ಬಿಗ್‌ಬಾಸ್‌ 11ರಲ್ಲಿ ಹನುಮಂತ 50 ಲಕ್ಷ ನಗದು ಬಹುಮಾನದೊಂದಿಗೆ ವಿಜೇತರಾದರು. ತ್ರಿವಿಕ್ರಮ್‌ ರನ್ನರ್‌ಅಪ್‌. ವೈಲ್ಡ್‌ಕಾರ್ಡ್‌ ಎಂಟ್ರಿಯಾಗಿ ಬಂದು ಗೆದ್ದ ಹನುಮಂತ ಹಾಗೂ ಮೂರನೇ ಸ್ಥಾನ ಪಡೆದ ರಜತ್‌ ಇತಿಹಾಸ ನಿರ್ಮಿಸಿದರು. ಕಿಚ್ಚ ಸುದೀಪ್‌ ನಿರೂಪಣೆಯ ಕೊನೆಯ ಸೀಸನ್‌ ಇದಾಗಿತ್ತು.

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಿದೆ. ಹಳ್ಳಿ ಹೈದ ಗಾಯಕ ಹನುಮಂತ ಟ್ರೂಫಿ ಜೊತೆಗೆ 50 ಲಕ್ಷ ರೂ ನಗದು ಹಣ ಗೆದ್ದು ಬೀದಿದ್ದಾರೆ. ತ್ರಿವಿಕ್ರಮ್‌ ಅವರು ರನ್ನರ್ ಅಪ್‌ ಆಗಿದ್ದಾರೆ. ನಿರೂಪಕ ಕಿಚ್ಚ ಸುದೀಪ್ ಅವರು ನಡೆಸಿ ಕೊಟ್ಟ ಕೊನೆಯ ಸೀಸನ್‌ ಇದಾಗಿದ್ದು, ವಿನ್ನರ್‌ ಹನುಮಂತಗೆ ಟ್ರೋಫಿ ಮತ್ತು 50 ಲಕ್ಷ ಬಹುಮಾನದ ಮೊತ್ತದ ಚೆಕ್ ಹಸ್ತಾಂತರಿಸಿದರು.

ವಿನ್ನರ್ -ಹನುಮಂತ ಲಮಾಣಿ
ಮೊದಲ ರನ್ನರ್‌ ಅಪ್‌ - ತ್ರಿವಿಕ್ರಮ್‌
ಎರಡನೇ ರನ್ನರ್ ಅಪ್ - ರಜತ್‌ ಕಿಶನ್
ಮೂರನೇ ರನ್ನರ್ ಅಪ್‌ -ಮೋಕ್ಷಿತಾ ಪೈ
ನಾಲ್ಕನೇ ರನ್ನರ್ ಅಪ್‌ - ಉಗ್ರಂ ಮಂಜು
ಐದನೇ ರನ್ನರ್ ಅಪ್ -ಭವ್ಯಾ ಗೌಡ

ಹನುಮಂತಗೆ ಕಾಂನ್ಫಿಡೆಂಟ್‌ ಗ್ರೂಪ್ ಕಡೆಯಿಂದ 50 ಲಕ್ಷ ನಗದು ಬಹುಮಾನ, ಟ್ರೋಫಿ ಜೊತೆಗೆ ಬಿಗ್‌ಬಾಸ್‌ ನಲ್ಲಿ ಇಷ್ಟು ದಿನ ಇದ್ದದ್ದಕ್ಕಾಗಿ ಸಂಭಾವನೆ ಸಿಕ್ಕಿದೆ. ಇನ್ನು ಮೊದಲ ರನ್ನರ್ ಅಪ್‌ ಆದ ತ್ರಿವಿಕ್ರಮ್‌ ಅವರಿಗೆ 15 ಲಕ್ಷ ರೂ ಬಹುಮಾನ ಸಿಕ್ಕಿದೆ. ಬಿಗ್‌ಬಾಸ್‌ ಮನೆಯಲ್ಲಿ ಇದ್ದುದ್ದಕ್ಕೆ ವಾರಕ್ಕೆ 40 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದರಂತೆ. ಹೀಗಿರುವಾಗ 17 ವಾರಗಳಿಗೆ ಅವರು ಕೇವಲ 6,80,000 ಸಂಭಾವನೆ ಪಡೆಯಲಿದ್ದಾರೆ ಎನ್ನಬಹುದು. ಆದರೆ ಇನ್ನೂ ಕೆಲವು ವರದಿಗಳ ಪ್ರಕಾರ ಸಂಭಾವನೆ 10 ರಿಂದ 15 ಲಕ್ಷ ಪಡೆದಿರಬಹುದು ಎನ್ನಲಾಗಿದೆ.

ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ ಹಳ್ಳಿ ಹೈದ ಹನುಮಂತ ಲಮಾಣಿ, ಮುಗಿಲು ಮುಟ್ಟಿದ ಸಂಭ್ರಮ

ಇನ್ನು ಎರಡನೇ ರನ್ನರ್‌ ಅಪ್‌ ಆದ ರಜತ್‌ ಕಿಶನ್‌ ಅವರಿಗೆ ಸಂಗೀತ ಮೊಬೈಲ್ಸ್ ಅವರ ಕಡೆಯಿಂದ 7 ಲಕ್ಷ ರೂ ನಗದು, ಶ್ರೀ ಸಾಯಿ ಗೋಲ್ಡ್ ಫ್ಯಾಲೇಸ್‌ ಕಡೆಯಿಂದ 3 ಲಕ್ಷ ರೂ ನಗದು ಹೀಗೆ ಒಟ್ಟು 10 ಲಕ್ಷ ಲಭಿಸಿತು. ಇದಲ್ಲದೆ ಬಿಗ್‌ಬಾಸ್‌ ನಲ್ಲಿ ಒಂದು ವಾರಕ್ಕೆ 90 ರಿಂದ 1 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಸುಮಾರು 70 ದಿನಗಳ ಕಾಲ ರಜತ್‌ ಮನೆಯಲ್ಲಿದ್ದರು.

ಮೂರನೇ ರನ್ನರ್ ಅಪ್‌ ಆದ ಮೋಕ್ಷಿತಾ ಪೈ ಅವರಿಗೆ ಸದ್ಗುರು ಆಯುರ್ವೇದ ಕಡೆಯಿಂದ 5 ಲಕ್ಷ ರೂ ನಗದು,ಇಕೋ ಪ್ಲಾನೆಟ್‌ ಎಲಿವೇಟರ್ ಕಡೆಯಿಂದ 2 ಲಕ್ಷ ರೂ ನಗದು ಹೀಗೆ ಒಟ್ಟು 7 ಲಕ್ಷ ರೂ ಸಿಕ್ಕಿದೆ. ಮೂಲಗಳ ಪ್ರಕಾರ ಮೋಕ್ಷಿತಾ ಸಂಭಾವನೆ ವಾರಕ್ಕೆ 60 ಸಾವಿರ ರೂಪಾಯಿ. ಇದು ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಎರಡನೇ ಅತಿಹೆಚ್ಚು ಸಂಭಾವನೆಯಾಗಿದೆ. ವಾರಕ್ಕೆ 60 ಸಾವಿರ ರೂ. ಅಂದರೆ 17 ವಾರಗಳಿಗೆ 10 ಲಕ್ಷದ 20 ಸಾವಿರ ಸಂಭಾವನೆ ಸಿಗಲಿದೆ.

BBK11ಕಪ್‌ ಗೆಲ್ತಾರೆ ಅಂದುಕೊಂಡಿದ್ದ ಗ್ರೇ ಏರಿಯಾ ಮಂಜು 50 ಲಕ್ಷ ಗೆಲ್ಲುವ ರೇಸ್‌ನಿಂದ ಔಟ್!

ನಾಲ್ಕನೇ ರನ್ನರ್ ಅಪ್ ಆದ ಉಗ್ರಂ ಮಂಜು ಅವರು ವಾಕ್‌ಮೇಟ್‌ ಫೂಟ್‌ವೇರ್ ಕಡೆಯಿಂದ 2 ಲಕ್ಷರೂ ನಗದು, ಇಕೋ ಪ್ಲಾನೆಟ್‌ ಎಲಿವೇಟರ್ ಕಡೆಯಿಂದ 1 ಲಕ್ಷ ರೂ ನಗದು ಹೀಗೆ ಒಟ್ಟು 3 ಲಕ್ಷ ನಗದು ಜೊತೆಗೆ ಸಂಗೀತಾ ಮೊಬೈಲ್‌ ಕಡೆಯಿಂದ 50 ಸಾವಿರದ ಗಿಫ್ಟ್ ವೋಚರ್‌ ಸಿಕ್ಕಿತು. ಮಂಜು ಅವರಿಗೆ ವಾರಕ್ಕೆ 70 ಸಾವಿರ ರೂ. ಸಂಭಾವನೆ ಸಿಗುತ್ತಿತ್ತು ಎನ್ನಲಾಗಿದೆ. ಅಂದರೆ 17 ವಾರಕ್ಕೆ 11ಕ್ಕೂ ಲಕ್ಷಕ್ಕೂ ಅಧಿಕ ಹಣ ಪಡೆದಂತಾಗುತ್ತದೆ.

ಇನ್ನು 5 ನೇ ರನ್ನರ್‌ ಅಪ್‌ ಆದ ಭವ್ಯಾ ಅವರಿಗೆ ಒಟ್ಟು 3.5 ಲಕ್ಷ ನಗದು ಬಹುಮಾನ ಲಭಿಸಿದೆ. ಶ್ರೀ ಕೃಷ್ಣ ಹಳ್ಳಿ ತುಪ್ಪ ಅವರ ಕಡೆಯಿಂದ 2 ಲಕ್ಷ ರೂ ಕ್ಯಾಶ್ ಪ್ರೈಸ್‌, ಸುದರ್ಶನ್ ಸಿಲ್ಕ್ಸ್ ಕಡೆಯಿಂದ 1 ಲಕ್ಷ ರೂ ಕ್ಯಾಶ್ ಪ್ರೈಸ್‌, ಇಕೋ ಪ್ಲಾನೆಟ್‌ ಎಲಿವೇಟರ್ ಕಡೆಯಿಂದ 50 ಸಾವಿರ ರೂ ಕ್ಯಾಶ್ ಪ್ರೈಸ್ ಸಿಕ್ಕಿತ್ತು. ಇನ್ನು ಸಂಭಾವನೆಯಾಗಿ ವಾರಕ್ಕೆ 40 ಸಾವಿರ ರೂ. ಸಂಭಾವನೆ ಸಿಗುತ್ತಿತ್ತು ಎನ್ನಲಾಗಿದೆ. ಅದನ್ನು ಲೆಕ್ಕ ಹಾಕಿದರೆ ಭವ್ಯಾಗೆ ಒಟ್ಟು 17 ವಾರಕ್ಕೆ 6 ಲಕ್ಷದ 80 ಸಾವಿರ ರೂ ಸಿಕ್ಕಿದೆ. 

ಇತಿಹಾಸ ಬರೆದ ಹನುಮಂತ ಮತ್ತು ರಜತ್‌: ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದು ಫಿನಾಲೆಯಲ್ಲಿ ಗೆದ್ದು ಮತ್ತು ಮೂರನೇ ಸ್ಥಾನ ಪಡೆದು ಕ್ರಮವಾಗಿ ಹನುಮ ಮತ್ತು ರಜತ್‌ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೆ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿ ಯಾವೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಅದರಲ್ಲೂ ಹನುಮ 21ನೇ ದಿನಕ್ಕೆ ಎಂಟ್ರಿ ಕೊಟ್ಟು 99 ದಿನಗಳ ಕಾಲ ಮನೆಯಲ್ಲಿದ್ದು ಗೆದ್ದು ಬೀಗಿದ್ದಾರೆ. ರಜತ್‌ ಅವರು 50 ದಿನಗಳ ನಂತರ ಮನೆಗೆ ಎಂಟ್ರಿ ಕೊಟ್ಟಿದ್ದರು. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್‌ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ದರು. ಮಿಕ್ಕ 4 ಫಿನಾಲೆ ಸ್ಪರ್ಧಿಗಳು ಮನೆಯಲ್ಲಿ 119 ದಿನ ಜೀವಿಸಿದ್ದರು.