ಬಿಗ್‌ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ ಜನವರಿ 25 ಮತ್ತು 26 ರಂದು ನಡೆಯಲಿದೆ. ಇದೀಗ ವೈಲ್ಡ್‌ಕಾರ್ಡ್ ಎಂಟ್ರಿ ರಜತ್ ಕಿಶನ್ ಅವರು ಸೇಫ್ ಆಗಿ ಮುಂದಿನ ಸಂಚಿಕೆಗೆ ಕಾಲಿಟ್ಟಿದ್ದಾರೆ. ಭವ್ಯಾ ಅವರು ಎಲಿಮಿನೇಟ್ ಆಗಿದ್ದಾರೆ. ಉಳಿದ ಐವರು ಸ್ಪರ್ಧಿಗಳಾದ ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ, ರಜತ್ ಮತ್ತು ಮಂಜು ಪೈಪೋಟಿಯಲ್ಲಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತಕ್ಕೆ ಬಂದಿದೆ. ಜನವರಿ 25 ಮತ್ತು ಜನವರಿ 26ರಂದು ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. 6 ಮಂದಿ ಪಿನಾಲೆ ರೇಸ್ ನಲ್ಲಿ ಕಪ್ ಹಿಡಿಯಲು ನಿಂತಿದ್ದು, ಮೊದಲನೇ ದಿನ ಓರ್ವ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಐವರು ಮನೆಯೊಳಗಿದ್ದು ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಬರುವವರ್ಯಾರು? ಎಂಬುದು ಕೂತೂಹಲ ಹೆಚ್ಚಿಸಿದೆ. ಇಂದಿನ ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ಭವ್ಯಾ ಗೌಡ ಹೊರಬಂದರು. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ ಅವರು ಔಟ್ ಆಗಿ ಹೊರ ಬಂದಿದ್ದಾರೆಂದು ಎಂದು ಸುದ್ದಿಯಾಗಿತ್ತು ಆದರೆ ಅವರು ಮುಂದಿನ ಸಂಚಿಕೆಗೆ ಕಾಲಿಟ್ಟಿದ್ದಾರೆ. ಈ ಮೂಲಕ ಟ್ರೋಫಿ ಪಡೆದುಕೊಳ್ಳುವ ರೇಸ್ ನಲ್ಲಿ ಇನ್ನೂ ಕೂಡ ರಜತ್ ಇರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
BBK 11: ಪೋಸ್ಟರ್ ರಿಲೀಸ್ ಮಾಡಿ ʼಬಿಗ್ ಬಾಸ್ʼ ವಿಜೇತರ ಹೆಸರನ್ನು ಕ್ರಮವಾಗಿ ಹೇಳಿತಾ ವಾಹಿನಿ?
ವೈಲ್ಡ್ ಕಾರ್ಡ್ ಎಂಟ್ರಿಯಾಗಿ 50 ದಿನ ಕಳೆದ ಬಳಿಕ ಮನೆಗೆ ಕಾಲಿಟ್ಟ ರಜತ್ ಅದ್ಭುತ ಆಟವಾಡಿ ಪ್ರೇಕ್ಷಕರ ಮನ ಗೆದ್ದಿದ್ದರು. ಮನೆಯವರಿಗೆ ಸಖತ್ ಪೈಪೋಟಿ ನೀಡಿರುವ ರಜತ್ ಫಿನಾಲೆಯವರೆಗೆ ಬಂದಿರುವುದೇ ಒಂದು ಆಶ್ಚರ್ಯ. ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವ ಸ್ಪರ್ಧಿ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಟದ ಕೊನೆಯ ಹಂತದವರೆಗೆ ಬಂದಿರುವ ಉದಾಹರಣೆ ಇಲ್ಲ. ರಜತ್ ಅವರ ಆಟವನ್ನು ನೋಡಿ ಬಿಗ್‌ಬಾಸ್ ಆರಂಭವಾಗುವ ಮೊದಲ ದಿನದಿಂದಲೇ ರಜತ್ ಇರಬೇಕಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು.
ಇದೀಗ ರಜತ್ ಅವರು ಕೂಡ 50 ಲಕ್ಷ ರೇಸ್ ನಲ್ಲಿ ಮುಂದುವರೆಯಲಿದ್ದು, ಯಾರು ಬಿಗ್ಬಾಸ್ 11ರ ಪಟ್ಟದ ಅರಸನಾಗುತ್ತಾರೆ ಎಂಬುದಕ್ಕೆಲ್ಲ ಸ್ಪಷ್ಟನೆ ನಾಳೆ ಸಂಜೆ 6 ಗಂಟೆಗೆ ಆರಂಭವಾಗುವ ಬಿಗ್‌ಬಾಸ್ ಫಿನಾಲೆ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ತಿಳಿದು ಬರಲಿದೆ.
Bigg Boss: ಯಾವುದೇ ಭಾಷೆಯ ಬಿಗ್ ಬಾಸ್ ಆಗಲೀ ಸ್ಪರ್ಧಿಗಳ ಈ ಆಸೆ ಮಾತ್ರ ನೆರವೇರೋಲ್ಲ! ಏನದು?
ಭವ್ಯಾ ಗೌಡ ಅವರು 5th ರನ್ನರ್ ಅಪ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಹನುಮಂತ,ತ್ರಿವಿಕ್ರಮ್, ಮೋಕ್ಷಿತಾ , ರಜತ್, ಮಂಜು 50 ಲಕ್ಷದ ರೇಸ್ ನಲ್ಲಿ ಉಳಿದಿದ್ದಾರೆ. ಆದರೆ ಇಂದಿನ ಎಪಿಸೋಡ್ ನಲ್ಲಿ ಒಬ್ಬರು ಮಾತ್ರ ಹೊರ ಬಂದಿದ್ದು, ನಾಳಿನ ಸಂಚಿಕೆಯಲ್ಲಿ ಯಾರು ಮೊದಲು ಹೊರಬರಲಿದ್ದಾರೆ ಎಂಬ ಸ್ಪಷ್ಟನೆ ಸಿಗಲಿದೆ.
