Bigg Boss Jagadish News: ಬಿಗ್ ಬಾಸ್ ಕನ್ನಡ ಸೀಸನ್ 11 ಶೋನ ವಿವಾದಾತ್ಮಕ ಸ್ಪರ್ಧಿ ಜಗದೀಶ್ ಅವರು ಜೈಲಿನಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. 93 ದಿನಗಳ ಬಳಿಕ ಅವರು ಜೈಲಿನಿಂದ ಹೊರಗಡೆ ಬಂದಿದ್ದಾರೆ.
ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ಕೂರಿಸೋ ವಿಚಾರದಲ್ಲಿ ಅಲ್ಲಿನ ಸ್ಥಳೀಯರ ಜೊತೆ ಜಗದೀಶ್ ಅವರು ಗಲಾಟೆಗೆ ಇಳಿದಿದ್ದರು. ಈ ಗಲಾಟೆ ನಡುವೆ ಅವರಿಗೂ ಪೆಟ್ಟಾಗಿತ್ತು. ಆ ನಂತರದಲ್ಲಿ ಜಗದೀಶ್ ವಿರುದ್ಧ ದೂರು ದಾಖಲಾಗಿತ್ತು. ಆ ನಂತರದಲ್ಲಿ ಅವರು ಜೈಲು ಸೇರಿದ್ದರು. ಈಗ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ.
ಜಗದೀಶ್ ಅವರಿಗೆ ಜಾಮೀನು ಸಿಕ್ಕಿದೆ ಎಂದು ಅವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಇನ್ನಷ್ಟು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ನಮಸ್ತೆ ಕರ್ನಾಟಕ,
ನಾನು ಕೆ.ಎನ್. ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ,
• PSI ಹಗರಣವನ್ನು ಬಯಲು ಮಾಡಿದ್ದು ,
• ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ,
• ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡನ್ನು ಬಹಿರಂಗಪಡಿಸಿದ್ದು ,
• ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು ,
• ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು ,
• ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು
ಇವೆಲ್ಲವೂ ನನ್ನ ಹೋರಾಟದ ಭಾಗ!
ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು.
ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ.
ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ!
ನಾನು ಶರಣಾಗುವುದಿಲ್ಲ!
ಜೈ ಕರ್ನಾಟಕ!
34.17 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಜಿಲ್ಲಾಧಿಕಾರಿ ಜಗದೀಶ್
ಈ ಹಿಂದೆ ಆಗಿದ್ದ ವಿವಾದಗಳು ಯಾವುವು?
ಇದಕ್ಕೂ ಮುನ್ನ ಜಗದೀಶ್ ಅವರು ಪಾಸ್‌ಪೋರ್ಟ್ ಆಫೀಸ್ ಎದುರು ಅಲ್ಲಿನ ಸೆಕ್ಯುರಿಟಿ ಗಾರ್ಡ್‌ಗೆ ಹೊಟ್ಟೆಯಿಂದ ದೂಡಿದ್ದರು. ಅಷ್ಟೇ ಹೊಡೆಯುವ ಪ್ರಯತ್ನವನ್ನೂ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆ ನಂತರ ಅಣ್ಣಮ್ಮ ಕೂರಿಸುವ ವಿಚಾರದಲ್ಲಿ ಸ್ಥಳೀಯ ಹುಡುಗರ ಜೊತೆ ಗಲಾಟೆ ಮಾಡಿದ್ದರು. ಜಗದೀಶ್‌ಗೆ ಅಲ್ಲಿದ್ದವರೆಲ್ಲರೂ ಸೇರಿಕೊಂಡು ಸರಿಯಾಗಿ ಹೊಡೆದಿದ್ದರು. ಆಮೇಲೆ ಮತ್ತೆ ಜಗದೀಶ್ ಮೇಲೆ ಹಲ್ಲೆ ಆಗಿದೆ. ಆ ಹಲ್ಲೆಯಿಂದ ಜಗದೀಶ್ ಅವರ ಮೂಗಿನಿಂದ ರಕ್ತ ಸುರಿಯುತ್ತಿದೆ.
ಮತ್ತೊಮ್ಮೆ ಪುಂಡರಿಂದ ಬಿಗ್ ಬಾಸ್ ಜಗದೀಶ್ ಮೇಲೆ ದಾಳಿಯಾಗಿತ್ತು. ಜಗದೀಶ್ ಮೂಗಿನಿಂದ ರಕ್ತ ಬರುವಂತೆ ಹೊಡೆದಿದ್ದರು. ಬೆಂಗಳೂರಿನಲ್ಲಿರೋ ಸಹಕಾರ ನಗರದಲ್ಲಿರುವ ಜಗದೀಶ್ ಮನೆ ಹತ್ತಿರವೇ ಈ ಘಟನೆ ನಡೆದಿತ್ತು. ಅಣ್ಣಮ್ಮ ಕೂರಿಸುವ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಬಾರಿಯೂ ಅವರ ಮೇಲೆ ನೂರಾರು ಮಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಶೆಟ್ಟರ್ ಗೆ ಕಾರ್ ಓಡಿಸೋಕೆ ಬರಲ್ವಾ?
ಆ ನಂತರ ಕೊಡಗೆಹಳ್ಳಿ ಪೊಲೀಸರ ಜೊತೆಯಲ್ಲಿ ಜೀಪ್‌ವೊಳಗಡೆ ಹೋಗುತ್ತಿರುವುದನ್ನು ಅವರು ಫೇಸ್‌ಬುಕ್ ಲೈವ್ ಮೂಲಕ ತಿಳಿಸಿದ್ದರು.. ಅಷ್ಟೇ ಅಲ್ಲದೆ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ವಕೀಲ ಜಗದೀಶ್ ಅವರು ಪ್ರಶ್ನೆ ಮಾಡಿದ್ದರು. ಪೊಲೀಸ್ ಜೀಪ್‌ನಲ್ಲಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಹೇಳಿದ್ದರು. ಅಣ್ಣಮ್ಮಕೂರಿಸುವ ವಿಚಾರದಲ್ಲಿಯೂ, ಕಾರ್ ಪಾರ್ಕಿಂಗ್ ಬಗ್ಗೆ ಜಗದೀಶ್ ಅವರು ಗಲಾಟೆ ಮಾಡಿದ್ದರು. ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದಕ್ಕೂ ಜಗದೀಶ್ ಅವರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಆದರೆ ವಕೀಲ ಜಗದೀಶ್ ಅವರು ಕೂಡ ಕೈ ಎತ್ತಿದ್ದಾರೆ ಅನ್ನೋ ಆರೋಪಗಳಿವೆ.


