- Home
- Entertainment
- TV Talk
- Bigg Boss Kannada: ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್ ಬಳಿ ಇದ್ಯಾ ಉತ್ತರ?
Bigg Boss Kannada: ಕಾವ್ಯ - ಸ್ಪಂದನಾ ಕಂಡ್ರೆ ರಕ್ಷಿತಾಗೆ ಯಾಕಾಗಲ್ಲ, ರಜತ್ ಬಳಿ ಇದ್ಯಾ ಉತ್ತರ?
bigg boss 12 kannada : ಸೀಕ್ರೆಟ್ ರೂಮು ಸೇರಿದ್ದಾಗ ರಕ್ಷಿತಾ, ಕಾವ್ಯ ಹಾಗೂ ಸ್ಪಂದನಾ ಅವರನ್ನು ಎಷ್ಟು ದ್ವೇಷಿಸ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ. ಆದ್ರೆ ಅದಕ್ಕೆ ಕಾರಣ ಏನು?

ಬಿಗ್ ಬಾಸ್ ಮನೆ ಪುಟ್ಟಿ
ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿದ್ರೂ ಮನೆ ಮನೆಗೆ ರಕ್ಷಿತಾ ಪರಿಚಯ ಆಗಿದ್ದು ಬಿಗ್ ಬಾಸ್ ಮನೆಯಿಂದ. ಎಲ್ಲರಿಗಿಂತ ಚಿಕ್ಕ ವಯಸ್ಸಿನ ರಕ್ಷಿತಾ, ಬಿಗ್ ಬಾಸ್ ಮನೆ ಪುಟ್ಟಿ. ಗಿಲ್ಲಿ ನಟ ರಕ್ಷಿತಾ ಅವರನ್ನು ವಂಶದ ಕುಡಿ ಅಂತ ಕರೀತಾರೆ. ಬಿಗ್ ಬಾಸ್ ಮನೆಯಲ್ಲಿ ಪುಟ್ಟಿಯಾಗಿರುವ ರಕ್ಷಿತಾಗೆ ಎಲ್ಲರೂ ಅಣ್ಣಂದಿರು. ಅದ್ರಲ್ಲೂ ರಜತ್ ಹಾಗೂ ರಘು, ಮಾಳು ರಕ್ಷಿತಾ ಅವರನ್ನು ಸಾಕಷ್ಟು ಹಚ್ಕೊಂಡಿದ್ದಾರೆ.
ರಜತ್ ಜೊತೆ ರಕ್ಷಿತಾ ಬಾಂಡಿಂಗ್
ಬಿಗ್ ಬಾಸ್ ಮನೆಗೆ ಮೂರು ವಾರಗಳ ಕಾಲ ಗೆಸ್ಟ್ ಆಗಿ ಬಂದಿದ್ದ ರಜತ್ ಎಲ್ಲಿಯೂ ತಾವು ಗೆಸ್ಟ್ ಅನ್ನೋದನ್ನು ಹೇಳಿರಲಿಲ್ಲ. ಸ್ಪರ್ಧಿಗಳಂತೆ ಅವರು ಆಟ ಆಡಿ, ಜಗಳ ಮಾಡಿ, ತಮಾಷೆ ಮಾಡಿದ್ರು. ರಜತ್ ಕೂಡ ರಕ್ಷಿತಾ ಅವರನ್ನು ತಂಗಿ ಅಂತ ಒಪ್ಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ರಕ್ಷಿತಾ ಹೊರಗೆ ಹೋಗ್ತಿದ್ದಾರೆ ಎಂಬುದು ಗೊತ್ತಾದಾಗ ರಜತ್ ಬೇಸರಗೊಂಡಿದ್ದರು. ಮನೆಯಲ್ಲಿ ಅವರನ್ನು ಮಿಸ್ ಮಾಡ್ಕೊಳ್ತಿರೋದಾಗಿ ಹೇಳಿದ್ದರು. ಆದ್ರೆ ಸೀಕ್ರೆಟ್ ರೂಮಿನಿಂದ ರಕ್ಷಿತಾ ಹೊರಗೆ ಬರ್ತಿದ್ದಂತೆ ಖುಷಿಯಾದ ಸ್ಪರ್ಧಿಗಳಲ್ಲಿ ರಜತ್ ಒಬ್ಬರು.
ರಕ್ಷಿತಾ ಬಗ್ಗೆ ರಜತ್ ಹೇಳಿದ್ದೇನು?
ರಕ್ಷಿತಾ ನನ್ನ ತಂಗಿಯಿದ್ದಂತೆ ಅಂತ ರಜನ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ್ಮೇಲೂ ರಜತ್, ರಕ್ಷಿತಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅತೀ ಕೇರ್ ಮಾಡ್ತಿದ್ದ ಹುಡುಗಿ ಅವರು. ನಿದ್ರೆ ಮಾಡಿದ್ರೂ ಏಳ್ಸಿ ಊಟ ನೀಡ್ತಿದ್ದ ರಕ್ಷಿತಾ ನನಗೆ ತಂಗಿಯಂತೆ. ಅವರು ಮುಗ್ದರು. ಸಿಟ್ಟು ಬಂದ್ರೆ ಮಾತ್ರ ತಡೆಯೋದು ಕಷ್ಟ ಅಂತ ರಜನ್ ಹೇಳಿದ್ದಾರೆ.
ಕಾವ್ಯ – ಸ್ಪಂದನಾ ಮೇಲೆ ಸಿಟ್ಟು
ಮನೆಯಲ್ಲಿ ಎಲ್ಲರ ಜೊತೆ ಮಾತನಾಡ್ತಾ, ಓಡಾಡಿಕೊಂಡಿರುವ ರಕ್ಷಿತಾಗೆ, ಆರಂಭದಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಜೊತೆ ಗಲಾಟೆ ಆಗಿತ್ತು. ನಂತ್ರ ಅಶ್ವಿನಿ ಜೊತೆ ಹೊಂದ್ಕೊಂಡಿದ್ದಾರೆ. ಧ್ರುವಂತ್ ಆರಂಭದಲ್ಲಿ ಸ್ನೇಹದಿಂದ ಇದ್ರೂ ಈಗ ಹಾವು ಮುಂಗುಸಿ. ಧ್ರುವಂತ್ ಹಾಗೂ ರಕ್ಷಿತಾ ನೇರಾನೇರ ಕಚ್ಚಾಡುತ್ತಾರೆ, ಕೂಗಾಡುತ್ತಾರೆ. ಆದ್ರೆ ಕಾವ್ಯ ಹಾಗೂ ಸ್ಪಂದನಾ ಜೊತೆ ಈವರೆಗೂ ರಕ್ಷಿತಾ ಬಾಂಡಿಂಗ್ ಬೆಳೆದಿಲ್ಲ.
ಕಾವ್ಯ ವೀಕ್ ಅಂತಾರೆ ರಕ್ಷಿತಾ
ರಕ್ಷಿತಾ ಪ್ರಕಾರ ಕಾವ್ಯ ಹಾಗೂ ಸ್ಪಂದನಾ ವೀಕ್ ಸ್ಪರ್ಧಿಗಳು. ಅದ್ರಲ್ಲೂ ಕಾವ್ಯ ಕಂಡ್ರೆ ರಕ್ಷಿತಾಗೆ ಆಗೋದೇ ಇಲ್ಲ. ಕಾವ್ಯ ಮನೆಯಿಂದ ಹೊರಗೆ ಹೋಗ್ಬೇಕು, ಮನೆಯಲ್ಲಿರೋಕೆ ಕಾವ್ಯಗೆ ಅರ್ಹತೆ ಇಲ್ಲ, ಅವರನ್ನು ನಾಮಿನೇಟ್ ಮಾಡ್ಬೇಕು ಅಂತ ರಕ್ಷಿತಾ ಸದಾ ಹೇಳ್ತಿರುತ್ತಾರೆ. ಗಿಲ್ಲಿ ಮೇಲೆ ಅತಿ ಹೆಚ್ಚು ಪ್ರೀತಿ ಹೊಂದಿರುವ ರಕ್ಷಿತಾ, ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ ಮತ್ತು ನಾನೇ ಹೋಗೋದು ಎನ್ನುವ ನಂಬಿಕೆಯಲ್ಲಿದ್ದಾರೆ.
ಕಾವ್ಯ ಸ್ಪಂದನಾ ಕಂಡ್ರೆ ಯಾಕಾಗಲ್ಲ?
ರಕ್ಷಿತಾ ಅವರನ್ನು ರಜತ್ ಹತ್ತಿರದಿಂದ ನೋಡಿದ್ದಾರೆ. ರಕ್ಷಿತಾ ಯಾಕೆ, ಕಾವ್ಯ ಹಾಗೂ ಸ್ಪಂದನಾ ಅವರನ್ನು ದ್ವೇಷ ಮಾಡ್ತಾರೆ ಎಂಬ ಪ್ರಶ್ನೆಗೆ ರಜತ್ ಬಳಿ ಕೂಡ ಉತ್ತರ ಇಲ್ಲ. ರಕ್ಷಿತಾ, ಕಾವ್ಯ ಹಾಗೂ ಸ್ಪಂದನಾ ಅವರನ್ನು ದ್ವೇಷಿಸೋದು ಸತ್ಯ. ಯಾಕೆ ಎಂಬುದಕ್ಕೆ ಉತ್ತರ ಇಲ್ಲ. ಕಾವ್ಯ ಹಾಗೂ ಸ್ಪಂದನಾ ಬಗ್ಗೆ ರಕ್ಷಿತಾ ತಮ್ಮದೇ ಒಂದು ಭಾವನೆ ಹೊಂದಿದ್ದಾರೆ. ಅವ್ರ ಮೇಲೆ ಹೆಚ್ಚು ಫೋಕಸ್ ಮಾಡ್ಬೇಡ ಅಂದ್ರೂ ಕೇಳ್ತಿಲ್ಲ. ಇದ್ರಿಂದ ರಕ್ಷಿತಾ ತಮ್ಮಾಟ ಹಾಳು ಮಾಡ್ಕೊಳ್ತಿದ್ದಾರೆ ಅಂತ ರಜತ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

