ಬಾಯಿಗೆ ಬಂದಿದ್ದನ್ನು ಹೇಳಿದ್ರೂ ಸುಮ್ಮನಿದ್ದೀರಾ ಬಿಗ್ ಬಾಸ್? ಇದು ಸ್ಲಂ ಬುದ್ಧಿ; ರಜತ್ ಕಿಶನ್ ವಿರುದ್ಧ ನೆಟ್ಟಿಗರ ಆಕ್ರೋಶ
ರಜತ್ ಕಿಶನ್ ಮಾತನಾಡುತ್ತಿರುವ ಶೈಲಿಯಿಂದ ಮಕ್ಕಳು ಟಿವಿ ನೋಡಲು ಆಗುತ್ತಿಲ್ಲ....ನನ್ನ ಮಗ ಕೆಟ್ಟ ಪದ ಕಲಿತರೆ ಅದು ಅವನಿದ್ದಲೇ......
ಬಿಗ್ ಬಾಸ್ ಸೀಸನ್ 11ರ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ 50ನೇ ದಿನಕ್ಕೆ ಕಾಲಿಟ್ಟ ವ್ಯಕ್ತಿ ರಜತ್ ಕಿಶನ್. ಮನೆಗೆ ಕಾಲಿಡುತ್ತಿದ್ದಂತೆ ಧೂಳ್ ಎಬ್ಬಿಸಿದ ಕಿಶನ್ ನಿಜಕ್ಕೂ ಟಫ್ ಸ್ಪರ್ಧಿ ಎಂದು ಮನೆ ಮಂದಿ ಮಾತ್ರವಲ್ಲ ವೀಕ್ಷಕರೂ ಕೂಡ ಅಂದುಕೊಂಡಿದ್ದರು ಆದರೆ ದಿನ ಕಳೆಯುತ್ತಿದ್ದಂತೆ ಈ ವ್ಯಕ್ತಿ ಬರೀ ಮಾತನಾಡುವುದು ಎಂದು ಟ್ರೋಲ್ ಆಗುತ್ತಿದ್ದಾರೆ. ಉಗ್ರಂ ಮಂಜು ಗ್ರೇ ಏರಿಯಾ ಹುಡುಕಿಕೊಳ್ಳುತ್ತಾರೆ ಜಗಳ ಮಾಡುತ್ತಾರೆ ಎಂದು ಬೇಸರ ಇತ್ತು ಆದರೆ ರಜತ್ ಬಂದ ಮೇಲೆ ಶೋ ನೋಡಲು ಮನಸ್ಸು ಹೋಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ ನೆಟ್ಟಿಗರು.
11ನೇ ವಾರದ ನಾಮಿನೇಷನ್ ಮಾಡಲು ಬಿಗ್ ಬಾಸ್ ಸೀಸನ್ 10ರ ಜನಪ್ರಿಯ ಸ್ಪರ್ಧಿಗಳು ಬರುತ್ತಾರೆ. ತುಕಾಲಿ ಸಂತೋಷ್ ಆಗಮಿಸಿದ್ದಾಗ ಧನರಾಜ್ ನಾಮಿನೇಷನ್ ಮಾಡಿವ ಅವಕಾಶ ಪಡೆದುಕೊಳ್ಳುತ್ತಾರೆ. ಈ ವೇಳೆ 'ನನ್ನ ಅಭಿಪ್ರಾಯ ಹೇಳೋಕೆ ಬಂದರೆ ರಜತ್ ಸರಿಯಾಗಿ ಮಾತನಾಡುವುದಿಲ್ಲ ನನ್ನನ್ನು ಪದೇ ಪದೇ ಹುಚ್ಚ ಎಂದು ಅಡ್ಡಗಾಲು ಹಾಕುತ್ತಾರೆ ನನಗೆ ಇಷ್ಟ ಆಗುವುದಿಲ್ಲ' ಎಂಬ ಕಾರಣ ಕೊಟ್ಟರು. ಸಾಮಾನ್ಯವಾಗಿ ರಜತ್ ಯಾವುದೇ ಅಭಿಪ್ರಾಯ ಅಥವಾ ಕಾರಣ ಕೊಟ್ಟರೂ ಮನೆ ಮಂದಿ ಸುಮ್ಮನೆ ಇರಬೇಕು ಆದರೆ ತಮ್ಮ ಬಗ್ಗೆ ಯಾರು ಏನೇ ಹೇಳಿದ್ದರೂ ಜಗಳಕ್ಕೆ ಬೀಳುತ್ತಾರೆ. ಈಗ ಅಮಾಯಕ ಧನರಾಜ್ ವಿರುದ್ಧವೂ ಹಾಗೆ ಮಾಡಿದ್ದಾರೆ.
ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!
'ಧನರಾಜ್ ಉಳಿದುಕೊಳ್ಳಬೇಕು ಎಂದು ಯಾರ ಕಾಲನ್ನು ಬೇಕಿದ್ದರೂ ಹಿಡಿದುಕೋ ನಾನು ಹಿಡಿದುಕೊಳ್ಳುವುದಿಲ್ಲ. ಇದು ನಾನು. ನನ್ನ ದೌಲತ್ತು ನನ್ನ ದುರಹಂಕಾರದಲ್ಲಿ ನಾನು ಬದುಕಿರೋದು. ನಾನು ಯಾರ ಕಾಲನ್ನು ಹಿಡಿಯುವುದಿಲ್ಲ. ನನಗೆ ಸ್ವಾಭಿಮಾನ ಇದೆ ಹೀಗಾಗಿ ಯಾವತ್ತಿದ್ದರೂ ನನ್ನ ನಿರ್ಧಾರವೇ ಫೈನಲ್' ಎಂದು ಹೇಳುತ್ತಾರೆ ರಜತ್. ಈ ಮಾತುಕತೆ ಇಲ್ಲಿಗೆ ನಿಂತಿಲ್ಲ ಮತ್ತೊಮ್ಮೆ ಗಾರ್ಡನ್ ಏರಿಯಾದಲ್ಲಿ ರಜತ್ ಮತ್ತು ಧನರಾಜ್ ನಡುವೆ ಮಾತುಕತೆ ಶುರುವಾಗುತ್ತದೆ...ಆಗ ಇಬ್ಬರ ನಡುವೆ ಕೈ ಕೈ ಮೀಸುವ ಮಟ್ಟಕ್ಕೆ ಜಗಳ ಸೃಷ್ಟಿ ಆಗುತ್ತದೆ ಅಷ್ಟರಲ್ಲಿ ಕ್ಯಾಪ್ಟನ್ ಗೌತಮಿ ಬಂದು ತಡೆಯುತ್ತಾರೆ.
ಕಾವ್ಯ ಗೌಡ ಗಂಡನ ಮನೆ ನಿಜಕ್ಕೂ ಯಾರಿಗೆ ಸೇರಿದ್ದು? ನೆಟ್ಟಿಗರ ಕೊಂಕು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ!
ಜಗಳದಿಂದ ಧನರಾಜ್ ಬೇಸರ ಮಾಡಿಕೊಂಡರೂ ತಮ್ಮ ಆಟವನ್ನು ನಿಲ್ಲಿಸುವುದಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ. ಆದರೆ ದಿನದಿಂದ ದಿನಕ್ಕೆ ರಜತ್ ಕಿಶನ್ ಮಾತನಾಡುತ್ತಿರುವ ಶೈಲಿ, ಬಾಡಿ ಲ್ಯಾಂಗ್ವೇಜ್ ನೋಡಿದರೆ ನಮ್ಮ ಮಕ್ಕಳು ಬಿಗ್ ಬಾಸ್ ನೋಡಬಾರದು ಅನಿಸುತ್ತದೆ. ದಯವಿಟ್ಟು ಬಿಗ್ ಬಾಸ್ ಅಥವಾ ಸುದೀಪ್ ಸರ್ ಒಮ್ಮೆ ಆದರೂ ರಜತ್‌ಗೆ ಸೀರಿಯಸ್ ಅಗಿ ವಾರ್ನಿಂಗ್ ಕೊಡಬೇಕು. ಮನೋರಂಜನೆ ನೆಪದಲ್ಲಿ ಇಲ್ಲದಸಲ್ಲದ ರೀತಿ ಮಾತನಾಡುತ್ತಾನೆ ನನಗೆ ಇದು ಸ್ಲಂ ಭಾಷೆ ಅನಿಸುತ್ತದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಬಾಯಿ ರುಚಿ ಅಂತ ಬ್ರೆಡ್ ಮತ್ತು ಬಿಸ್ಕೆಟ್ ತಿನ್ನುತ್ತೀರಾ? ಸ್ಲೋ ಪಾಯ್ಸನ್ ಸತ್ಯ ಬಿಚ್ಚಿಟ್ಟ ವೈದ್ಯರು