ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಫಿಶ್ ಊಟ ಎಂಜಾಯ್ ಮಾಡಿದ್ದಾರೆ. ಮಧ್ಯೆ ಬಂದ ರಕ್ಷಿತಾಗೆ ತಲೆ ತಿನ್ನು ಎನ್ನುತ್ತ ಮೀನಿನ ತಲೆ ನೀಡಿದ್ದಾರೆ. ಇವ್ರಲ್ಲಿ ಯಾರು , ಯಾರ ತಲೆ ತಿಂತಾರೆ ಎನ್ನುವ ಕನ್ಫ್ಯೂಸ್ ವೀಕ್ಷಕರಿಗಿದೆ.

ಸೆಪ್ಪೆಯಾಗಿದ್ದ ಬಿಗ್ ಬಾಸ್ ಮನೆ ಸ್ಪರ್ಧಿಗಳ ಬಾಯಿಗೆ ಈಗ ರುಚಿ ರುಚಿಯಾದ ಊಟ ಸಿಗ್ತಿದೆ. ಎರಡುವರೆ ತಿಂಗಳಿಂದ ಮಿಸ್ ಮಾಡ್ಕೊಂಡಿದ್ದ ಮೀನಿನೂಟವನ್ನು ಸ್ಪರ್ಧಿಗಳು ಬಾಯಿ ಚಪ್ಪರಿಸಿ ತಿನ್ನುತ್ತಿದ್ದಾರೆ. ರಾಶಿಕಾ ಮನೆಯಿಂದ, ರಕ್ಷಿತಾ ಮನೆಯಿಂದ ಮೀನಿನೂಟ ಬಂದಿದೆ. ಅಶ್ವಿನಿ ಗೌಡ ಕೂಡ ಪ್ಲೇಟ್ ಗೆ ವೆರೈಟಿ ಅಡುಗೆ ಬಡಿಸಿಕೊಂಡು ಎಂಜಾಯ್ ಮಾಡಿದ್ದಾರೆ. ಈ ಮಧ್ಯೆ ಅಶ್ವಿನ ತಟ್ಟೆ ಮೇಲೆ ರಕ್ಷಿತಾ ಕಣ್ಣು ಬಿದ್ದಿದೆ. ಅಶ್ವಿನಿ ತಟ್ಟೆಯಲ್ಲಿದ್ದ ಮೀನಿನ ತಲೆ ರಕ್ಷಿತಾ ಪಾಲಾಗಿದೆ.

ಅಶ್ವಿನಿ ಮೀನಿನ ತಲೆ ರಕ್ಷಿತಾ ಪಾಲು

 ಬಿಗ್ ಬಾಸ್ ಮನೆಯಲ್ಲಿ ಅರೆ ಕ್ಷಣಕ್ಕೆ ಬದಲಾಗುವ ಸ್ಪರ್ಧಿಗಳೆಂದ್ರೆ ಅದು ರಕ್ಷಿತಾ ಹಾಗೂ ಅಶ್ವಿನಿ. ಟಾಸ್ಕ್ ಬಂದ್ರೆ ಕತ್ತಾಡಿಕೊಳ್ಳುವ ಇವರಿಬ್ಬರ ಸ್ವಭಾವವನ್ನು ಇನ್ನೂ ವೀಕ್ಷಕರಿಗೆ ಅರ್ಥ ಮಾಡಿಕೊಳ್ಳಲಾಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕೂಗಿದ, ಕಿರುಚಾಡಿದ ಸ್ಪರ್ಧಿಗಳೆಂದ್ರೆ ಅಶ್ವಿನಿ – ರಕ್ಷಿತಾ. ಇಬ್ಬರ ಮಧ್ಯೆಯೂ ಸಾಕಷ್ಟು ಬಾರಿ ಜಗಳವಾಗಿದೆ. ಆದ್ರೆ ಸ್ವಲ್ಪ ಸಮಯದಲ್ಲಿಯೇ ಇಬ್ಬರು ಸರಿ ಹೋಗ್ತಾರೆ. ಸೀಕ್ರೆಟ್ ರೂಮಿನಿಂದ ರಕ್ಷಿತಾ ಬಂದ್ಮೇಲೆ ಅಶ್ವಿನಿ ಹಾಗೂ ರಕ್ಷಿತಾ ಮತ್ತಷ್ಟು ಆಪ್ತರಾಗಿದ್ದಾರೆ. ಬಿಗ್ ಬಾಸ್ ಮನೆ ಫ್ಯಾಮಿಲಿ ರೌಂಡ್ ಇವರನ್ನು ಮತ್ತಷ್ಟು ಹತ್ತಿರ ತರ್ತಿದೆ. ಬಿಗ್ ಬಾಸ್ ಮನೆಯಲ್ಲಿ ಮಟನ್, ಚಿಕನ್ ಮಾತ್ರ ಸ್ಪರ್ಧಿಗಳಿಗೆ ಸಿಗ್ತಾ ಇತ್ತು. ಎಲ್ಲರೂ ಫಿಶ್ ಮಿಸ್ ಮಾಡ್ಕೊಂಡಿದ್ರು. ಫ್ಯಾಮಿಲಿ ರೌಂಡ್ ನಲ್ಲಿ ಎಲ್ಲರ ಮನೆಯಿಂದ ರುಚಿಯಾದ ಬಾಡೂಟ ಬಂದಿದೆ. ಅಶ್ವಿನಿ ಗೌಡ ಪ್ಲೇಟ್ ಡೆಕೋರೇಟ್ ಮಾಡ್ಕೊಂಡು ಊಟ ಮಾಡ್ತಿದ್ದಾರೆ. ಅಲ್ಲಿಗೆ ಬಂದ ರಕ್ಷಿತಾ, ಅಶ್ವಿನಿ ತಟ್ಟೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ವೇಳೆ ಅಶ್ವಿನಿ ಗೌಡ, ರಕ್ಷಿತಾಗೆ ಫಿಶ್ ಆಫರ್ ಮಾಡಿದ್ದಾರೆ. ನಿಮಗೆ ಫಿಶ್ ಇಷ್ಟ ಅಲ್ವಾ, ತಿನ್ನಿ ಎಂದಿದ್ದಾರೆ.

Bigg Boss ಮನೆಗೆ 'ಗಿಲ್ಲಿ ಅತ್ತೆ' ಆಗಮನ! ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ- ಗಿಲ್ಲಿಗೆ ಬುದ್ಧಿ ಮಾತು

ತಲೆ ತಿಂದ ರಕ್ಷಿತಾ 

ಅಶ್ವಿನಿ ಗೌಡ ಕೊಟ್ಟಿದ್ದು ಫಿಶ್ ತಲೆ. ಅದನ್ನು ನೋಡಿದ ರಕ್ಷಿತಾ, ನೀವು ತಲೆ ತಿನ್ನಲ್ವಾ ಅಂತ ಕೇಳಿದ್ದಾರೆ. ನೀನು ತಲೆ ತಿಂತೀಯಲ್ಲ, ತಗೋ ಅಂತ ಅಶ್ವಿನಿ ಮತ್ತೆ ರಕ್ಷಿತಾಗೆ ಫಿಶ್ ನೀಡಲು ಮುಂದಾಗಿದ್ದಾರೆ. ನಿಮಗೆ ಇದು ಸೂಟ್ ಆಗುತ್ತೆ ಎನ್ನುತ್ತ ಅಶ್ವಿನಿ, ರಕ್ಷಿತಾಗೆ ಫಿಶ್ ತಲೆ ನೀಡಿದ್ದಾರೆ. ಅದನ್ನು ತಿಂದ ರಕ್ಷಿತಾ, ನನಗೆ ತಲೆ ಅಂದ್ರೆ ಜೀವ, ಮನೆಯಲ್ಲೆಲ್ಲ ನನಗೆ ತಲೆ ಕೊಡ್ತಾರೆ ಎಂದಿದ್ದಾರೆ. ಎಲ್ಲವನ್ನೂ ನೋಡ್ತಿದ್ದ ಗಿಲ್ಲಿ, ನೀವು ತಲೆ ತಿಂತೀರಾ ಅನ್ನೋದು ಬಂದ ವಾರವೇ ಗೊತ್ತಾಯ್ತು ಎನ್ನುತ್ತಾರೆ. ಜಿಯೋ ಹಾಟ್ಸ್ಟಾರ್ ನಲ್ಲಿ ಇದ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಫ್ಯಾನ್ಸ್, ಫಿಶ್ ತಲೆ ತಿಂತಿರೋದಕ್ಕೇ ರಕ್ಷಿತಾ ಇಷ್ಟು ಚುರುಕು. ಅವರನ್ನು ಅರ್ಥ ಮಾಡ್ಕೊಳ್ಳೋದು ಕಷ್ಟ ಎಂದಿದ್ದಾರೆ. ಅಶ್ವಿನಿಗೌಡ ಉದಾರವನ್ನೂ ಹೊಗಳಿದ್ದಾರೆ.

ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್‌ ಬಳಿ ಇದ್ಯಾ ಉತ್ತರ?

ಫಿಶ್ ತಲೆ ತಿನ್ನೋದ್ರಿಂದ ಲಾಭ ಏನು? 

ಬಿಗ್ ಬಾಸ್ ಮನೆಯಲ್ಲಿ ಯಾರ ತಲೆ ಯಾರು ತಿಂದ್ರು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಫಿಶ್ ತಲೆ ತಿನ್ನೋದ್ರಿಂದ ಸಾಕಷ್ಟು ಆರೋಗ್ಯ ಲಾಭವಿದೆ. ಮೀನಿನ ತಲೆ ಒಮೆಗಾ ಆಮ್ಲವನ್ನು ಹೊಂದಿದೆ. ಮೀನಿನ ತಲೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಮಧುಮೇಹ ಮತ್ತು ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ. ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.