ವೀಕೆಂಡ್‌ನಲ್ಲಿ ಕಿಚ್ಚನನ್ನು ಯಾವ ಚಾನೆಲ್‌ನಲ್ಲಿ ನೋಡ್ಬೇಕು ಎಂಬುದೇ ಫುಲ್ ಕನ್ಫ್ಯೂಸ್!
ಕಿಚ್ಚ ಸುದೀಪ್ ಈ ವಾರ ಬಿಗ್‌ಬಾಸ್ ಮತ್ತು ಸರಿಗಮಪ ಎರಡರಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಜೊತೆ ಸರಿಗಮಪ ವೇದಿಕೆಯಲ್ಲಿ ಕಿಚ್ಚ ಭಾವುಕ ಕ್ಷಣಗಳನ್ನು ಕಳೆದಿದ್ದಾರೆ. ಇದು ಅಭಿಮಾನಿಗಳಿಗೆ ಯಾವ ಚಾನೆಲ್ ನೋಡಬೇಕೆಂಬ ಗೊಂದಲ ಮೂಡಿಸಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡದ ಸೀಸನ್ 11 ನಡೆಯುತ್ತಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಬರುವುದನ್ನೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ವಾರ ಪೂರ್ತಿಯ ಸಂಚಿಕೆ ನೋಡಿತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಕಿಚ್ಚ ಶನಿವಾರ ಮತ್ತು ಭಾನುವಾರ ನಿರೂಪಣೆಗೆ ಬಂದ್ರೆ ಒಂದಿಚೂ ಕದಲದೆ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ.
ಆದರೆ ಈ ವಾರ ಮಾತ್ರ ಅಭಿಮಾನಿಗಳು ಕಿಚ್ಚನನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಬೇಕೋ ಅಥವಾ ಜೀ ಕನ್ನಡ ವಾಹಿನಿಯ ಸರಿಗಮಪ ಶೋ ನಲ್ಲಿ ನೋಡಬೇಕೋ ಎಂಬ ಗೊಂದಲದಲ್ಲಿದ್ದಾರೆ. ಯಾಕೆಂದರೆ ಈ ವಾರ ಝೀ ಕನ್ನಡದ ಸರಿಗಮಪ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷ 2025ನ್ನು ಕಿಚ್ಚನ ಕುಟುಂಬದ ಜೊತೆ ಜೀ ಕನ್ನಡ ವಾಹಿನಿ ಆಚರಿಸಿದೆ.
ಬಿಗ್‌ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ ಡೇಟ್, ಫೈನಲಿಸ್ಟ್‌ಗಳ ಹೆಸರು ಲೀಕ್!
ಝೀ ಕನ್ನಡದಲ್ಲಿ (Zee Kannada) ಇತ್ತೀಚೆಗಷ್ಟೇ ಆರಂಭವಾದ ಸರಿಗಮಪ ಕಾರ್ಯಕ್ರಮ ಅದ್ಧೂರಿಯಾಗಿಯೇ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್ (Rajesh Krishnan), ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ.
ಈ ಶೋನ ಸ್ಪರ್ಧಿಗಳು ಕಿಚ್ಚ ನಟನೆಯ ಸಿನೆಮಾದ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಪತ್ನಿ ಪ್ರಿಯಾರಿಗಾಗಿ ಓ ಪ್ರಿಯಾ ಐ ಲವ್ ಯು ಲವ್ ಯೂ ಡಿಯರ್ ಎನ್ನುತ್ತಾ, ಮನಬಿಚ್ಚಿ ಹಾಡಿದರೆ, ರಾ ರಾ ರಕ್ಕಮ್ಮ ಹಾಡಿಗೆ ತುಂಬಾನೆ ಮುದ್ದಾಗಿ ಪುಟಾಣಿ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಇದೇ ಮೊದಲ ಬಾರಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿ ಅಪ್ಪನನ್ನು ಸಂತೋಷ ಪಡಿಸಿದ್ದಾರೆ.
ಇನ್ನು ಸರಿಗಮಪ ವೇದಿಕೆ ಇತ್ತೀಚೆಗೆ ನಿಧನರಾದ ಅಮ್ಮನ ಪ್ರತಿಮೆಯನ್ನು ನೀಡಲಾಗಿದೆ. ಕಿಚ್ಚ ಇದನ್ನು ಕಂಡು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಕಿಚ್ಚನ ಜೊತೆಗೆ ಪತ್ನಿ ಮತ್ತು ಮಗಳು ಮಾತ್ರವಲ್ಲ ಅಲ್ಲಿ ನೆರೆದಿದ್ದ ಅಷ್ಟೂ ಮಂದಿಯ ಕಣ್ಣಂಚಲಿ ನೀರು ಬಂದಿದೆ. ಒಟ್ಟಾರೆ ಇಡೀ ಕಾರ್ಯಕ್ರಮ ಭಾವುಕತೆಗೆ ಸಾಕ್ಷಿಯಾಗಿದೆ. ಈ ಶನಿವಾರ ಮತ್ತು ಭಾನುವಾರದ ಎಪಿಸೋಡ್‌ನಲ್ಲಿ ಇದರ ಪ್ರಸಾರ ಕಾಣಲಿದೆ.
ಈ ವೀಕೆಂಡ್ಗೆ ಸರಿಗಮಪ ವೇದಿಕೆಯಲ್ಲಿ ಕಿಚ್ಚೋತ್ಸವ: ಅಮ್ಮನನ್ನ ನೆನೆದು ಕಣ್ಣೀರು ಹಾಕಿದ ಕಿಚ್ಚ ಸುದೀಪ್
ಈಗ ಅಭಿಮಾನಿಗಳಿಗೆ ಗೊಂದಲ ಇರುವುದು ಇಲ್ಲಿಯೇ ಕಲರ್ಸ್ ನಲ್ಲಿ ಬಿಗ್‌ಬಾಸ್ ಕನ್ನಡದ ವೀಕೆಂಡ್ ಶೋ ಗಳು ನಡೆಯಲಿದೆ. ಪ್ರತೀದಿನ ಬಿಗ್‌ಬಾಸ್ ಎಪಿಸೋಡ್ ರಾತ್ರಿ 9:30ಯಿಂದ 11 ಗಂಟೆ ನಡೆದರೆ ವೀಕೆಂಡ್ ನಲ್ಲಿ ಕಿಚ್ಚನ ಪಂಚಾಯಿತಿಗಳು 9 ಗಂಟೆಯಿಂದ 11 ಗಂಟೆ ತನಕ ನಡೆಯಲಿದೆ. ಇನ್ನು ಜೀ ಕನ್ನಡದಲ್ಲಿ ಸರಿಗಮಪ 7:30ರಿಂದ 9:30ರ ವರೆಗೆ ನಡೆಯಲಿದೆ. ಹೀಗಾಗಿ 9ಗಂಟೆಯಿಂದ 9:30 ತನಕ ಅರ್ಧಗಂಟೆಗಳ ಕಾಲ ಎರಡು ದಿನವೂ ಯಾವ ಚಾನೆಲ್‌ನಲ್ಲಿ ಕಿಚ್ಚನನ್ನು ನೋಡಬೇಕೆಂಬ ಗೊಂದಲದಲ್ಲಿ ವೀಕ್ಷಕರಿದ್ದಾರೆ. ನೀವು ಯಾವ ಚಾನೆಲ್ ನಲ್ಲಿ ಕಿಚ್ಚನನ್ನು ನೋಡಲು ಇಚ್ಚಿಸುತ್ತೀರಿ ಕಮೆಂಟ್ ಮಾಡಿ.