ ಮಾಡಿದೆ, ಬ್ರೇಕ್‌ ಬೇಕು ಅಂತ ಬಾಲಿಗೆ ಹೋದೆ': Actress Namratha Gowda

ಪರಿಚಯ ಆಗಿದ್ದು ಹೇಗೆ? 
ಚೈತ್ರಾ ವಾಸುದೇವನ್‌ ಅವರು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ನಡೆಸುತ್ತಿದ್ದಾರೆ. ಇದರ ಜೊತೆಗೆ ನಿರೂಪಣೆ ಕೂಡ ಇದೆ. ಚೈತ್ರಾ ಅವರ ಇವೆಂಟ್‌ ಮ್ಯಾನೇಜ್‌ಮೆಂಟ್‌ನ್ನು ಜಗದೀಪ್‌ ಎನ್ನುವವರು ಕಾಂಟ್ಯಾಕ್ಟ್‌ ಮಾಡಿದ್ದರು. ಆಗ ಚೈತ್ರಾ, ಜಗದೀಪ್‌ ನಡುವೆ ಒಂದು ಮಾತುಕತೆ ಬೆಳೆದಿತ್ತು. ಚೈತ್ರಾ ಅವರ ಗುಣ ಇಷ್ಟಪಟ್ಟ ಜಗದೀಪ್‌ ಅವರು, ಮದುವೆಯಾಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚೈತ್ರಾ ತಂದೆ-ತಾಯಿಯನ್ನು ಕೂಡ ಕಾಂಟ್ಯಾಕ್ಟ್‌ ಮಾಡಿದ್ದಾರೆ. 

Photos: ಅಂದು ಅರೇಂಜ್‌, ಇಂದು ಲವ್;‌ ಪ್ಯಾರೀಸ್‌ನಲ್ಲಿ‌ Chaitra Vasudevan ಪ್ರಿ ವೆಡ್ಡಿಂಗ್‌ ಫೋಟೋಶೂಟ್!

ಪ್ರೀತಿ ಹುಟ್ಟಿದ್ದು ಹೇಗೆ? 
ತಂದೆಯನ್ನು ಕಳೆದುಕೊಂಡಿರೋ ಜಗದೀಪ್‌ ಅವರು ಇಂದು ಕುಟುಂಬವನ್ನು ಮುನ್ನಡೆಸುತ್ತಿದ್ದಾರಂತೆ, ಅಷ್ಟೇ ಅಲ್ಲದೆ ವೃತ್ತಿಯಲ್ಲಿ ಯಶಸ್ಸನ್ನು ಕೂಡ ಹೊಂದಿದ್ದಾರೆ. ಚೈತ್ರಾ ಅವರ ಪರಿಶ್ರಮ ಜಗದೀಪ್‌ಗೆ ಇಷ್ಟ ಆಗಿದೆ. ಹೀಗಾಗಿ ಇವರು ಪ್ರೇಮ ನಿವೇದನೆ ಮಾಡಿದ್ದಾರೆ. ಆ ನಂತರ ಚೈತ್ರಾ ಕುಟುಂಬವನ್ನು ಭೇಟಿ ಮಾಡಿ, ಮದುವೆಗೆ ಒಪ್ಪಿಸಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ಇವರ ಮದುವೆ ನಡೆಯಲಿದೆ. ಸಂಪ್ರದಾಯಬದ್ಧವಾಗಿ ಈ ಮದುವೆ ನಡೆಯಲಿದ್ದು, ಎಲ್ಲ ಶಾಸ್ತ್ರಗಳು ಇರಲಿವೆಯಂತೆ. 

ಚೈತ್ರಾ ವಾಸುದೇವನ್ ಕೈ ಹಿಡಿಯುತ್ತಿರುವ ಹುಡುಗ ಇವರೆ, ಫೋಟೋ ರಿವೀಲ್ ಮಾಡಿದ ಆಂಕರ್

ಮೊದಲ ಮದುವೆ ಕಥೆ ಏನು?
ಚೈತ್ರಾ ವಾಸುದೇವನ್‌ ಅವರು ಸತ್ಯ ನಾಯ್ಡು ಎನ್ನುವವರನ್ನು ಮದುವೆಯಾಗಿದ್ದರು. ಡಿಗ್ರಿ ಮುಗಿಯುತ್ತಿದ್ದಂತೆ ಚೈತ್ರಾಗೆ ಮದುವೆ ಮಾಡಿದ್ದರು. ಇದು ಪಕ್ಕಾ ಅರೇಂಜ್‌ ಮ್ಯಾರೇಜ್‌ ಆಗಿತ್ತು. ಮದುವೆ ಜೀವನ ಸರಿ ಹೋಗುತ್ತದೆಯಾ? ಇಲ್ಲವಾ ಎಂದು ನೋಡಲು ಚೈತ್ರಾ ಐದು ವರ್ಷಗಳ ಕಾಲ ಟೈಮ್‌ ಕೊಟ್ಟರೂ ಸರಿ ಹೋಗಿರಲಿಲ್ಲ. ಹೀಗಾಗಿ ಡಿವೋರ್ಸ್‌ ಆಯ್ತು ಎಂದು ಚೈತ್ರಾ ಅವರೇ ಹೇಳಿದ್ದಾರೆ. 

ಚೈತ್ರಾ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 7ʼ ಶೋನಲ್ಲಿ ಭಾಗವಹಿಸಿದ್ದರು. ಒಂದು ವಾರಕ್ಕೆ ಈ ಶೋನಿಂದ ಹೊರಗಡೆ ಬಂದಿದ್ದರು.