ಗೌತಮಿ ದೂರ ಇಟ್ಟರೂ ಹಿಂದೆ ಹೋಗುತ್ತಿರುವ ಮಂಜು, ಕಿಚ್ಚನ ಮಾತು ಅರ್ಥವೇ ಆಗ್ತಿಲ್ವ?

ಬಿಗ್‌ಬಾಸ್‌ ಕನ್ನಡ 11ರಲ್ಲಿ ಉಗ್ರಂ ಮಂಜು ಮತ್ತು ಗೌತಮಿ ನಡುವಿನ ಸ್ನೇಹಕ್ಕೆ ಬಿರುಕು ಮೂಡಿದೆ. ಗೌತಮಿ ಮಂಜು ಅವರ ಸ್ನೇಹದಿಂದ ದೂರ ಸರಿಯುತ್ತಿದ್ದಾರೆ, ಆದರೆ ಮಂಜು ಇನ್ನೂ ಸ್ನೇಹವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

bigg Boss Kannada 11 gouthami jadav neglecting friendship with ugram manju gow

ಬಿಗ್‌ಬಾಸ್‌ ಕನ್ನಡ 11ರಲ್ಲಿ ಉಗ್ರಂ ಮಂಜು ಟಾಸ್ಕ್ ಮಾಸ್ಟರ್ ಅಂತಾನೇ ಫೇಮಸ್‌, ಟಾಪ್‌ 5ರಲ್ಲಿ ಮಂಜು ಇರುವುದು ಪಕ್ಕಾ ಎಂಬ ಮಾತಿದೆ. ಮಂಜು ಅಂದರೆ ಆಟಕ್ಕೂ ಸೈ, ಜಗಳಕ್ಕೂ ಸೈ. ಇದರ ನಡುವೆ ಅವರದ್ದು ಟ್ರಯಾಂಗಲ್‌ ಸ್ನೇಹ ಇತ್ತು. ಮಂಜು, ಗೌತಮಿ ಮತ್ತು ಮೋಕ್ಷಿತಾ ಅದರಲ್ಲಿದ್ದರು. ಆದರೆ ಈಗ ಮೋಕ್ಷಿತಾ ಆ ಗೆಳೆತನದಿಂದ ಹೊರಬಂದು ಒಂಟಿಯಾಗಿ ಆಡುತ್ತಿದ್ದಾರೆ. 

ಗೌತಮಿ ಮತ್ತು ಮಂಜು ಈಗಲೂ ಉತ್ತಮ ಸ್ನೇಹಿತರು. ಆದರೆ ಗೌತಮಿ ಯಾವಾಗ ಮನೆಯ ಕ್ಯಾಪ್ಟನ್ ಆದರೋ ಅಲ್ಲಿಂದ ಅವರಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಮಂಜು ತಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಮಾತ್ರವಲ್ಲ ತನ್ನ ಮೇಲೆ ಕೂಡ ಹೇರುತ್ತಾರೆ ಎಂಬುದು ಈಗ ಗೌತಮಿಗೆ ಅನಿಸಿದೆ. ಈ ಹಿನ್ನೆಲೆಯಲ್ಲಿ ಗೆಳತನವನ್ನು ಕೊನೆಗೊಳಿಸಬೇಕೆಂಬುದು ಗೌತಮಿಯ ಯೋಚನೆ. ಆದ್ರೆ ಮಂಜುಗೆ ಗೌತಮಿ ಜೊತೆಗಿನ ಸ್ನೇಹವನ್ನು ಮುರಿದುಕೊಳ್ಳಲು ಇಷ್ಟವಿಲ್ಲ.

ಖ್ಯಾತ ಕನ್ನಡ ನಟನ ಬಾಡಿಗಾರ್ಡ್ ಇಂದು ದಕ್ಷಿಣದ ಫೇಮಸ್‌ ವಿಲನ್!

ಹೀಗಾಗಿ ಉಗ್ರಂ ಮಂಜು ತಮ್ಮ ವೈಯಕ್ತಿಕ ಆಟ ಮರೆದಿದ್ದಾರೆ. ಸ್ವಾಭಿಮಾನವನ್ನೂ ಬದಿಗಿಟ್ಟು ಗೌತಮಿಯ ಹಿಂದೆ ಹೋಗಿ ಮಾತನಾಡುತ್ತಾರೆ. ಆದರೆ ಗೌತಮಿ ಜಾದವ್‌ಗೆ ಈಗ ಮಂಜು ಸ್ನೇಹ ಬೇಡವೇ ಬೇಡ, ಹೀಗಾಗಿ ಅಂತ ಕಾಯ್ದುಕೊಳ್ಳುತ್ತಿದ್ದಾರೆ.ನನ್ನ ಹಿಂದೆ ಬರಬೇಡಿ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಪಕ್ಕ ಕೂರುವುದೇ ನನಗೆ ದೊಡ್ಡ ಸಮಸ್ಯೆ ಎಂದೆಲ್ಲ ಹೇಳುತ್ತಿದ್ದರೂ ಮಂಜು ಮಾತ್ರ ಗೆಳತಿ, ಗೆಳತಿ ಎಂದು ಕೊಂಡೇ ಗೌತಮಿ ಜೊತೆಗಿರುತ್ತಾರೆ

ಕಳೆದ 1 ವಾರದಿಂದ ಗೌತಮಿ ಜಾದವ್​ ಅವರು ಮಂಜುಗೆ ಎಚ್ಚರಿಕೆ  ಕೊಡುತ್ತುಲೇ ಬಂದಿದ್ದಾರೆ. ದಯವಿಟ್ಟು ದೂರ ಹೋಗಿ ಎಂದು ಮಂಜುಗೆ ನೇರವಾಗಿ ಹೇಳುತ್ತಿದ್ದಾರೆ. ಆದರೂ ಮಂಜು ಬದಲಾಗಿಲ್ಲ.  ಇದನ್ನೆಲ್ಲ ನೋಡಿದ ಜನಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೂಲ್ ಮಾಡುತ್ತಿದ್ದಾರೆ. ‘ಗೌತಮಿಯನ್ನು ಮೆಚ್ಚಿಸುತ್ತೇನೆ’ ಎಂದು ಮಂಜು ಹೇಳಿದ್ದಾಗಲೇ ಸುದೀಪ್ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲ ಪ್ರತೀ ವೀಕೆಂಡ್‌ ಎಪಿಸೋಡ್ ನಲ್ಲಿ ಉಗ್ರಂ ಮಂಜುಗೆ ಓರೆಯಲ್ಲಿ ಎಚ್ಚರಿಕೆ ಕೊಡುತ್ತಿದ್ದರು. ಸಂಬಂಧ, ಸ್ನೇಹದ ಬಗ್ಗೆ ಎಲ್ಲಾ ಸ್ಪರ್ಧಿಗಳು ತಿಳಿ ಹೇಳುತ್ತಿದ್ದ ಕಿಚ್ಚ ಮಂಜುಗೆ ಸ್ವಲ್ಪ ಹೆಚ್ಚಾಗಿ ಹೇಳಿದರೂ ಅದು ಅವರ ಗಮನಕ್ಕೆ ಬಂದಿಲ್ಲ. ಕಿಚ್ಚನ ಬುದ್ದಿವಾದದ ನಂತರವೂ ಮಂಜು ಯಾಕೋ ಸರಿದಾರಿಗೆ ಬಂದಂತೆ ಕಾಣುತ್ತಿಲ್ಲ.

ಪ್ರಭಾಸ್ 'ರಾಜಾ ಸಾಬ್' ಸಿನೆಮಾ ಬಿಡುಗಡೆ ಮುಂದಕ್ಕೆ, ಚಿತ್ರ ಲೇಟ್ ಆಗುತ್ತಿರುವುದಕ್ಕೆ ಕಾರಣ ಏನು?

ಗೌತಮಿ ಎಷ್ಟೇ ದೂರ ಇಟ್ಟರೂ, ಬೈದರೂ, ವಾರ್ನಿಂಗ್ ಕೊಟ್ಟರೂ ಸ್ವಾಭಿಮಾನ ಇಲ್ಲದವರ ರೀತಿ ಮಂಜು ಹಿಂದೆಯೇ ಹೋಗುತ್ತಿರುವುದ್ನು  ನೋಡಿ ವೀಕ್ಷಕರಿಗೂ ಇದ್ಯಾಕೋ ಸರಿ ಎನಿಸುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಟ್ರೂಲ್ ಪೇಜ್‌ಗಳು ಕೂಡ ಇವರ ಗೆಳೆತನದ ಮೇಲೆ ಕಣ್ಣಿಟ್ಟಿವೆ ಮಾತ್ರವಲ್ಲ ತಾವು ಪಾಸಿಟಿವಿಟಿ ಎಂದು ಹೇಳಿಕೆ ನೀಡುತ್ತಿದ್ದ ಗೌತಮಿಯ ಇನ್ನೊಂದು ರೂಪ ಹಿಂದಿನ ಎಪಿಸೋಡ್‌ಗಳಲ್ಲಿ ಬೆಳಕಿಗೆ ಬಂದಿದೆ. ಹಳೆ ಎಪಿಸೋಡ್‌ ನಲ್ಲಿ ರಜತ್ ಜೊತೆಗೆ ಗಲಾಟೆ ಮಾಡಿದಾಗ ಗೌತಮಿಯ ಇನ್ನೊಂದು ಮುಖ ಕೂಡ ಬಯಲಾಗಿದೆ. ಪಾಸಿಟಿವಿಟಿ ಎಂದು ಹೇಳುತ್ತಿದ್ದ ಗೌತಮಿ ಪಾಸಿಟಿವ್‌ ಆಗಿ ಅಂದು ತೆಗೆದುಕೊಳ್ಳದೆ ಬಾರೀ ಗಲಾಟೆ ಮಾಡಿದ್ದರು. ಈ ವಾದ ವೀಕೆಂಡ್‌ ನಲ್ಲಿ ಇವೆಲ್ಲ ಹೊರಗಡೆ ಬರುತ್ತಾ ಎಂಬುದು ಕಾದು ನೋಡಬೇಕು.

Latest Videos
Follow Us:
Download App:
  • android
  • ios