ಬಿಗ್‌ಬಾಸ್‌ನಲ್ಲಿ ಡಬಲ್ ಎಲಿಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ. ಶನಿವಾರ ಗೌತಮಿ ಜಾಧವ್‌ ಹೊರ ನಡೆದಿದ್ದಾರೆ. ಭಾನುವಾರ ಧನ್‌ರಾಜ್‌ ಹೊರ ಹೋಗುವ ಸಾಧ್ಯತೆ ಇದೆ. ಹನುಮಂತ, ತ್ರಿವಿಕ್ರಮ್‌ ಮತ್ತು ಮೋಕ್ಷಿತಾ ಈಗಲೇ ಫಿನಾಲೆ ತಲುಪಿದ್ದಾರೆ. ಬಿಗ್‌ಬಾಸ್‌ ಸೀಸನ್ 11 ವಿಜೇತರ ಟ್ರೋಫಿಯನ್ನು ಅನಾವರಣಗೊಳಿಸಲಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ ಘೋಷಣೆ ಮಾಡಲಾಗಿತ್ತು. ಆದರೆ ಅನೀರಿಕ್ಷಿತ ಕಾರಣಗಳಿಂದ ಬಳಿಕ ಅದನ್ನು ರದ್ದು ಮಾಡಿ ಡಬಲ್ ಎಲಿಮಿನೇಶನ್‌ ಗೆ ಹಾಕಲಾಗಿತ್ತು. ಅದರಂತೆ ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಓರ್ವ ಸ್ಪರ್ಧಿಯನ್ನು ಹೊರ ಕಳಿಸಿಲಾಗಿದ್ದು, ಎರಡನೇ ಸ್ಪರ್ಧಿ ಭಾನುವಾರದ ಎಪಿಸೋಡ್ ನಲ್ಲಿ ಎಲಿಮಿನೇಟ್‌ ಆಗಿ ಹೊರಹೋಗಲಿದ್ದಾರೆ.

ಅದರಂತೆ ಶನಿವಾರದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಗೌತಮಿ ಜಾಧವ್‌ ಅವರು ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಗೌತಮಿ, ಮಂಜು, ರಜತ್, ಭವ್ಯಾ, ಧನ್‌ರಾಜ್‌ ಐದು ಮಂದಿ ನಾಮಿನೇಟ್‌ ಆಗಿದ್ದರು. ಮೋಕ್ಷಿತಾ, ತ್ರಿವಿಕ್ರಮ್‌ ಮತ್ತು ಹನುಮಂತು ಪಿನಾಲೆ ವಾರದಲ್ಲಿದ್ದಾರೆ.

BBK 11: ಬಿಗ್‌ ಬಾಸ್‌ ಟ್ರೋಫಿ ಗೆಲ್ಲೋರು ಯಾರು? ರನ್ನರ್‌ ಅಪ್‌ ಯಾರು? ಸಾಧ್ಯಾ ಸಾಧ್ಯತೆ ಹೀಗಿದೆ!

ಇನ್ನು ನಾಳಿನ ಎಪಿಸೋಡ್‌ ಸೂಪರ್‌ ಸಂಡೇ ವಿಥ್ ಬಾದ್‌ ಶಾ ಸುದೀಪ ಕಾರ್ಯಕ್ರಮದಲ್ಲಿ ಧನ್‌ರಾಜ್ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ನಾಳಿನ ಸಂಚಿಕೆಯಲ್ಲಿ ಯಾರು ಹೊರಹೋಗಿದ್ದಾರೆ ಎಂಬ ಸ್ಪಷ್ಟತೆ ಸಿಗಲಿದೆ.

ಇನ್ನು ಇಂದಿನ ಸಂಚಿಕೆಯಲ್ಲಿ ಬಿಗ್‌ಬಾಸ್‌ ಸೀಸನ್ 11 ವಿನ್ನರ್‌ ಪಡೆಯುವ ಕಪ್‌ ಅನಾವರಣವಾಗಿದೆ. ಹಾರುವ ರೆಕ್ಕೆಯ ಮಧ್ಯೆ ಬಿಬಿಕೆ11 ಸೀಸನ್‌ ನ ಕಣ್ಣಿನ ಲೋಗೋ ಮಾಡಿ ಅದ್ಭುತವಾಗಿ ಡಿಸೈನ್‌ ಮಾಡಲಾಗಿದೆ.

ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಿದ್ದರೆ ಗ್ರ್ಯಾಂಡ್‌ ಫಿನಾಲೆ ವಾರಕ್ಕೆ ಒಟ್ಟು ಆರು ಮಂದಿ ಉಳಿಯುತ್ತಾರೆ. ಈಗಾಗಲೇ ಹನುಮಂತ, ತ್ರಿವಿಕ್ರಮ್‌, ಮೋಕ್ಷಿತಾ ನೇರವಾಗಿ ಫಿನಾಲೆ ಪ್ರವೇಶ ಪಡೆದಿದ್ದಾರೆ. ಇಂದಿನ ವಾರದಲ್ಲಿ ಯಾರು ಸೇಫ್‌ ಆಗಿ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಎಂಬುದನ್ನು ನಾಳಿನ ಸಂಚಿಕೆಯವರೆಗೆ ಕಾದು ನೋಡಬೇಕಿದೆ.

ತಮಿಳು ಬಿಗ್ ಬಾಸ್ ನಲ್ಲಿ ಟ್ವಿಸ್ಟ್: ರಿಸಲ್ಟ್ ತಲೆಕೆಳಗೆ! ವಿನ್ನರ್‌ ಯಾರೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ!

ಇನ್ನು ಕಿಚ್ಚ ಸುದೀಪ್ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಮೂಡಿರುವ ಬಿರುಕು ಬಗ್ಗೆ ಪ್ರಶ್ನಿಸಿದರು. ತ್ರಿವಿಕ್ರಮ್ ಅವರು ನೀನು ನನ್ನ ಬಳಸಿಕೊಂಡು ಇಲ್ಲಿವರೆಗೂ ಬಂದಿದ್ದೀಯ ಎಂದು ಭವ್ಯಾಗೆ ಹೇಳಿದ್ದು ಬೇಸರ ಉಂಟುಮಾಡಿತ್ತು. ಇದರ ಬಗ್ಗೆ ಚರ್ಚೆ ನಡೆದಿದೆ.

ಈ ವೇಳೆ ಮಾತನಾಡಿದ ಭವ್ಯಾ, ‘ಖಂಡಿತ ನಾನು ಬಳಸಿಕೊಂಡಿಲ್ಲ. ನನ್ನ ಆಟ ನಾನು ಆಡಿಕೊಂಡು ಇಲ್ಲಿ ವರೆಗೆ ಬಂದಿದ್ದೀನಿ’ ಎಂದರು. ಇದೇ ವಿಚಾರವಾಗಿ ಮಾತನಾಡಿದ ತ್ರಿವಿಕ್ರಮ್ ಹಿಂದೆ ನಡೆದ ಟಾಸ್ಕ್‌ನ ಉದಾಹರಣೆ ಕೊಟ್ಟು, ಪ್ರತಿ ಕ್ಯಾಪ್ಟನ್ ಆಯ್ಕೆ ಬಂದಾಗ ನನ್ನ ಹೆಸರು ತಗೊಂಡಿದ್ದಾರೆ. ನನ್ನ ಜೊತೆ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ನನ್ನ ಜೊತೆಗೆ ಇದ್ದರು, ಭಾವನಾತ್ಮಕ ಬೆಂಬಲ ಕೊಟ್ಟಿದ್ದಾರೆ. ಇಷ್ಟು ದಿನ ಮಾಡಿ ಕೊನೆಯ ಆಟಕ್ಕೆ ಬಂದಾಗ ನನಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ನನ್ನನ್ನು ಆಯ್ಕೆ ಮಾಡಲಿಲ್ಲ. ಟಾಸ್ಕ್​ನಲ್ಲಿ ಮೋಕ್ಷಿತಾ ಜೊತೆ ಮಾತನಾಡಿದ ವಿಷಯ ನನಗೆ ಹೇಳಬಹುದಿತ್ತು, ಎಂಡ್​ಗೇಮ್ ಬಂದಾಗ ಹೀಗೆ ಆಡುವುದು ಸರಿಯಲ್ಲ. ಹಾಗಾಗಿ ನೀವು ನನ್ನನ್ನು ಬಳಸಿಕೊಂಡಿರಿ ಎಂದು ಹೇಳಿದೆ’ ಎಂದರು.

ಇದಕ್ಕೆ ಮಾತನಾಡಿದ ಭವ್ಯಾ ಟಾಸ್ಕ್​ನ ಒಂದು ರೌಂಡ್ ಆದ ಬಳಿಕವೇ ನಮಗೆ ಹೀಗೊಂದು ಸ್ಟ್ರಾಟಜಿ ಮಾಡಬಹುದು ಎಂದು ಗೊತ್ತಾಗಿದ್ದು, ಹಾಗಾಗಿ ನಾನು ಆ ಸ್ಟ್ರಾಟಜಿ ಮಾಡಿದೆ. ಅಲ್ಲದೆ ಅದೇ ಟಾಸ್ಕ್​ನಲ್ಲಿ ಮೂರನೇ ರೌಂಡ್​ನಲ್ಲಿ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿದೆ ಸಹ’ ಎಂದರು ಭವ್ಯಾ. ಈ ಚರ್ಚೆಯ ವೇಳೆ ಭವ್ಯಾ ಗೌಡ ಕಣ್ಣೀರು ಸಹ ಹಾಕಿದರು. 

ಇಬ್ಬರ ಅಭಿಪ್ರಾಯ ಕೇಳಿದ ಕಿಚ್ಚ ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಅನವಶ್ಯಕ ಸಂಬಂಧ ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು. ಸಂಬಂಧ ಬೆಳೆಸಿಕೊಂಡಾಗ ಸಹಜವಾಗಿಯೇ ನಿರೀಕ್ಷೆಗಳು ಹುಟ್ಟುತ್ತವೆ, ಆ ನಿರೀಕ್ಷೆಗಳು ಫುಲ್​ಫಿಲ್ ಆಗದಾಗ ಸಹಜವಾಗಿಯೇ ಬಿರುಕು ಮೂಡುತ್ತದೆ. ಆಟದ ಮೇಲಕೂ ಪರಿಣಾಮ ಬೀರುತ್ತದೆ ಎಂದರು.