ಬಿಗ್‌ಬಾಸ್ ಖ್ಯಾತಿಯ ನಿರೂಪಕಿ ಚೈತ್ರಾ ವಾಸುದೇವನ್ ಮಾರ್ಚ್‌ನಲ್ಲಿ ಜಗದೀಪ್ ಎಲ್‌ರೊಂದಿಗೆ ಎರಡನೇ ವಿವಾಹವಾಗಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವಿ ಪತಿಯ ಫೋಟೋ ಹಂಚಿಕೊಂಡ ಚೈತ್ರಾ, ಅಭಿಮಾನಿಗಳಿಂದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಪ್ಯಾರಿಸ್‌ನಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಕೂಡಾ ಮುಗಿಸಿದ್ದಾರೆ. ಮೊದಲ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.
ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಚೈತ್ರಾ ವಾಸುದೇವನ್ (Anchor and former Bigg Boss contestant Chaitra Vasudevan) ಯಾರನ್ನು ಮದುವೆ ಆಗ್ತಿದ್ದಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚೈತ್ರಾ ವಾಸುದೇವನ್, ಜಗದೀಪ್ ಎಲ್ (Jagdeep L) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಾರ್ಚ್ ನಲ್ಲಿ ಇಬ್ಬರ ಮದುವೆ ನಡೆಯಲಿದೆ. ಚೈತ್ರಾ ವಾಸುದೇವನ್ ಎರಡನೇ ಮದುವೆ (second marriage) ಆಗುವ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಆದ್ರೆ ಹುಡುಗ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಚೈತ್ರಾ ತಮ್ಮ ಕೈ ಹಿಡಿಯಲಿರುವ ಭಾವಿ ಪತಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೇವಸ್ಥಾನದ ಮುಂದೆ ಚೈತ್ರಾ ಹಾಗೂ ಅವರ ಭಾವಿ ಪತಿ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಿರುವ ಫೋಟೋವನ್ನು ಚೈತ್ರಾ ಹಂಚಿಕೊಂಡಿದ್ದಾರೆ.
ಚೈತ್ರಾ ವಾಸುದೇವನ್, ಫೋಟೋ ಹಂಚಿಕೊಂಡು ಪ್ರೀತಿ ತುಂಬಿದ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ. ಅವರ ಈ ಫೋಟೋವನ್ನು ಜಗದೀಪ್ ಎಲ್ ಜೊತೆ ಟ್ಯಾಗ್ ಮಾಡಿದ್ದಾರೆ. ಚೈತ್ರಾ ಹಾಗೂ ಜಗದೀಪ್ ಎಲ್ ಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಜೋಡಿ ಚೆನ್ನಾಗಿದೆ, ಖುಷಿಯಾಗಿರಿ ಎಂದು ಹಾರೈಸಿದ್ದಾರೆ.
'ಮಕ್ಕಳ ಕಳ್ಳಿ' ಆರೋಪಕ್ಕೆ ಉತ್ತರಿಸುತ್ತಲೇ ಮದುವೆಯಾಗೋ ಹುಡುಗನ ಗುಟ್ಟು ಬಿಚ್ಚಿಟ್ಟ ಬಿಗ್‌ಬಾಸ್ ಮೋಕ್ಷಿತಾ ಪೈ
ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್ ನಲ್ಲಿ ಪ್ರೀವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು. ಅದ್ರ ವಿಡಿಯೋವನ್ನು ಚೈತ್ರಾ ಹಂಚಿಕೊಂಡಿದ್ದರು. ಅಲ್ಲದೆ ಜಗದೀಶ್ ಎಲ್ ಜೊತೆ ಶಾಪಿಂಗ್ ಕೂಡ ಮಾಡಿದ್ದರು. ಆದ್ರೆ ಚೈತ್ರಾ ಎಲ್ಲೂ ಜಗದೀಶ್ ಮುಖವನ್ನು ತೋರಿಸಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಷ್ಯವನ್ನು ಹಂಚಿಕೊಂಡಿದ್ದ ಚೈತ್ರಾ, ನಾನು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಎಂದಿದ್ದರು. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಹುಡುಗ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
ಇದು ಚೈತ್ರಾ ವಾಸುದೇವನ್ ಅವರಿಗೆ ಎರಡನೇ ಮದುವೆ. ಚೈತ್ರಾ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎಂಬುವವರ ಕೈ ಹಿಡಿದಿದ್ದರು. 2017ರಲ್ಲಿ ಚೈತ್ರಾ ವಾಸುದೇವನ್ ಮದುವೆ ನಡೆದಿತ್ತು. ಆದ್ರೆ ಮದುವೆಯಾಗಿ 5 ವರ್ಷಗಳ ನಂತ್ರ ಅವರು ವಿಚ್ಛೇದನ ಪಡೆದಿದ್ದರು. 2023ರಲ್ಲಿ ಚೈತ್ರಾ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದರು. ಅಲ್ಲದೆ ಸಂದರ್ಶನದಲ್ಲಿ ವಿಚ್ಛೇದನಕ್ಕೆ ಏನು ಕಾರಣ ಎಂಬುದನ್ನು ಹೇಳಿದ್ದರು. ಸಂಸಾರ ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೆ ಎಂದಿದ್ದ ಚೈತ್ರಾ ಧೈರ್ಯ ಕಳೆದುಕೊಂಡಿರಲಿಲ್ಲ.
ಬಾವಿಯ ತಣ್ಣೀರು ಮೈಮೇಲೆ ಸುರಿದುಕೊಳ್ಳುವಾಗ ಬಿಸಿಯಾಗೋದು ಹೇಗೆ? ಶೂಟಿಂಗ್ನಲ್ಲಿ
ಚೈತ್ರಾ ನಿರೂಪಕಿ ಮಾತ್ರವಲ್ಲ ಅವರು ಉದ್ಯಮಿಯೂ ಹೌದು. ನಾನಾ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಚೈತ್ರಾ, ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಮತ್ತು ಸ್ಟಾರ್ ಕನ್ನಡದಲ್ಲಿ ನಿರೂಪಣೆ ಮಾಡಿದ್ದಾರೆ ಚೈತ್ರಾ. ಅಲ್ಲದೆ ಬಿಗ್ ಬಾಸ್ 7 ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಚೈತ್ರಾ, ಯುಟ್ಯೂಬ್ ನಲ್ಲಿ ಅನೇಕ ವಿಷ್ಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ.
ಚೈತ್ರಾ ವಾಸುದೇವನ್ ಈವೆಲ್ಲದ ಜೊತೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ದಾರೆ. ಮದುವೆ, ಪ್ರೋಗ್ರಾಂ ಆರ್ಗನೈಸ್ ಮಾಡುವ ಚೈತ್ರಾ ಸ್ವಾವಲಂಭಿ ಬದುಕನ್ನು ಹೆಚ್ಚು ಪ್ರೀತಿಸುತ್ತಾರೆ. ಅವರ ಡ್ರೆಸ್ ಡಿಸೈನ್ ಅಭಿಮಾನಿಗಳನ್ನು ಸೆಳೆಯುತ್ತದೆ. ಒಮ್ಮೆ ಹಾಕಿದ ಬಟ್ಟೆಯನ್ನು ಚೈತ್ರಾ ಇನ್ನೊಮ್ಮೆ ಧರಿಸೋದು ಅಪರೂಪ. ಅವರ ಸ್ಟೈಲ್, ಅವರ ಜೀವನ ಅನೇಕರಿಗೆ ಸ್ಪೂರ್ತಿಯಾಗಿದೆ.
