1 ಗಂಟೆ ತಡವಾಗಿ ಬಂದ ಮಿನಿಸ್ಟರ್‌ನೇ ಮಾತನಾಡಿಸಲಿಲ್ಲ ತಂದೆ ಪಿ ಲಂಕೇಶ್: ಇಂದ್ರಜಿತ್‌

ಸಮಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಲಂಕೇಶ್ ಎಂದು ರಿವೀಲ್ ಮಾಡಿದ ಇಂದ್ರಜಿತ್. ತಂದೆ- ಮಗನ ಸ್ನೇಹ ಹೀಗಿತ್ತು..... 

Indrajith talks about father P Lankesh in just curious rapid rashmi interview vcs

ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಟ, ನಿರ್ದೇಶಕ ಮತ್ತು ಲಂಕೇಶ್ ಪತ್ರಿಕೆ ಸ್ಥಾಪಕ ಸಂಪಾದಕರಾಗಿದ್ದ ಪಿ ಲಂಕೇಶ್ ಅವರ ಬಗ್ಗೆ ಪುತ್ರ ಇಂದ್ರಜಿತ್‌ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಈ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಂದೆ ಮಗನ ಸಂಬಂಧ ಹೇಗಿತ್ತು? ಲಂಕೇಶ್ ಸಮಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು, ಲೇಖನ ಬರೆಯಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಮಯ ಯಾವುದು ಎಂದು ಪ್ರತಿಯೊಂದನ್ನು ರಿವೀಲ್ ಮಾಡಿದ್ದಾರೆ. 

ತಂದೆ- ಮಗ ಸ್ನೇಹಿತರು:

'ನಾನು ನನ್ನ ತಂದೆ ಸ್ನೇಹಿತರಾದಾಗ ನಡೆದ ಘಟನೆ ಬಗ್ಗೆ  ಹೇಳಲು ಇಷ್ಟ ಪಡುತ್ತೀನಿ. ನಾನು ಆಲ್‌ರೌಂಡರ್‌ ಪತ್ರಿಕೆ ಶುರು ಮಾಡಿದಾಗ ಅವರದ್ದೇ ಒಂದು ಕಾಲಮ್ ಇರುತ್ತಿತ್ತು, ಲಂಕೇಶ್ ಪತ್ರಿಯಲ್ಲಿ ನಾನು ಸಬ್‌ ಎಡಿಟರ್‌ ಆಗಿ ಮ್ಯಾನೇಜರ್‌ ಆಗಿ ಸೇರಿಕೊಂಡೆ. ತಂದೆ ಕೆಳಗ ಕೆಲಸ ಮಾಡುವುದು ಕಷ್ಟ ಆಗಿದ್ದರೂ ನಾನು ಕೆಲಸ ಕಲಿತುಕೊಂಡೆ. ದಿನ ಬೆಳಗ್ಗೆ ಇಬ್ರು ಎದ್ದು ಒಟ್ಟಿಗೆ ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಿದ್ವಿ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಲೇಖನ ಬರೆಯುತ್ತಿದ್ದರು ಏಕೆಂದರೆ ಆ ಸಮಯದಲ್ಲಿ ಯಾವುದೇ ಡಿಸರ್ಬ್‌ ಆಗುತ್ತಿರಲಿಲ್ಲ ಎನ್ನುತ್ತಿದ್ದರು, 6 ಗಂಟೆಗೆ ನಾನು ಅವರ ಬಿಪಿ ಚೆಕ್ ಮಾಡಬೇಕು ಆ ದಿನ ಬಿಪಿ ಸರಿಯಾಗಿದ್ದರೆ ಮಾತ್ರ ವಾಕಿಂಗ್ ಹೋಗುತ್ತಿದ್ದರು. ಜನವರಿ 24, 2000ರಲ್ಲಿ ಇಬ್ರು ಒಟ್ಟಿಗೆ ಕೆಲಸ ಮಾಡಿದ ನಂತರ ವಿದ್ಯಾರ್ಥಿ ಭವನ್‌ನಿಂದ ದೋಸೆ ತರಿಸಿ ತಿಂದ್ವಿ ಅಂದು ಅವರಿಗೆ ಹುಷಾರಿಲ್ಲ ಹೀಗಾಗಿ ಕೆಳಗೆ ಬಂದು 15 ನಿಮಿಷಗಳ ಕಾಲ ಕೆಲಸದ ಬಗ್ಗೆ ಪ್ರಿಂಟಿಂಗ್ ಬಗ್ಗೆ ಚರ್ಚೆ ಮಾಡಿದ್ವಿ ಅಲ್ಲದೆ ನನ್ನ ಹೆಗಲ ಮೇಲೆ ಕೈ ಹಾಕಿ ಮಾತನಾಡಿದ್ದರು ಆನಂತರ ಕಾರಿನಲ್ಲಿ ಹೊರಟರು. ಎಂದಿನಂತೆ ನಾನು ಬೆಳಗ್ಗೆ ಎದ್ದು ಅವರ ಬಿಪಿ ಚೆಕ್ ಮಾಡಲು ಹೋಗಿದೆ ....ಮಲಗಿದ್ದವರು ಎದ್ದೇ ಇಲ್ಲ. ಪ್ರತಿ ದಿನ ಬೆಳಗ್ಗೆ 6 ಗಂಟೆ ದಿನ ಶುರು ಬಿಪಿ ಚೆಕ್ ವಾಕಿಂಗ್ ತಿಂಡಿ 9 ಗಂಟೆಗೆ ಕೆಲಸ ಆನಂತರ ಮನೆ ಅಷ್ಟೇ ಅವರ ದಿನಚರಿ. ಈ ಸಮಯದಲ್ಲೇ ಅವರ ಸ್ನೇಹಿತರು ಆಫೀಸ್‌ಗೆ ಬಂದು ಭೇಟಿ ಮಾಡುತ್ತಿದ್ದರು. ಎಲ್ಲೂ ಹೊರ ಹೋಗುತ್ತಿರಲಿಲ್ಲ ಕಾರಣ ಹೆಚ್ಚಿಗೆ ಬರೆಯುತ್ತಿದ್ದರು ಜನರು ಬಂದು ಮಾತನಾಡಿಸಿದಾಗ ಮುಜುಗರ ಆಗುತ್ತಿತ್ತು ಅವರಿಗೆ' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಅಪ್ಪ ಅಮ್ಮ ಇಂಡಸ್ಟ್ರಿಯಲ್ಲಿ ಇದ್ದರೂ ನಾನು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಿತ್ತು: ಸಿಹಿ ಕಹಿ ಚಂದ್ರು ಪುತ್ರಿ ಹೇಳಿಕೆ ವೈರಲ್!

ಸಮಯ ಮುಖ್ಯ:

'ಹಲವಾರು ಮಂತ್ರಿಗಳು, ಕ್ಯಾಬಿನೆಟ್ ಮಿನಿಸ್ಟರ್‌ಗಳು ಅರ್ಧ ಗಂಟೆ ಲೇಟ್ ಆಯ್ತು ಬರುವುದು ಅಂದ್ರೆ ಭೇಟಿ ಮಾಡುತ್ತಿರಲಿಲ್ಲ ಏಕೆಂದರೆ ಅಷ್ಟು ಸಮಯ ಪ್ರಜ್ಞೆ ಇರುತ್ತಿತ್ತು. ಒಮ್ಮೆ ಜಾಫರ್ ಷರೀಫ್ ರೈಲ್ವೆ ಸೆಂಟರಲ್ ಮಿನಿಷ್ಟರ್ ಆದಾಗ 9 ಗಂಟೆಗೆ ಬರ್ತೀನಿ ಅಂತ ಹೇಳಿ 10 ಗಂಟೆಗೆ ಬಂದರು. ಒಂದು ಗಂಟೆ ತಡವಾಗಿತ್ತು ಎಂದು ಆಫೀಸ್‌ಗೆ ಬಂದು ಬರೆಯಲು ಶುರು ಮಾಡಿದ್ದರು ಅವರ ಪಿಎ ಪ್ರತಿಯೊಬ್ಬರು ನನಗೆ ಕೇಳುತ್ತಿದ್ದರು. ನಾನು ಹೊಳಗೆ ಹೋದರೆ ನನಗೆ ಬೈಯುತ್ತಾರೆ ಹೀಗಾಗಿ ನಾನು ಸುಮ್ಮನಾದೆ ಹಾಗೆ ಅವರು ಹೊರಟು ಬಿಟ್ಟರು. ಯಾವತ್ತೂ ನನ್ನ ತಂದೆ ನೇರವಾಗಿ ಪ್ರಭಾವ ಬೀರುತ್ತಿರಲಿಲ್ಲ ಅವರ ಲೇಖನ ಮತ್ತು ಸಿನಿಮಾಗಳ ಮೂಲಕ ಜೀವನದ ಪಾಠ ಸಿಗುತ್ತಿತ್ತು' ಎಂದಿದ್ದಾರೆ ಇಂದ್ರಜಿತ್.  

ಅಭಿಮಾನಿಗಳಿಗೆ iphone 15 ಗಿಫ್ಟ್‌; ಯೂಟ್ಯೂಬರ್ ಪೂಜಾ ಕೆ ರಾಜ್‌ ಹೆಸರಿನಲ್ಲಿ ಪುಂಡರಿಂದ ದರೋಡೆ!

Latest Videos
Follow Us:
Download App:
  • android
  • ios