ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋಗೆ ತೆರೆ ಬಿದ್ದಿದೆ, ಟ್ರೋಫಿ ಗೆದ್ದಿರುವ ಹನುಮಂತ ಆದಷ್ಟು ಬೇಗ ಮದುವೆ ಆಗುವ ಆಸೆ ಹೊಂದಿದ್ದಾರೆ. ಇನ್ನು ಫಿನಾಲೆ ವೇದಿಕೆಯಲ್ಲಿ ಹನುಮಂತ ತಂದೆ-ತಾಯಿ ಬಳಿ ಕಿಚ್ಚ ಸುದೀಪ್ ವಿಶೇಷ ಮನವಿ ಮಾಡಿದ್ದಾರೆ. ಏನದು?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಸ್ಪರ್ಧಿ ಹನುಮಂತ ಅಂತೂ ಟ್ರೋಫಿ ಪಡೆದಿದ್ದಾಯ್ತು. ಹನುಮಂತನ ಗೆಲುವನ್ನು ಅನೇಕರು ಸಂಭ್ರಮಿಸುತ್ತಿದ್ದಾರೆ. ದೊಡ್ಮನೆಯಲ್ಲಿ ಹನುಮಂತ ಟ್ರೋಫಿ, ಗೆಲುವಿನ ಬಗ್ಗೆ ಮಾತಾಡಿದ್ದು ತುಂಬ ಕಡಿಮೆ ಆದರೂ ಇವರ ಹುಡುಗಿ ವಿಚಾರ ಭಾರೀ ಸೌಂಡ್ ಮಾಡಿತ್ತು.
ಹುಡುಗಿ ಯಾರು?
ಹನುಮಂತ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದಾರೆ. ಈ ವಿಚಾರ ಇವರ ತಂದೆ-ತಾಯಿಗೆ ಗೊತ್ತಿಲ್ಲ. ಬಿಗ್ ಬಾಸ್ ಮನೆಗೆ ಪಾಲಕರು ಬಂದಾಗ ಹನುಮಂತನ ಹುಡುಗಿ ವಿಚಾರ ಚರ್ಚೆ ಆಗಿದೆ. ಆದರೆ ಅವರ ತಂದೆಗೆ ಈ ಬಗ್ಗೆ ಅಷ್ಟು ಅರಿವಿಲ್ಲ. “ನಾವು ನೋಡಿದ ಹುಡುಗಿಯನ್ನು ನೀನು ಮದುವೆ ಆಗಬೇಕು, ಲವ್ ಬೇಡ” ಎನ್ನುವ ಅರ್ಥದಲ್ಲಿ ಹನುಮಂತನಿಗೆ ಅವರ ತಾಯಿ ಕಿವಿಮಾತು ಹೇಳಿದ್ದರೂ ಹನುಮ ಕೇಳಲೇ ಇಲ್ಲ. ಗೌತಮಿ ಜಾಧವ್ ಸೇರಿ ಅನೇಕರು ಹುಡುಗಿ ಬಗ್ಗೆ ಪ್ರಶ್ನೆ ಮಾಡಿದಾಗಲೂ ಹನುಮಂತ ಹುಡುಗಿ ಹೆಸರು, ಎಲ್ಲಿಯವಳು? ಏನು ಎತ್ತ ಎನ್ನುವ ಬಗ್ಗೆ ಮಾತನಾಡಿರಲಿಲ್ಲ.
ವಿನ್ನರ್ ಹನುಮಂತ ಬಗ್ಗೆ ರನ್ನರ್ ಅಪ್ ತ್ರಿವಿಕ್ರಮ್ ಹೇಳಿದ ಮೊದಲ ಮಾತೇನು?
ಉತ್ತರ ಕೊಡದ ಹನುಮಂತ!
ಹನುಮಂತ ಪದೇ ಪದೇ ಮದುವೆ ಆಗಬೇಕು. ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು. ಇನ್ನು ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ಮನೆಯಲ್ಲಿ ಮದುವೆ ವಿಚಾರವಾಗಿ ಸುದೀಪ್‌ಗೆ ರೇಗಿಸುತ್ತಿದ್ರು. ಹೀಗಿದ್ದರೂ ಹನುಮಂತ ಮಾತ್ರ ನಗುತ್ತಲೇ ಎಲ್ಲದಕ್ಕೂ ಉತ್ತರ ಕೊಡುತ್ತಿದ್ದರು.
ಕಿಚ್ಚ ಸುದೀಪ್ ಏನಂದ್ರು?
ಫಿನಾಲೆ ವೇದಿಕೆ ಮೇಲೆ ಮತ್ತೆ ಈ ವಿಚಾರ ಚರ್ಚೆ ಆಗಿದೆ. “ಹನುಮಂತ ನೋಡಿದ ಹುಡುಗಿಯ ಜೊತೆ ಮದುವೆ ಮಾಡಿಸಬೇಕು” ಅಂತ ಅವರ ಪಾಲಕರಿಗೆ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ಆಗ ಹನುಮಂತನ ತಂದೆ, “ಮದುವೆ ಮಾಡೋಣ ಬಿಡಿ” ಎಂದಿದ್ದಾರೆ. “ನೀವು ಮಾತು ಮರೆಯೋ ಹಾಗಿಲ್ಲ, ನಡೆಸಿಕೊಡಬೇಕು, ನಾವು ಊಟಕ್ಕೆ ಬರ್ತೀವಿ” ಎಂದಿದ್ದಾರೆ. ಇನ್ನು ಹನುಮಂತನ ತಂದೆ ಖುಷಿಯಿಂದ ಕೈ ಮುಗಿದಿದ್ದಾರೆ.
ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಇನ್ನೇನೋ ಬೇರೆ' ಇದೆ, ಆಟ ಮಾತ್ರವಲ್ಲ!
ಅಷ್ಟೇ ಅಲ್ಲದೆ ʼಬಿಗ್ ಬಾಸ್ʼ ಫಿನಾಲೆ ಮುಗಿದ್ಮೇಲೆ ಸುದ್ದಿಗೋಷ್ಠಿಯಲ್ಲಿಯೂ ಹುಡುಗಿ ಬಗ್ಗೆ ಪ್ರಶ್ನೆ ಬಂದಿತ್ತು. ಆಗಲೂ ಹನುಮಂತ, “ಹುಡುಗಿ ಜೊತೆ ಮಾತನಾಡಿದೆ. ಅವರು ಖುಷಿ ಆಗಿದ್ದಾರೆ, ಅತ್ತರು, ನಾನು ಬಂದಿದ್ದೇನೆ ಅಂತ ಸಮಾಧಾನ ಮಾಡಿದೆ” ಅಂತ ಹೇಳಿದ್ದರು.
ಮನಸ್ಸು ಗೆದ್ದ ಹನುಮಂತ!
ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಹನುಮಂತ ಅಂದು ರನ್ನರ್ ಅಪ್ ಆಗಿದ್ದರು. ಈಗ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ವಿನ್ನರ್ ಆಗಿದ್ದಾರೆ. ಈ ಗೆಲುವನ್ನು ಅನೇಕರು ಸಂಭ್ರಮಿಸುತ್ತಿದ್ದಾರೆ. ಹನುಮಂತನ ಮುಗ್ಧತೆ, ಪ್ರಾಮಾಣಿಕತೆ, ಸರಳತೆ, ಪಂಚಿಂಗ್ ಡೈಲಾಗ್, ಹಾಡು, ಖಡಕ್ ಮಾತು ಎಲ್ಲವೂ ವೀಕ್ಷಕರಿಗೆ ಇಷ್ಟ ಆಗಿದೆ.
ಅಂದಹಾಗೆ ತ್ರಿವಿಕ್ರಮ್ ಅವರಿಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಇನ್ನು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಅವರು ಮೂರನೇ ಸ್ಥಾನ ಪಡೆದಿರೋದು ಹೆಮ್ಮೆಯ ವಿಷಯ. ಇಲ್ಲಿಯವರೆಗೆ ನಡೆದ ಸೀಸನ್‌ಗಳಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವವರು ಫಿನಾಲೆ ತಲುಪಿದ್ದೇ ವಿರಳ. ಅಂಥಹದರಲ್ಲಿ ರಜತ್ ಅವರು ನಿಜಕ್ಕೂ ಈ ಸೀಸನ್‌ನಲ್ಲಿ ಗೇಮ್ ಚೇಂಜರ್ ಆಗಿದ್ದರು. ಅಂದಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಹೊಸ ರಿಯಾಲಿಟಿ ಶೋನಲ್ಲಿ ಹನುಮಂತ ಅವರು ಭಾಗವಹಿಸಲಿದ್ದಾರೆ. ಈ ಮೂಲಕ ಅವರು ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ನೀವು ಏನಂತೀರಾ?
