ಕಿಚ್ಚ ಸುದೀಪ್‌ ಕ್ಲಾಸ್ ಗೆ ಲಾಯರ್ ಜಗದೀಶ್‌ ಗಪ್‌ಚುಪ್‌, ತುಟಿಕ್‌ ಪಿಟಿಕ್ ಅಂದಿಲ್ಲ!

ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಲಾಯರ್ ಜಗದೀಶ್ ಅವರ ನಡವಳಿಕೆ ಬಗ್ಗೆ ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಯಮ ಉಲ್ಲಂಘನೆ ಮತ್ತು ಕೆಟ್ಟ ಪದ ಬಳಕೆಗಳಿಗಾಗಿ ಜಗದೀಶ್ ಅವರನ್ನು ಪ್ರಶ್ನಿಸಿದ ಸುದೀಪ್, ಸಿಎಂ ಆಗಬೇಕೆಂಬ ಆಸೆ ಇದ್ದರೆ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.

bigg boss kannada 11 kiccha sudeep take class to advocate jagadish in  varada kathe kicchana jothe gow

ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ 1 ವಾರವಾಗಿದ್ದು,  ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ವಾರಗಳ ಕಾಲ ಹಾರಾಡಿದ ಲಾಯರ್ ಜಗದೀಶ್ ಗೆ ಅವರದ್ದೇ ಶೈಲಿಯಲ್ಲಿ ನಿಯಮಗಳ ಬಗ್ಗೆ ತಿಳಿ ಹೇಳಿ, ಇಂಚಿಂಚೂ ಅರ್ಥ ಮಾಡಿಸಿ ಸರಿಯಾಗಿಯೇ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.  

ಕೊನೆಗೆ ಕಾರ್ಯಕ್ರಮದಲ್ಲಿ ಬೇಕುಂತಲೇ ನಾನು ಹಾಗೆ ಮಾಡಿದೆ. ಎಲ್ಲರೂ  ಮುಖವಾಡ ಹಾಕಿಕೊಂಡಿದ್ದಾರೆ ಅದನ್ನು ಕಳಚಲು ಮಾಡಿದೆ ಎಂದು ಲಾಯರ್ ಜಗದೀಶ್ ತಾನು ಮಾಡಿದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ನಟರ ಸ್ವಂತ ಖ್ಯಾತಿ ಬಗ್ಗೆ ಅಪ್ಪು ನೆನೆದು ಆಸಕ್ತಿದಾಯಕ ಹೇಳಿಕೆ ನೀಡಿದ ತೆಲುಗಿನ ನಾಗಾರ್ಜುನ

ಮನೆಯಲ್ಲಿ ಒಂದು ವಾರ ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದು ಮತ್ತು ಕೆಟ್ಪ ಪದ ಬಳಕೆಗಳು ಗಲಾಟೆ ನಡೆಸಿದರ ಸಂಬಂಧ ಲಾಯರ್‌ ಜಗದೀಶ್‌ಗೆ ನಾಜೂಕಾಗಿಯೇ ಸುದೀಪ್ ಕ್ಲಾಸ್ ತೆಗೆದುಕೊಂಡರು.

ನಾನು ಕಾನೂನನ್ನು ಗೌರವಿಸುವವನು, ಕಾನೂನು ಪಾಲನೆ ಮಾಡುವವನು. ನಾನು ಸಿಎಂ ಆಗೋನು ಅಂತೆಲ್ಲಾ ಈ ಮನೆಯಲ್ಲಿ ಹೇಳುತ್ತೀರಲ್ವಾ.  ಬಿಗ್‌ಬಾಸ್ ಮನೆಯಲ್ಲಿ ನಿಯಮ ಮಾಡಿದ್ದಾರೆಂದರೆ ಅದು ಕೂಡ ಒಂದು ಕಾನೂನು. ನೀವು ಅದನ್ನು ಫಾಲೋ ಮಾಡುತ್ತಿಲ್ಲ ಎಂದರೆ ಈ ಬಗ್ಗೆ ಏನು ಹೋಳೋಣ. ಜಗದೀಶ್ ಗೆ ಸುದೀಪ್ ಹೇಳಿದರು.

ಬಿಗ್ ಬಾಸ್ ಕನ್ನಡ: 3 ಮಂದಿ ಸೇಫ್, ಮೊದಲ ವಾರ ಮನೆಯಿಂದ ಹೊರ ಹೋಗೋದ್ಯಾರು?

ಒಬ್ಬ ಸಿಎಂ ಆಗೋರು ಎಲ್ಲಾ ರೀತಿಯ ವ್ಯಕ್ತಿತ್ವದ  ವ್ಯಕ್ತಿಗಳನ್ನು  ನೋಡಲ್ಲ ಎಂದು ಅಂದುಕೊಂಡಿದ್ದೀರಿಯೇ? ನೀವು ಕಾನೂನು ಪಾಲಿಸುವವರು. ಬಿಗ್‌ಬಾಸ್‌ ಮನೆಯಲ್ಲಿ ನಿಯಮಗಳನ್ನು ಫಾಲೋ ಮಾಡದವರು ಕರ್ನಾಟಕ ಸಿಎಂ ಆದ್ರೆ ಹೇಗೆ ರೂಲ್ ಫಾಲೋ ಮಾಡ್ತೀರಾ? ಕ್ರಿಮಿನಲ್‌ ಗೂ ಕ್ರಮಿನಲ್ ಲಾಯರ್‌ ಗೂ ವ್ಯತ್ಯಾಸ ಇದೆ ಸರ್‌ ಎಂದು ಜಗದೀಶ್ ಗೆ ಪ್ರಶ್ನೆ ಹಾಕಿದರು.

ಜೊತೆಗೆ ಕಿಚ್ಚ ಶೋ ಹೇಗೆ ನಡೆಸಿ ಕೊಡೋಣಾ ನೀವು ಹೇಳಿ. ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ, ಲಾಠಿ ತಂದು ಹೊಡೆಯೋಕೆ. ಸ್ಪರ್ಧಿಗಳು ಗೌರವ ಕೊಟ್ಟಿಲ್ಲ ಎಂಬುದು ನಿಮ್ಮ ಮಾತಾದರೆ, ಅವರು  ಗೌರವ ನೀಡಿದ್ದಾರೆ. ಗೌರವ ಕೊಡುತ್ತಿದ್ದಾಗ ಯದ್ವಾ ತದ್ವಾ ಮಾಡಲು ಹೋದರೆ ಸಹಜವಾಗಿ ಅದನ್ನು ಕಳೆದುಕೊಳ್ಳುತ್ತೀರಿ. ಹೆಣ್ಣು ಮಕ್ಕಳ ವಿಚಾರದಲ್ಲಿ ಆ ತರ ಮಾತನಾಡಿದ್ದು ಸರಿ ಇಲ್ಲ ಎಂದು ಕೂಡ ಸುದೀಪ್ ಹೇಳಿದರು.

ಜೊತೆಗೆ ನೀವು ಹೇಳಿ ಕಿಚ್ಚ ಶೋ ಹೇಗೆ ನಡೆಸಿ ಕೊಡೋಣಾ? . ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ, ಲಾಠಿ ತಂದು ಹೊಡೆಯೋಕೆ. ಎಲ್ಲಾ ಹೆಸರು ಮಾಡೋ ವ್ಯಕ್ತಿಗಳು, ದೊಡ್ಡ ದೊಡ್ಡ ವ್ಯಕ್ತಿಗಳು, ನಿಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸುದೀಪ್ ಹೇಳಿದ್ದಕ್ಕೆ ಉತ್ತರಿಸಿದ  ಜಗದೀಶ್, ನಿಮ್ಮದು ಕರೆಕ್ಟ್ ಇದೆ. ನಿಮ್ಮದೇನು ತಪ್ಪಿಲ್ಲ  ಎಂದರು.  ಇದಕ್ಕೆ ಕೌಂಟರ್ ಕೊಟ್ಟ ಕಿಚ್ಚ ಖಡಾಖಂಡಿತವಾಗಿ ಕರೆಕ್ಟ್‌ ಆಗಿದೆ ಇಲ್ಲಾಂದ್ರೆ ನನ್ ಮಗನ್ 11 ನೇ ಸೀಸನ್ ದಾಟುತ್ತಾನೆ ಇರಲಿಲ್ಲ ಎಂದರು,  ಜೊತೆಗೆ ಸೀಸನ್‌ 11 ರಲ್ಲಿ 11 ಇದೆ ಜಗದೀಶ್ ಅವರೇ ಅದರಲ್ಲಿ 1 ನೀವು ಈ ಎರಡು 1+1 ಸೇರಿದ್ರೆ 11 ಅದು ನಾನು ಎಂದು  ಕೌಂಟರ್ ಕೊಟ್ಟರು. ಸ್ಪರ್ಧಿಗಳು ಗೌರವ ಕೊಟ್ಟಿಲ್ಲ ಎಂಬುದು ನಿಮ್ಮ ಮಾತಾದರೆ, ಅವರು  ಗೌರವ ನೀಡಿದ್ದಾರೆ. ಗೌರವ ಕೊಡುತ್ತಿದ್ದಾಗ ಯದ್ವಾ ತದ್ವಾ ಮಾಡಲು ಹೋದರೆ ಸಹಜವಾಗಿ ಅದನ್ನು ಕಳೆದುಕೊಳ್ಳುತ್ತೀರಿ.

ಇನ್ನು ಬಿಗ್‌ಬಾಸ್ ಗೆ ಅವಾಜ್ ಹಾಕಿ ಉಡಾಯಿಸ್ತೀನಿ, ಶೋ ನಡೆಸಲು ಬಿಡಲ್ಲ ಎಂದು ಅವಾಜ್ ಹಾಕಿದ ಬಗ್ಗೆಯೂ ಜಗದೀಶ್ ಅವರನ್ನು ಪ್ರಶ್ನಿಸಿದ ಕಿಚ್ಚ , ಬಿಗ್ಬಾಸ್‌ ಬೇಕು ಅಂತ ನೀವೇ ಒಳಗೆ ಬಂದಿದ್ದು, ಅವರನ್ನೇ  ನೀವು ಕೆಳಗಿಟ್ಟು ಬಿಟ್ರೆ, ಶೋ ನಡೆಸಲು ಬಿಡಲ್ಲ ಎಂದು ಚಾಲೆಂಜ್‌ ಮಾಡಿದ್ರೆ, ಆದ್ರೆ ನೀವು ಕ್ಯಾಮಾರಾ ಮುಂದೆ ಮಾಡಿದ್ದು ತಪ್ಪೇ ಅಲ್ಲ ಸರ್‌,  ಜೋಕು ಅಂತ ನಕ್ಕ ಸುದೀಪ್ ಈ ಜೋಕ್ ಮಾಡೋಕೆ ಯಾರಾದ್ರೂ 11 ವರ್ಷ ಯಾಕೆ ತಕೊಂಡ್ರು ಅಂತ  ನಕ್ಕರು. ಈ ತರದ ವಾರ ನಾವು ಶೋ ಮುಗಿತಾ ಬರುವಾಗ ನೋಡಿದ್ದೇವೆ. ಆದರೆ ಅದನ್ನು ಈ ಸೀಸನ್‌ ನಲ್ಲಿ ಮೊದಲ ವಾರವೇ ನೋಡಿದ್ದೇವೆ ಸರ್‌. ನಿಮ್ಮಲ್ಲಿ ಒಳ್ಳೆಯ ಸಾಮಥ್ಯ ಇದೆ. ಎಲ್ಲವೂ ಇದ್ದರೆ ಚಂದ ಎಂದು ಜಗದೀಶ್ ಬುದ್ದಿ ಹೇಳಿದರು. 

ಬಿಗ್ಬಾಸ್ ಅದ್ಭುತವಾದ ವೇದಿಕೆ, ಅದನ್ನು ಇಂಪ್ರೋ ಮಾಡುವುದು ಬೆಳೆಸುವುದು ನಿಮ್ಮ ಕೈನಲ್ಲಿದೆ.  ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್‌ ಡೈಲಾಗ್ ಹೊಡೆದಾಗ ಇಡೀ ನೆರೆದಿದ್ದವರು ಚಪ್ಪಾಳೆ ಸುರಿಮಳೆಗೈದರು.  

Latest Videos
Follow Us:
Download App:
  • android
  • ios