BBK11: ನಾಮಿನೇಟ್‌ ಆದ ಬೆನ್ನಲ್ಲೇ ಬದಲಾದ ತ್ರಿವಿಕ್ರಮ್, ಫಿನಾಲೆ ಟಿಕೆಟ್‌ ಸಿಗಲ್ಲ ಎಂಬ ಭಯ!

ಬಿಗ್‌ಬಾಸ್‌ ಕನ್ನಡ 11ರಲ್ಲಿ ಫಿನಾಲೆಗೆ ಮೂರು ವಾರಗಳು ಬಾಕಿ ಇರುವಾಗ, ತ್ರಿವಿಕ್ರಮ್‌ ಮತ್ತು ಮಂಜು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಟಾಸ್ಕ್‌ನಲ್ಲಿ ಸೋತ ತ್ರಿವಿಕ್ರಮ್‌, ಭವ್ಯಾ, ಮೋಕ್ಷಿತಾ, ಧನ್‌ರಾಜ್‌ ಮತ್ತು ಚೈತ್ರಾ ಕುಂದಾಪುರ ಈ ವಾರ ನಾಮಿನೇಟ್‌ ಆಗಿದ್ದಾರೆ.

bigg boss kannada 11  trivikram and ugram manju clashes after nomination gow

ಬಿಗ್‌ಬಾಸ್‌ ಕನ್ನಡ 11 ಆರಂಭವಾಗಿ 100 ದಿನಗಳಾಗಿವೆ. ಫಿನಾಲೆಗೆ ಮೂರು ವಾರಗಳು ಇರುವಾಗಲೇ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಟಾಸ್ಕ್‌ಗಳು ಬಹಳ ಮುಖ್ಯ. ಟಾಸ್ಕ್ ಗೆದ್ದು ಸೇಫ್‌ ಝೋನ್‌ ನಲ್ಲಿ ಇರಬೇಕೆಂದು ತಮ್ಮ ಶಕ್ತಿ ಮೀರಿ  ಪ್ರಯತ್ನ ಮಾಡುತ್ತಿದ್ದಾರೆ.

ಇದೀಗ ಟಾಸ್ಕ್‌ ನಲ್ಲಿ ಸೋತ ಐವರು ಸ್ಪರ್ಧಿಗಳಾದ ತ್ರಿವಿಕ್ರಮ್‌ , ಭವ್ಯಾ, ಮೋಕ್ಷಿತಾ, ಧನ್‌ರಾಜ್‌ ಮತ್ತು ಚೈತ್ರಾ ಕುಂದಾಪುರ  ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.  ಫಿನಾಲೆ ವೀಕ್‌ ಗೆ ಬಂದಾಗಲೇ ತ್ರಿವಿಕ್ರಮ್‌ ವ್ಯಕ್ತಿದ ಬದಲಾವಣೆ ಕಾಣುತ್ತಿತ್ತು. ಇದೀಗ ನಾಮಿನೇಟ್‌ ಆದ ತಕ್ಷಣ ತ್ರಿವಿಕ್ರಮ್‌ ವರಸೆಯೇ ಬದಲಾಗಿದೆ. ಮಂಜು ಜೊತೆ ಗಲಾಟೆ ಮಾಡಿಕೊಂಡು ಏಕವಚನದಲ್ಲಿ  ಹೋಗಲೋ ಅಂತ ಬೈದಿದ್ದಾರೆ.

ಬಿಗ್‌ಬಾಸ್‌ ಕನ್ನಡ 11ರ ಗ್ರ್ಯಾಂಡ್‌ ಫಿನಾಲೆ ಡೇಟ್‌, ಫೈನಲಿಸ್ಟ್‌ಗಳ ಹೆಸರು ಲೀಕ್‌!

 ಟಾಸ್ಕ್‌ ವಿಚಾರದಲ್ಲಿ ತ್ರಿವಿಕ್ರಮ್‌ ಅವರನ್ನು ಮಂಜು ಉಳಿಸಿಕೊಳ್ಳದೆ ಹೊರಗಿಟ್ಟರು ಎಂಬ ಕಾರಣಕ್ಕೆ   ಈ ವಿಚಾರವಾಗಿ ಧನ್‌ರಾಜ್‌, ತ್ರಿವಿಕ್ರಮ್ ಮತ್ತು ಮಂಜು ಮಧ್ಯೆ ಚರ್ಚೆ ನಡೆಯಿತು. ಇದಕ್ಕೆ ವೆಲ್‌ ಪ್ಲೈಯ್ಡ್‌ ಮಂಜಣ್ಣ ಸಿಗೋಣ ಅಂತ ಮಂಜು ಎದೆಗೆ ತ್ರಿವಿಕ್ರಮ್‌ ಕೈನಲ್ಲಿ  ಬಡಿದಿದ್ದಾರೆ. ಇದಕ್ಕೆ ಮಂಜು ಕೈ ಎತ್ತಿ ನನ್ನ ಬಳಿ ಮಾತನಾಡಬೇಡ ಎಂದಿದ್ದಾರೆ. ಜೊತೆಗೆ ತ್ರಿವಿಕ್ರಮ್‌ ನೀವು ನಾಮಿನೇಟ್‌ ಮಾಡಿದ್ದು ನನಗೆ ಬೇಜಾರಿಲ್ಲ ಗೌತಮಿ, ನಂದು-ಮಂಜುದು ಮಾತಷ್ಟೇ ಎಂದು  ಹೇಳಿದ್ದಾರೆ.

ಬಳಿಕ ಮಂಜು ಅವರನ್ನು ಏಕವಚನದಲ್ಲಿ ಸಂಭೋದಿಸಿ ನಿನ್ನತ್ರ ಮಾತಾಡೋಕೆ ನನಗೇನೈತೆ, ಥೂ ಎಂದು ಉಗಿದಿದ್ದಾರೆ. ತಕ್ಷಣ ಟ್ರಿಗರ್ ಆದ ಮಂಜು ನನಗೆ ಉಗಿದೆಯಾ? ಎಂದು ಕೇಳಿದ್ದಾರೆ.
ತ್ರಿವಿಕ್ರಮ್‌: ಹಾಂ , ನನ್ನಿಷ್ಟ ನಾನು ಉಗಿದುಕೊಳ್ಳುತ್ತೇನೆ? ನಿಂಗೆ ಉಗಿದ್ನಾ? ನಿಂಗೆ ಉಗಿದ್ರೆ ಮಾತನಾಡು
ಮಂಜು: ಅಷ್ಟು ಶೇಕ್‌ ಆಗ್ತದ್ದಿಯಾ? ನಾಮಿನೇಶನ್‌ ಅಂದ ಕೂಡಲೇ ಅಲ್ಲಾಡುತ್ತಿದ್ದೀಯಾ. ನೋಡಿದ್ದೀನಿ ನಡಿಯಲೋ, ನಿನಗೆ ಅವನನ್ನು (ಧನ್‌ರಾಜ್, ಹನುಮಂತ) ಕಂಪೇರ್ ಮಾಡಿದ್ರೆ ಬೆಸ್ಟ್.
ತ್ರಿವಿಕ್ರಮ್‌:ವ್ಯಕ್ತಿತ್ವದ ಬಗ್ಗೆ ನೀನು ನನ್ನತ್ರ ಮಾತಾಡ್ತಿದ್ದೀಯಾ? ಏಯ್‌ ಹೋಗಲೇ, ಆಯ್ತು ಹೋಗಲೋ
ಮಂಜು: ಥ್ಯಾಂಕ್ಯೂ ಸೋ ಮಚ್‌

ಇಷ್ಟೆಲ್ಲ ಚರ್ಚೆ ನಡೆದಿದ್ದು ನಾಮಿನೇಶನ್‌ ಟಾಸ್ಕ್‌ ಬಳಿಕ. ನಾಮಿನೇಶನ್‌ ಟಾಸ್ಕ್‌ ಅನ್ನು ಬಿಗ್‌ಬಾಸ್‌ ನೀಡಿದ್ದರು. ಮನೆಯ ನಾಯಕ ಕ್ಯಾಪ್ಟನ್‌ ಟಿಕೆಟ್‌ ಟು ಹೋಂ ಪ್ರಕಾರ ಐದು ಜನರನ್ನು ಮನೆಗೆ ಕಳುಹಿಸಲು ಮತ್ತು ಮೂವರನ್ನು ಸೇವ್‌ ಮಾಡುವುದು ಟಾಸ್ಕ್‌ ಆಗಿತ್ತು. ಇದರಲ್ಲಿ ಧನ್‌ರಾಜ್, ತ್ರಿವಿಕ್ರಮ್‌ ಮತ್ತು ಮಂಜು ಅವರನ್ನು ಉಳಿಸಿ ಸೇಫ್‌ ಜೋನ್‌ ನಲ್ಲಿಟ್ಟರು ರಜತ್‌. ಮಿಕ್ಕ ಐವರಿಗೆ ಟಿಕೆಟ್ ಟು ಹೋಂ ನಾಮಫಲಕ ನೀಡಿದರು. ಇದರ ಅನುಸಾರ 5 ಮಂದಿಗೆ ಬಿಗ್‌ಬಾಸ್‌ ನಾಮಿನೇಶನ್‌ ಟಾಸ್ಕ್‌ ಅನ್ನು ನೀಡಿದ್ದರು.

ಈ ನಾಮಿನೇಶನ್‌ ಟಾಸ್ಕ್‌  ಐದು ಸುತ್ತಿನಲ್ಲಿ ನಡೆದಿತ್ತು. ಪ್ರತಿಯೊಂದು ಸುತ್ತಿನಲ್ಲಿ ಗೆದ್ದವರು.  ಸೇಫ್ ಜೋನ್ ಗೆ ಬರಬೇಕಿತ್ತು. ಅಲ್ಲಿಂದ ಒಬ್ಬರನ್ನು ಟಿಕಟ್ ಟು ಹೋಂಗೆ ಕಳಿಸಬೇಕಿತ್ತು. ಅಷ್ಟೂ ಸುತ್ತಿನಲ್ಲಿ ತ್ರಿವಿಕ್ರಮ್‌ ಬಿಟ್ಟು ಮತ್ತೆಲ್ಲರೂ ನಾಮಿನೇಶನ್‌ ಟಾಸ್ಕ್‌ ಗೆ ಆಡಲು ಬದಲಾವಣೆ ಆಗಿದ್ದರು. ಆದರೆ ತ್ರಿವಿಕ್ರಮ್‌ ಮಾತ್ರ ತನ್ನದೇ ಕಾರಣ ಹೇಳಿಕೊಂಡು ಅದು ಹೇಗೋ ಉಳಿದು ಬಿಟ್ಟರು. ಆದರೆ ತಾನೊಂದು ಬಗೆದರೆ ದೈವವೊಂದು ಬರೆಯುತ್ತದೆ ಎಂಬಂತೆ ಕೊನೆಯ ಸುತ್ತಿನಲ್ಲಿ ಗೌತಮಿ ಟಾಸ್ಕ್‌ ಗೆದ್ದರು. ಈ ಸೇಪ್‌ ಜೋನ್‌ ನಲ್ಲಿರುವ ಮಂಜು, ಹನುಮಂತ ಮತ್ತು ತ್ರಿವಿಕ್ರಮ್‌ ಮಧ್ಯೆ ಯಾರೂ ಕೂಡ ಹೊರ ಹೋಗಲು ಒಪ್ಪುವುದಿಲ್ಲ. ಬಿಗ್‌ಬಾಸ್‌ ಹೇಳಿದಂತೆ ಗೌತಮಿ ಅವರೇ ಯಾರು ಹೊರಬರಬೇಕೆಂದು ಆಯ್ಕೆ ಮಾಡಿದಾಗ ತ್ರಿವಿಕ್ರಮ್‌ ಅವರನ್ನು ಹೊರಗಿಟ್ಟರು. ಇದರಿಂದ ತ್ರಿವಿಕ್ರಮ್‌ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.

ನಾಮಿನೇಟ್‌ ಆದ ಬಳಿಕ ತ್ರಿವಿಕ್ರಮ್‌ ನಡೆದುಕೊಂಡ ರೀತಿಯನ್ನು ಬಿಗ್‌ಬಾಸ್ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಖಂಡಿಸಿದ್ದಾರೆ. ಕೊಟ್ಟಿರುವ ರೀಸನ್‌ ಅನ್ನು ಸ್ಫೋರ್‌ಟಿವ್‌ ಆಗಿ ತೆಗೆದುಕೊಳ್ಳದೆ ಇಷ್ಟೊಂದು ಉರ್ಕೊಂಡಿರೋದು ಸರಿಯಲ್ಲ. ತ್ರಿವಿಕ್ರಮ್‌ ಕಡೆಯಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios